Saturday, January 25, 2025
Homeಟಾಪ್ ನ್ಯೂಸ್ಆರ್‌ಎಸ್‌ಎಸ್, ಹಿಂದೂ ಮಹಾಸಭಾ ಹಿಟ್ಲರ್, ಮುಸಲೋನಿ ವಂಶ

ಆರ್‌ಎಸ್‌ಎಸ್, ಹಿಂದೂ ಮಹಾಸಭಾ ಹಿಟ್ಲರ್, ಮುಸಲೋನಿ ವಂಶ

ಕೋಲಾರ: ದೇಶದಲ್ಲಿರುವ ಆರ್‌ಎಸ್‌ಎಸ್ ಹಾಗೂ ಹಿಂದೂ ಮಹಾಸಭಾದವರು ಜರ್ಮನಿಯ ಹಿಟ್ಲರ್ ಹಾಗೂ ಇಟಲಿಯ ಮುಸಲೋನಿ ವಂಶಸ್ಥರು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ನೇತೃತ್ವದಲ್ಲಿ ಏ.9ರಂದು ನಡೆಯಲಿರುವ ‘ಜೈ ಭಾರತ್’ ಸಮಾವೇಶ ಆಯೋಜನೆಗೆ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದ ಜನರಲ್ಲಿ ಬೆದರಿಕೆ ಹುಟ್ಟಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ರಾಹುಲ್ ಅವರಿಗೇ ಈ ರೀತಿ ಮಾಡಿದ ಮೇಲೆ ಉಳಿದವರ ವಿಚಾರದಲ್ಲಿ ಸುಮ್ಮನಿರುತ್ತಾರಾ? ಎಂದರು.

‘ಬಿಜೆಪಿಗೆ ಯಾವತ್ತೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಬಿಜೆಪಿ ಯಾವಾಗಲೂ ಒಂದು ದೇಶ, ಒಂದು ನಾಯಕತ್ವ, ಒಂದು ಭಾಷೆ ಮೇಲೆ ಮಾತ್ರ ನಂಬಿಕೆ ಇಟ್ಟಿದೆ ಎಂದು ಟೀಕಿಸಿದರು.

‘ರಾಹುಲ್ ಗಾಂಧಿ ಹೇಳಿರುವುದರಲ್ಲಿ ತಪ್ಪೇನಿದೆ? ಲಲಿತ್ ಮೋದಿ, ನೀರವ್ ಮೋದಿ ಓಡಿ ಹೋಗಿಲ್ಲವೇ? ದೇಶದ ದುಡ್ಡನ್ನು ಲೂಟಿ ಮಾಡಿದವನಿಗೆ ಏನೆಂದು ಕರೆಯಬೇಕು? ಸಾಧು, ಸಂತರು, ರಾಷ್ಟ್ರಭಕ್ತ ಎಂದು ಕರೆಯಬೇಕೇ’ ಎಂದು ಪ್ರಶ್ನಿಸಿದರು.

ಹೆಚ್ಚಿನ ಸುದ್ದಿ

error: Content is protected !!