Sunday, May 17, 2026
Homeಟಾಪ್ ನ್ಯೂಸ್SHUBHANSHU SHUKLA: ಮಗನನ್ನ ಬರಮಾಡಿಕೊಳ್ಳಲು ಉತ್ಸುಕರಾಗಿದ್ದೇವೆ, ಶುಭಾಂಶು ಶುಕ್ಲಾ ಪೋಷಕರ ಸಂತಸದ ಮಾತು

SHUBHANSHU SHUKLA: ಮಗನನ್ನ ಬರಮಾಡಿಕೊಳ್ಳಲು ಉತ್ಸುಕರಾಗಿದ್ದೇವೆ, ಶುಭಾಂಶು ಶುಕ್ಲಾ ಪೋಷಕರ ಸಂತಸದ ಮಾತು

ಲಕ್ನೋ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಭೂಮಿಗೆ ಆಕ್ಸಿಯಾಮ್ ಸ್ಪೇಸ್‌ನ ಆಕ್ಸ್ -4 (Axiom Space 4) ಮಿಷನ್‌ಗೆ ಹೋಗಿರುವವರು ಸದ್ಯದಲ್ಲಿ ಮರಳಿ ಬರುತ್ತಿದ್ದು, ಮಿಷನ್ ಪೈಲಟ್ IAF ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಅವರ ಪೋಷಕರು ತಮ್ಮ ಮಗ ಮರಳಿ ಬರುತ್ತಿರುವುದರ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

 ಸುರಕ್ಷಿತವಾಗಿ ಮರಳಿ ಎಂದು ಪ್ರಾರ್ಥನೆ ಮಾಡುತ್ತಿದ್ದೇವೆ
ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಶುಕ್ಲಾ ಅವರ ಪೋಷಕರು, ನಾವು ಮಗನನ್ನ ಬರಮಾಡಿಕೊಳ್ಳಲು ನಿಜವಾಗಿಯೂ ಉತ್ಸುಕರಾಗಿದ್ದು, ನಮ್ಮ ಇಡೀ ಕುಟುಂಬ ಅವರಿಗಾಗಿ ಕಾಯುತ್ತಿದೆ ಎಂದಿದ್ದಾರೆ. ಇನ್ನು ಅವರ ಬಹಳ ಬೇಗ ಸುರಕ್ಷಿತವಾಗಿ ಭೂಮಿಗೆ ಬರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದು, ಮಿಷನ್‌ ಮುಗಿಸಿ ಬರುತ್ತಿರುವುದು ಬಹಳ ಹೆಮ್ಮೆಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಶುಕ್ಲಾ ಅವರ ತಂದೆ ಸಹ ಮಾತನಾಡಿದ್ದು, ಬಾಹ್ಯಾಕಾಶದಲ್ಲಿ ಅವರು ಬಿತ್ತಿದ ಬೀಜಗಳು ಈಗ ಮೊಳಕೆಯೊಡೆದಿವೆ ಎಂದು ನಮಗೆ ತಿಳಿದು ಸಂತೋಷವಾಗಿದೆ. ಅವರು ಬರುವುದಕ್ಕಾಗಿಯೇ ನಾವು ಕಾಯುತ್ತಿದ್ದೇವೆ. ಅವರು ಬಂದಾಗ ಬ್ಯಾಂಡ್‌ಗಳನ್ನ ತೆಗೆದುಕೊಂಡು ಹೋಗಿ ಸ್ವಾಗತ ಮಾಡುತ್ತೀವಿ ಎಂದಿದ್ದಾರೆ.

ಜುಲೈ 10ರಂದು ಮರಳಿ ಬರಬೇಕಿದ್ದ ತಂಡ
ಜುಲೈ 10 ರಂದು ಮಿಷನ್‌ಗೆ ಹೋಗಿದ್ದವರು ಮರಳಿ ಬರಬೇಕಿತ್ತು. ಆದರೆ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಪ್ರಕಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅವರಿನ್ನೂ 4 ದಿನಗಳ ಇರುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ. ಇನ್ನು ಮಾಹಿತಿಗಳ ಪ್ರಕಾರ ಆಕ್ಸಿಯಮ್ ಮಿಷನ್ 4 ಅನೇಕ ರೀತಿಯ ಸಂಶೋಧನೆಗಳನ್ನ ಮಾಡಿದ್ದು, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮೂರು ಪ್ರಯೋಗಗಳನ್ನು ನಡೆಸಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!