Saturday, May 16, 2026
Homeಕ್ರೈಂSHOCKING: ರೈಲುಗಳೂ ಮಹಿಳೆಯರಿಗೆ ಸುರಕ್ಷಿತವಲ್ಲ - ವಿಕೃತ ಕಾಮುಕನ ವಿಡಿಯೋ ವೈರಲ್‌! VIDEO

SHOCKING: ರೈಲುಗಳೂ ಮಹಿಳೆಯರಿಗೆ ಸುರಕ್ಷಿತವಲ್ಲ – ವಿಕೃತ ಕಾಮುಕನ ವಿಡಿಯೋ ವೈರಲ್‌! VIDEO

ಕೇರಳ: ರೈಲು ಪ್ರಯಾಣದ ವೇಳೆ ಮಹಿಳೆಯರ (Shocking) ಸುರಕ್ಷತೆಯ ಕುರಿತು ಮತ್ತೊಮ್ಮೆ ಪ್ರಶ್ನೆ ಹುಟ್ಟಿದ್ದು, ಮತ್ತೆ ಮಹಿಳೆಯ ಜೊತೆ ಅಸಭ್ಯ ವರ್ತನೆ ಮಾಡಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದ್ದು ವಿಡಿಯೋ (Viral Video) ವೈರಲ್‌ ಆಗಿದೆ.

ಸ್ಲೀಪರ್‌ ಕೋಚ್‌ನಲ್ಲಿ ಕಿರುಕುಳ
ಕೋರ್ಬಾ–ತಿರುವನಂತಪುರಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಅಪರಿಚಿತನೊಬ್ಬ ತೀವ್ರ ಮುಜುಗರ ಮತ್ತು ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈಲ್ವೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಏನಿದೆ ವಿಡಿಯೋದಲ್ಲಿ?
ಘಟನೆ ನಡೆದಾಗ ರೈಲಿನ ಎಸ್-1 ಕೋಚ್‌ನಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇತ್ತು ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ. ರೈಲಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮೊದಲು ಮಹಿಳೆಯ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದ್ದಾನೆ. ಆತ ಭಯ ಹುಟ್ಟಿಸುವಂತೆ ವರ್ತಿಸುತ್ತಿದ್ದಾಗ ಮಹಿಳೆ ಕಿಟಕಿಯ ಕಡೆಗೆ ಸರಿದು ದೂರ ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಆ ವ್ಯಕ್ತಿ ಅಲ್ಲಿಗೆ ನಿಲ್ಲದೆ, ತನ್ನ ಬಟ್ಟೆಗಳನ್ನು ತೆಗೆದು ಅಸಭ್ಯವಾಗಿ ವರ್ತಿಸಿದ್ದಲ್ಲದೆ, ತನ್ನ ದೇಹದ ಭಾಗದ ಕೂದಲುಗಳನ್ನು ಕಿತ್ತು ಮಹಿಳೆಯ ಆಸನದ ಮೇಲೆ ಎಸೆದು ವಿಕೃತಿ ಮೆರೆದಿದ್ದಾನೆ. ಇದು ತನಗೆ ತೀವ್ರ ಆಘಾತ ಮತ್ತು ನೋವನ್ನು ಉಂಟುಮಾಡಿದೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ರಿಸರ್ವ್‌ ಇರುವ ಕೋಚ್‌ನಲ್ಲಿ ಇಂತಹ ಅಮಾನವೀಯ ವರ್ತನೆ ನಡೆದಿದ್ದು ಹೇಗೆ ಎಂಬುದು ಸದ್ಯದ ದೊಡ್ಡ ಪ್ರಶ್ನೆಯಾಗಿದೆ.

ಇದೇ ರೀತಿಯ ಮತ್ತೊಂದು ಘಟನೆ ದೆಹಲಿಯ ರಸ್ತೆಗಳಲ್ಲಿ ನಡೆದಿದೆ ಎನ್ನಲಾದ 72 ಸೆಕೆಂಡುಗಳ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ವಿದೇಶಿ ಮಹಿಳೆಯರ ಗುಂಪೊಂದು ರಸ್ತೆಯಲ್ಲಿ ವ್ಯಕ್ತಿಯೊಬ್ಬನೊಂದಿಗೆ ಜಗಳವಾಡುತ್ತಿರುವ ದೃಶ್ಯವಿದ್ದರೂ, ಆ ವಿಡಿಯೋದ ಸತ್ಯಾಸತ್ಯತೆ ಮತ್ತು ಸಂದರ್ಭದ ಬಗ್ಗೆ ಗೊಂದಲಗಳಿವೆ. ದಟ್ಟಣೆಯಿರುವ ರಸ್ತೆಯಲ್ಲಿ ಈ ಘಟನೆ ನಡೆಯುತ್ತಿದ್ದರೂ, ಅಲ್ಲಿ ನೆರೆದಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸದೆ ಮೂಕಪ್ರೇಕ್ಷಕರಾಗಿ ನಿಂತಿದ್ದನ್ನು ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಇಂತಹ ಸಂದರ್ಭಗಳಲ್ಲಿ ಜನರ ಜವಾಬ್ದಾರಿಯ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಸತತವಾಗಿ ಇಂತಹ ಘಟನೆಗಳು ವರದಿಯಾಗುತ್ತಿರುವುದು ಸಾರ್ವಜನಿಕ ಸಾರಿಗೆ ಮತ್ತು ರಸ್ತೆಗಳಲ್ಲಿ ಮಹಿಳೆಯರ ಭದ್ರತೆಯ ಬಗ್ಗೆ ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ : ಬಾಂಬ್‌ ಸ್ಫೋಟಕ್ಕೆ ಇಬ್ಬರು ಪುಟಾಣಿ ಮಕ್ಕಳ ಬಲಿ – ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ!

ಹೆಚ್ಚಿನ ಸುದ್ದಿ

Change Language »
error: Content is protected !!