Monday, November 4, 2024
Homeಟಾಪ್ ನ್ಯೂಸ್ಸಿದ್ದರಾಮಯ್ಯರಿಗೆ ʼಕ್ಷೇತ್ರ ಭಾಗ್ಯʼವೇ ಇಲ್ಲ: ಪ್ರತಾಪ ಸಿಂಹ

ಸಿದ್ದರಾಮಯ್ಯರಿಗೆ ʼಕ್ಷೇತ್ರ ಭಾಗ್ಯʼವೇ ಇಲ್ಲ: ಪ್ರತಾಪ ಸಿಂಹ

ಸಿದ್ದರಾಮಯ್ಯ ಅವರು ಸ್ಪರ್ಧಿಸಲಿರುವ ಕ್ಷೇತ್ರದ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಯಾಗಿದ್ದು, ಪ್ರತಿಪಕ್ಷಗಳು ಇದೇ ವಿಚಾರ ಇಟ್ಟುಕೊಂಡು ಕಾಂಗ್ರೆಸ್‌ ಕಾಲೆಳೆಯುತ್ತಿದ್ದಾರೆ. ʼಎಲ್ಲಾ ಭಾಗ್ಯಗಳನ್ನು ಕೊಟ್ಟೆ ಎನ್ನುವ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಭಾಗ್ಯವೇ ಇಲ್ಲʼ ಎಂದು ಸಂಸದ ಪ್ರತಾಪಸಿಂಹ ಲೇವಡಿ ಮಾಡಿದ್ದಾರೆ.

ಕ್ಷೇತ್ರವನ್ನು ಹುಡುಕಿಕೊಳ್ಳಬೇಕಾದ ಸ್ಥಿತಿ ಸಿದ್ದರಾಮಯ್ಯನವರಿಗೆ ಬಂದಿದೆ ಎಂದರೆ, ಅವರ ಈ ಭಾಗ್ಯಗಳಿಗೆ ಜನರು ಯಾವುದೇ ಬೆಲೆ ಕೊಟ್ಟಿಲ್ಲ ಎಂದಾಯ್ತು. ಅವರಿಗೆ ಇಂತಹ ಸ್ಥಿತಿ ಬಂದಿದೆ ಎಂದರೆ ಜನರಿಗೆ ಅವರ ಮೇಲೆ ವಿಶ್ವಾಸ ಇಲ್ಲ ಎಂದರ್ಥ, ಇದನ್ನು ನೋಡಿದರೆ ಬಹಳ ಆಶ್ಚರ್ಯ ಆಗುತ್ತದೆ ಎಂದು ಪ್ರತಾಪ ಸಿಂಹ ಹೇಳಿದ್ದಾರೆ,
ನಾನು ಈಗಲೂ ಹೇಳುತ್ತೇನೆ ಅವರು ಕೊನೆಗೆ ಮೈಸೂರಿನ ವರುಣ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತಾರೆ. ಹೀಗಾಗಿ ಕರ್ನಾಟಕದ ಜನ ಇವರ ಮಾತಿಗೆ ಮರುಳಾಗಿ ಮಂಗಗಳಾಗಬಾರದು ಎಂದು ಪ್ರತಾಪ ಸಿಂಹ ಹೇಳಿದ್ದಾರೆ.

ಅದಕ್ಕೂ ಮೊದಲು ಸಿದ್ದರಾಮಯ್ಯ ವಿರುದ್ಧ ಟ್ವೀಟ್‌ ಮಾಡಿದ್ದ ಬಿಜೆಪಿ, ಕೋಲಾರದಲ್ಲಿ ದಲಿತರು ಸೋಲಿಸುತ್ತಾರೆ ಎನ್ನುವ ಭಯದಲ್ಲಿ ಸಿದ್ದರಾಮಯ್ಯ ಕೋಲಾರ ಬಿಟ್ಟು ಓಡಿ ಹೋಗಿದ್ದಾರೆ ಎಂದು ಕುಟುಕಿತ್ತು.

ಹೆಚ್ಚಿನ ಸುದ್ದಿ

error: Content is protected !!