ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವ್ರಿಗೆ (CM Siddaramaiah) ನಾನಾ ಹೆಸರುಗಳಿವೆ. ಕನ್ನಡ ರಾಮಯ್ಯ, ಅನ್ನರಾಮಯ್ಯ ಹೀಗೆ ನಾನಾ ಹೆಸರುಗಳಲ್ಲಿ ಅಭಿಮಾನಿಗಳು (Followers) ಕರೆಯುತ್ತಾರೆ. ಅದರ ಜೊತೆಗೆ ‘ಅಹಿಂದ ರಾಮಯ್ಯ’ ಎಂಬ ಹೆಸರು ಕೂಡಾ ಸಿದ್ದರಾಮಯ್ಯಗಿದೆ. ಸಿದ್ದರಾಮಯ್ಯರನ್ನು ಕೆಳಗಿಳಿಸಿದರೆ (CM Change row) ಅಹಿಂದ ವರ್ಗ ಕೆರಳುತ್ತೆ ಎಂಬ ಭಯ ಹೈಕಮಾಂಡ್ (Highcommand) ಗೆ ಮೊದಲಿನಿಂದಲೂ ಇದೆ. ಆ ಮಾತು ಸತ್ಯವಾಗುವಂತೆ ಕಾಣುತ್ತಿದೆ.
ಸಿಎಂ ಸಿದ್ದರಾಮಯ್ಯ ಪರ ನಿಂತಿರೋ ಅಹಿಂದ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿವೆ. ಅಹಿಂದ ಸಂಘಟನೆ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಿಣಿ ಸಂದೇಶದ ಬೆನ್ನಲ್ಲೇ ಹೋರಾಟಕ್ಕೆ ಸಿದ್ಧತೆ ನಡೆಯುತ್ತಿವೆ.
ಇದನ್ನೂ ಓದಿ : ಹೈಕಮ್ಯಾಂಡು ಹೇಳಿದಂತೆ ಕೇಳುವೆ ನಾನು – ಅಧಿಕಾರ ಹಸ್ತಾಂತರದ ಬಗ್ಗೆ ಸಿಎಂ ಪ್ರತಿಕ್ರಿಯೆ!
ಸಿದ್ದರಾಮಯ್ಯರನ್ನೇ 5 ವರ್ಷವೂ ಸಿಎಂ ಎಂದು ಘೋಷಿಸಿ :
ಸಿದ್ದರಾಮಯ್ಯ ಅವರನ್ನೇ 5 ವರ್ಷವೂ ಸಿಎಂ ಎಂದು ಘೋಷಣೆ ಮಾಡಿ ಎಂದು ಮೈಸೂರಿನ ಅಹಿಂದ ಸಂಘಟನೆಗಳು ಪತ್ರ ಚಳುವಳಿ ಶುರು ಮಾಡಿದ್ವು. ರಾಹುಲ್ ಗಾಂಧಿಗೆ ಪತ್ರ ಅಹಿಂದ ಸಂಘಟನೆಗಳು ಪತ್ರ ಬರೆದು ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದವು.
ಸಿದ್ದು ಅಹಿಂದ ಬಲ :
ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಪದೇ ಪದೇ ಕೂಗಿ ಕೂಗಿ ಹೇಳಿದ್ರು. ಅದು ಕಾಂಗ್ರೆಸ್ನಲ್ಲಿರುವ ವಿರೋಧಿಗಳಿಗೂ, ಹೈಕಮಾಂಡ್ಗೂ ಮನತಟ್ಟುವಂತೆ ಮಾಡಿತ್ತು. 5 ವರ್ಷ ನನ್ನನ್ನು ಮುಟ್ಟಲು ಸಾಧ್ಯವೇ ಇಲ್ಲ ಎಂಬ ಸಂದೇಶ ನೀಡಲು ಅವ್ರ ಹಿಂದಿರೋ ಅಹಿಂದ ವರ್ಗವೇ ಕಾರಣ ಎನ್ನಲಾಗುತ್ತಿದೆ..
ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಉಳಿಯಲು ಹಿಂದುಳಿದವರ ಮತ ಬ್ಯಾಂಕ್ ಪ್ರಮುಖ ಕಾರಣ ಅನ್ನೋದು ಜಗತ್ತಿಗೇ ಗೊತ್ತಿದೆ. ವಿಶೇಷವಾಗಿ ಹಿಂದುಳಿದ ವರ್ಗಗಳ ನಾಯಕತ್ವದ ಕೊರತೆ ಕಾರಣಕ್ಕೆ ಬಿಹಾರದಲ್ಲಿ ಸೋಲಿಂಟಾಗಿದೆ. ಅದೇ ತಪ್ಪು ಕರ್ನಾಟಕದಲ್ಲಿ ಪುನರಾವರ್ತನೆ ಆಗಬಾರದು ಎಂಬ ಆತಂಕ ಹೈಕಮಾಂಡ್ ವಲಯದಲ್ಲಿ ಸ್ಪಷ್ಟವಾಗಿದೆ.
ಸಿದ್ದರಾಮಯ್ಯಗೆ ಅಹಿಂದ ವರ್ಗದ ಬಲ:
ಸಿದ್ದರಾಮಯ್ಯರನ್ನು ಬದಲಿಸಿದರೆ ಹಿಂದುಳಿದ ಮತದಾರರು ದೂರವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಬದಲಾವಣೆ ವಿಚಾರಕ್ಕೆ ಅಸ್ತು ಎಂದಿಲ್ಲ, ಬದಲಿಗೆ ಸಿದ್ದರಾಮಯ್ಯ ಸೇಫ್ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದೆ.
ಡಿಕೆಶಿ ಲೆಕ್ಕ ಬುಡಮೇಲು?
ಅಹಿಂದ ಸಮೀಕರಣ ಮತ್ತು ಸಿದ್ಧರಾಮಯ್ಯ ಬಲವೇ ಡಿಕೆಶಿ ಲೆಕ್ಕಾಚಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಅಹಿಂದ ಅನ್ನೋದೊಂದೆ ಸಿಎಂಗೆ ಬತ್ತಳಿಕೆ ಎಂದು ಪಕ್ಷದ ಕೆಲವರು ಅಭಿಪ್ರಾಯ ಪಟ್ಟಿದ್ದು, ಸಿದ್ಧರಾಮಯ್ಯ ನೇತೃತ್ವವೇ ಪಕ್ಷದ ದೊಡ್ಡ ಶಕ್ತಿ ಎಂದು ಹಿರಿಯರು ಮನಗಂಡಿದ್ದಾರೆ. ಇತ್ತ, ವರಿಷ್ಠ ನಾಯಕರ ಮೌನವಹಿಸಿದ್ದರೂ, ಡಿಕೆಶಿಯ ಆಪ್ತರು ಮಾತ್ರ ಒತ್ತಡ ಹೆಚ್ಚಿಸುತ್ತಿರುವುದರೊಂದಿಗೆ ಪಕ್ಷದ ತಲೆನೋವನ್ನು ಮತ್ತಷ್ಟು ಗಂಭೀರಗೊಳಿಸಿದಂತೆ ಮಾಡಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಪಾರ್ಟಿ ಸಂಪೂರ್ಣ ಅತಂತ್ರ ಪರಿಸ್ಥಿತಿಗೆ ಸಿಲುಕಿದೆ.
ಕೆಲವು ಶಾಸಕರು ಹೈಕಮಾಂಡ್ ಮಾತೇ ಅಂತಿಮ ಎನ್ನುತ್ತಿದ್ದಾರೆ. ಒಂದು ವೇಳೆ ಒಬ್ಬರ ಒಬ್ಬರ ಪರ ನಿಂತ್ರೆ ಇನ್ನೊಬ್ಬರ ಕೆಂಗಣ್ಣಿಗೆ ಗುರಿಯಾಗ್ತೀವಿ ಎಂಬ ಭಯ ಶಾಸಕರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಬಹುತೇಕ ಶಾಸಕರು ತಟಸ್ಥವಾಗಿದ್ದಾರಂತೆ.