Monday, January 20, 2025
Homeಟಾಪ್ ನ್ಯೂಸ್ತವರಿಗೆ ಮರಳಿದ ಸಿದ್ದು : ವರುಣಾದಿಂದಲೇ ಸ್ಪರ್ಧಿಸಲು ತೀರ್ಮಾನ

ತವರಿಗೆ ಮರಳಿದ ಸಿದ್ದು : ವರುಣಾದಿಂದಲೇ ಸ್ಪರ್ಧಿಸಲು ತೀರ್ಮಾನ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರ ಗೊಂದಲದಲ್ಲಿ ಸಿಲುಕಿ ಈ ವರೆಗೂ ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ರೆ ಸೇಫ್ ಅಂತ ಲೆಕ್ಕಾಚಾರ ಹಾಕುತ್ತಲೇ ಇದ್ರು.. ಇಂದು ಈ ಕುರಿತು ಅಧಿಕೃತ ಘೋಷಣೆ ಮಾಡಿರುವ ಸಿದ್ದರಾಮಯ್ಯ ಮೈಸೂರಿನ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸೋದಾಗಿ ಹೇಳಿದ್ದಾರೆ.

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಕೊನೆಗೂ ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಕೊನೆಗೂ ಕ್ಷೇತ್ರ ಆಯ್ಕೆ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಕಳೆದ ಎರಡು ತಿಂಗಳಿಂದ ಸಿದ್ದರಾಮಯ್ಯ ಕ್ಷೇತ್ರದ ಆಯ್ಕೆ ವಿಷಯ ಕರ್ನಾಟಕ ರಾಜಕಾರಣದಲ್ಲ ಬಹುಚರ್ಚಿತ ಸಂಗತಿಯಾಗಿತ್ತು. ಈ ಮುನ್ನ ಕೋಲಾರದಿಂದ ಉಮೇದುವಾರಿಕೆ ಘೋಷಿಸಿದ್ದ ಸಿದ್ದರಾಮಯ್ಯ ಬಳಿಕ ಹಠಾತ್ತಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ವರುಣಾ ಕ್ಷೇತ್ರ ಬಿಟ್ಟು ಬಾದಾಮಿಯಿಂದ ಸ್ಪರ್ಧಿಸಿ ಗೆದ್ದಿದ್ದ ಸಿದ್ದರಾಮಯ್ಯ ಈ ಬಾರಿ ಕೋಲಾರದಿಂದ ಕಣಕ್ಕಿಳಿಯೋದಾಘಿ ಹೇಳಿದ್ರು.. ಆದ್ರೆ ಕೋಲಾರ ಕ್ಷೇತ್ರ ಸಿದ್ದರಾಮ್ಯಗೆ ಸೇಫ್‌ ಅಲ್ಲ ಬೇರೆ ಕ್ಷೇತ್ರ ನೋಡಿಕೊಳ್ಳೋದು ಒಳಿತು ಎಂಬ ಹೈಕಮಾಂಡ್ ಸಲಹೆಯ ಮೇರೆಗೆ ಈಗ ಸಿದ್ದರಾಮಯ್ಯ ವರುಣಾಕ್ಕೆ ವಾಪಸ್ಸಾಗಿದ್ದಾರೆ

ಈ ಬಾರಿ ಕೊಪ್ಪಳ, ಬಾದಾಮಿ, ಕಡೂರು, ವರುಣಾ ಕ್ಷೇತ್ರ ಎಂಬೆಲ್ಲಾ ಊಹಾಪೋಹಗಳು ರಾಜ್ಯಾದ್ಯಂತ ಹರಿದಾಡಿದ್ದವು. ಕಾಂಗ್ರೆಸ್ ಮಹಾನಾಯಕನ ಕ್ಷೇತ್ರ ಅಸ್ಥಿರತೆ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಬಾಯಿಗೆ ಆಹಾರವಾಗಿದ್ದವು. ಕೋಲಾರ ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಹೈಕಮ್ಯಾಂಡ್ ಆದೇಶದಂತೆ ಹಿಂದೆ ಸರಿಯಲಾಗಿತ್ತು ಎಂಬ ಗುಲ್ಲೂ ಸಹ ಕಾಂಗ್ರೆಸ್ ಒಳವಲಯದಿಂದಲೇ ಕೇಳಿಬಂದಿತ್ತು. ಜೊತೆಗೆ ಸಿದ್ದರಾಮಯ್ಯರನ್ನು ಹಣಿಯಲು ಬಿಜೆಪಿ, ಜೆಡಿಎಸ್ ಜೊತೆಗೆ ಕಾಂಗ್ರೆಸ್ ಅತೃಪ್ತ ನಾಯಕರೂ ಸಹ ಕೈಜೋಡಿಸಿದ್ದಾರೆಂಬ ಸುದ್ದಿಯಿಂದ ಸಿದ್ದರಾಮಯ್ಯ ವಿಚಲಿತರಾದಂತೆ ಕಂಡುಬಂದಿತ್ತು. ಎರಡು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದು ಖಚಿತ ಎಂಬಂತಿದ್ದ ಪರಿಸ್ಥಿತಿ ಕೊನೆಕೊನೆಗೆ ಸಿದ್ದರಾಮಯ್ಯ ಈ ಬಾರಿ ಚುನಾವಣೆಯಿಂದಲೇ ಹಿಂದೆ ಸರಿಯಲಿದ್ದಾರೆ ಎಂಬುವವರೆಗೂ ಬಂದಿತ್ತು. ಈ ಎಲ್ಲಾ ಸುದ್ದಿಗಳಿಗೂ ತೆರೆಯೆಳೆದಿರುವ ಸಿದ್ದರಾಮಯ್ಯ ಕೊನೆಗೂ ತಮ್ಮ ಉಮೇದುವಾರಿಕೆಯನ್ನು ವರುಣಾದಿಂದ ಘೋಷಿಸಿದ್ದಾರೆ

ಹೆಚ್ಚಿನ ಸುದ್ದಿ

error: Content is protected !!