ಬೆಂಗಳೂರು: ನಮ್ಮ ಮೆಟ್ರೋದ ಹಸಿರು ಮಾರ್ಗದ ರಾಜಾಜಿನಗರ (Namma Metro) ನಿಲ್ದಾಣದಲ್ಲಿ ಮಹಿಳೆಯೊಬ್ಬರು (Shocking) ಏಕಾಏಕಿ ಬಂದು ಹಳಿಗೆ ಹಾರಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಮಹಿಳೆಯನ್ನ ರಕ್ಷಿಸಿದ ಸಿಬ್ಬಂದಿ
ಅದೃಷ್ಟವಶಾತ್ ತಕ್ಷಣವೇ ಮೆಟ್ರೋ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ಮಹಿಳೆಯನ್ನ ರಕ್ಷಣೆ ಮಾಡಿದ್ದಾರೆ. ಆದರೆ ಈ ಘಟನೆಯ ಕಾರಣದಿಂದ ಮೆಟ್ರೋ ಸಂಚಾರದಲ್ಲಿ 10 ನಿಮಿಷಗಳ ವ್ಯತ್ಯಯವಾಗಿತ್ತು. ಹಳಿಗೆ ಹಾರಿದ ಮಹಿಳೆಯನ್ನ 50 ವರ್ಷದ ಲೀಲಾವತಿ ಎಂದು ಗುರುತಿಸಲಾಗಿದೆ. ಮಾಹಿತಿಗಳ ಪ್ರಕಾರ ಈ ಮಹಿಳೆ ಹೂ ಮಾರುವ ಕೆಲಸ ಮಾಡುತ್ತಿದ್ದರು. ಮಧ್ಯಾಹ್ವ 12.25ರ ಸಮಯದಲ್ಲಿ ಹಳಿಗೆ ಜಿಗಿದಿದ್ದಾರೆ. ಕೂಡಲೇ ನಿಲ್ದಾಣ ನಿಯಂತ್ರಕರು ಹಾಗೂ ಭದ್ರತಾ ಸಿಬ್ಬಂದಿ ಸುರಕ್ಷತಾ ಕ್ರಮಗಳನ್ನ ತೆಗೆದುಕೊಂಡಿದ್ದು, ಲೀಲಾವತಿ ಅವರಿಗೆ ಯಾವುದೇ ಗಾಯವಾಗದಂತೆ ಸುರಕ್ಷಿತವಾಗಿ ಮೇಲಕ್ಕೆ ಕರೆದುಕೊಂಡು ಬಂದಿದ್ದು, ಮಧ್ಯಾಹ್ನ 12.34ರ ಸುಮಾರಿಗೆ ಮತ್ತೆ ಮೆಟ್ರೋ ಸಂಚಾರ ಆರಂಭ ಮಾಡಲಾಗಿದೆ.
ಘೋರ ದುರಂತ.. ಒಂದೇ ಕುಟುಂಬದ ಮೂವರು ಆತ್ಮಹ*ತ್ಯೆಗೆ ಶರಣು!
ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದಲ್ಲಿ ಶನಿವಾರ ಅತ್ಯಂತ ವಿಷಾದನೀಯ ಘಟನೆಯೊಂದು ಸಂಭವಿಸಿದೆ. ಜೀವನದಲ್ಲಿ ಎದುರಾದ ತೀವ್ರ ಹಣಕಾಸಿನ ಮುಗ್ಗಟ್ಟನ್ನು ನಿಭಾಯಿಸಲಾಗದೆ (Crime) ಒಂದೇ ಕುಟುಂಬದ ಮೂವರು ಸಾವಿಗೆ ಶರಣಾಗಿದ್ದಾರೆ. ಈ ದುರಂತವು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆಘಾತ ಮೂಡಿಸಿದೆ.
ಒಟ್ಟಿಗೆ ಆತ್ಮಹತ್ಯೆಗೆ ಶರಣಾದ ಕುಟುಂಬ
ಗಂಗಾವತಿಯ ಪ್ರಶಾಂತ್ ನಗರದ ನಿವಾಸಿಗಳಾದ ಪ್ರಕಾಶ್ ರಾಯ್ಕರ್ (54), ಅವರ ಪತ್ನಿ ಪ್ರಭಾ ರಾಯ್ಕರ್ (46) ಹಾಗೂ ಅವರ ಪುತ್ರ ಶಶಾಂಕ್ ರಾಯ್ಕರ್ (21) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮೂವರೂ ಪ್ರಶಾಂತ್ ನಗರದಲ್ಲಿರುವ ತಮ್ಮ ಸ್ವಗೃಹದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸಾಲದ ಹೊರೆಯೇ ದುರಂತಕ್ಕೆ ಕಾರಣ?
ಮೃತ ಪ್ರಕಾಶ್ ರಾಯ್ಕರ್ ಅವರು ಗಂಗಾವತಿಯಲ್ಲಿ ಚಿನ್ನದ ಆಭರಣಗಳ (ಜುವೆಲ್ಲರಿ) ವ್ಯಾಪಾರ ನಡೆಸುತ್ತಿದ್ದರು. ಕಳೆದ ಕೆಲವು ಸಮಯದಿಂದ ಅವರ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು ಎಂದು ತಿಳಿದುಬಂದಿದೆ. ದಿನೇ ದಿನೇ ಹೆಚ್ಚುತ್ತಿದ್ದ ಸಾಲದ ಬಾಧೆ ಹಾಗೂ ಮಾನಸಿಕ ಒತ್ತಡವೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಗಂಗಾವತಿ ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಲಭ್ಯವಾಗಿದೆಯೇ ಎಂಬ ಕುರಿತು ಪೊಲೀಸರು ಶೋಧ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಸುತ್ತಮುತ್ತಲಿನ ಜನರ ಪ್ರಕಾರ, ರಾಯ್ಕರ್ ಕುಟುಂಬವು ಎಲ್ಲರ ಜೊತೆ ಬಹಳ ಚೆನ್ನಾಗಿ ನಡೆದುಕೊಳ್ಳುತ್ತಿದ್ದರು. ಆದರೆ ಅದನ್ನ ಯಾರ ಬಳಿಯೂ ಹೇಳಿಕೊಂಡಿಲ್ಲ. ಹಾಗಾಗಿ ಸಾಲದ ಹೊರೆ ಅವರನ್ನು ಈ ಮಟ್ಟಿಗೆ ಕಾಡುತ್ತಿತ್ತು ಎಂಬುದನ್ನು ಯಾರೂ ಊಹಿಸಿರಲಿಲ್ಲ. ಬಿಎಸ್ಸಿ ಓದುತ್ತಿದ್ದ 21 ವರ್ಷದ ಯುವಕನೂ ಪೋಷಕರೊಂದಿಗೆ ಬಲಿಯಾಗಿರುವುದು ಇಡೀ ನಗರವನ್ನು ಕಣ್ಣೀರಲ್ಲಿ ಮುಳುಗಿಸಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಪೊಲೀಸರ ಭರ್ಜರಿ ಬೇಟೆ – ಕುಖ್ಯಾತ ಗಾಂಜಾ ಪೆಡ್ಲರ್ ಅಡ್ಡೆಯ ಮೇಲೆ ದಾಳಿ