Friday, March 13, 2026
Homeಕ್ರೈಂSHOCKING : ಉಗ್ರರಿಗಾಗಿ ಕಾರ್ಯಕ್ರಮ ಆಯೋಜಿಸಿದ ಪಾಕ್! - ಮಗನ ಬಗ್ಗೆ ಹೆಮ್ಮೆ ಇದೆ ಎಂದ...

SHOCKING : ಉಗ್ರರಿಗಾಗಿ ಕಾರ್ಯಕ್ರಮ ಆಯೋಜಿಸಿದ ಪಾಕ್! – ಮಗನ ಬಗ್ಗೆ ಹೆಮ್ಮೆ ಇದೆ ಎಂದ ಉಗ್ರನ ತಂದೆ! -VIDEO

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಹತ್ಯೆಗೀಡಾದ ಭಯೋತ್ಪಾದಕರಿಗಾಗಿ ಲಷ್ಕರ್ ಇ ತೊಯ್ಬಾ ಕಾರ್ಯಕ್ರಮ ಆಯೋಜಿಸಿದೆ. ಭಾರತೀಯ ದಾಳಿಯಲ್ಲಿ ಕೊಲ್ಲಲ್ಪಟ್ಟ ಎಲ್‌ಇಟಿ ಭಯೋತ್ಪಾದಕ ಹಫೀಜ್ ಅಬ್ದುಲ್ ರೌಫ್​ನ ತಂದೆಯನ್ನು ಎಲ್‌ಇಟಿಯ ಉಗ್ರರು ಸುತ್ತುವರೆದು ಸಮಾಧಾನ ಮಾಡಿವೆ. ಇರೋ ಬರೋ ಉಗ್ರರು ಅಲ್ ಜಿಹಾದ್ ಅಲ್ ಜಿಹಾದ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ.

ಹಫೀಜ್ ಅಬ್ದುಲ್ ರೌಫ್​ನನ್ನು ಪಾಕ್ ಸೇನೆಯು ಕೇವಲ ಧರ್ಮಗುರು ಎಂದು ಹೇಳಿಕೊಂಡಿತ್ತು. ಉಗ್ರರ ಅಂತ್ಯಕ್ರಿಯೆಯಲ್ಲಿ ಇಡೀ ಪಾಕಿಸ್ತಾನ ಸೇನೆ ಹಾಗೂ ಪೊಲೀಸ್​ ಅಧಿಕಾರಿಗಳು ಭಾಗಿಯಾಗಿದ್ದರು. ಪಾಕಿಸ್ತಾನದಲ್ಲಿ ಭಾರತದಿಂದ ಹತರಾದ ಭಯೋತ್ಪಾದಕರಿಗೆ ಪಾಕ್​ ಸೇನೆ ಹಾಗೂ ಪೊಲೀಸ್​ ಇಲಾಖೆ ಸಂತಾಪ ಸೂಚಿಸಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದವು. ಇದರೊಂದಿಗೆ ತನಗೂ ಟೆರರಿಸ್ಟ್​ಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಬಿಲ್ಡಪ್ ಕೊಡ್ತಾ ಇದ್ದ ಪಾಕಿಸ್ತಾನದ ಮುಖವಾಡ ಇಲ್ಲಿ ಬಯಲಾಗಿದೆ.

ಭಾರತ ಒಂದು ಹೆಜ್ಜೆ ಮುಂದೆ ಹೋಗಿ, ಅಂತ್ಯಕ್ರಿಯೆಯಲ್ಲಿದ್ದ ಪಾಕ್ ಸೇನಾ​ ಅಧಿಕಾರಿಗಳ ಹೆಸರು, ಮತ್ತು ಪದವಿಯನ್ನು ರಿಲೀಸ್ ಮಾಡಿ, ಪಾಕ್ ಮರ್ಯಾದೆ ತೆಗೆದಿದೆ. ಅದ್ರಲ್ಲಿ ಸೇನೆಯ ಬ್ರಿಗೇಡಿಯರ್, ಲೆಫ್ಟಿನೆಂಟ್ ಜನರಲ್​, ಲಾಹೋರ್​ ಪೊಲೀಸ್​​ನ ಇನ್ಸ್​ಪೆಕ್ಟರ್​ ಜನರಲ್​ – IGP ಕೂಡಾ ಸೇರಿದ್ದಾರೆ.

ಉಗ್ರರ ಅಂತ್ಯಕ್ರಿಯೆಲ್ಲಿ ಬ್ರಿಗೇಡಿಯರ್​ ಮಹಮ್ಮದ್ ಫುರಖಾನ್​, ಲೆಫ್ಟಿನೆಂಟ್​ ಜನರಲ್​ ಫುಯಾಜ್​ ಹುಸೇನ್​, ದಿ ಮೋಸ್ಟ್​ ವಾಂಟೆಡ್​ ಅಬ್ದುಲ್​ ರವೂಫ್​, ಮೇಜರ್​ ಜನರಲ್ ರಾವ್​ ಇಮ್ರಾನ್​, ಪೊಲೀಸ್​ ಅಧಿಕಾರಿ ಮಲ್ಲಿಕ್ ಶೋಯಬ್ ಅಹ್ಮದ್ ಹಾಗೂ IGP ಉಸ್ಮಾನ್​ ಅನ್ವರ್ ಭಾಗಿಯಾಗಿದ್ದರು

ಹೆಚ್ಚಿನ ಸುದ್ದಿ

Change Language »
error: Content is protected !!