Saturday, April 26, 2025
Homeಕ್ರೈಂSHOCKING : ಮೊಬೈಲ್‌ ನೋಡಬೇಡ ಎಂದಿದ್ದಷ್ಟೇ.. 9 ನೇತರಗತಿ ವಿದ್ಯಾರ್ಥಿನಿ ಆತ್ಮ#ತ್ಯೆ!

SHOCKING : ಮೊಬೈಲ್‌ ನೋಡಬೇಡ ಎಂದಿದ್ದಷ್ಟೇ.. 9 ನೇತರಗತಿ ವಿದ್ಯಾರ್ಥಿನಿ ಆತ್ಮ#ತ್ಯೆ!

ಬೀದರ್ : ಕ್ಷುಲ್ಲಕ ಕಾರಣಗಳಿಗೆ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಪರಿಪಾಠ ಹೆಚ್ಚಾಗುತ್ತಿದ್ದು, ಮೊಬೈಲ್ ಜಾಸ್ತಿ ನೋಡಬೇಡ ಎಂದು ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಮನನೊಂದು 9 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ನಲ್ಲಿ ನಡೆದಿದೆ.

ಬೀದರ್ ಜಿಲ್ಲೆಯ ಕಮಲಾನಗರ ತಾಲೂಕಿನ ಡಿಗ್ಗಿ ಗ್ರಾಮದ ಬಾಲಕಿ ಸೋನಿ (15) ಆತ್ಮಹತ್ಯೆ ಮಾಡಿಕೊಂಡಾಕೆ.

ವಿಪರೀತವಾಗಿ ಮೊಬೈಲ್ ನೋಡುವ ಗೀಳೀಗೆ ಬಿದ್ದಿದ್ದ ವಿದ್ಯಾರ್ಥಿನಿಗೆ ಪೋಷಕರು ಮೊಬೈಲ್‌ ನೋಡುವುದನ್ನು ಕಡಿಮೆ ಮಾಡಿ ಓದಿನ ಕಡೆ ಗಮನ ನೀಡುವಂತೆ ತಿಳಿ ಹೇಳಿದ್ದಾರೆ. ಇಷ್ಟಕ್ಕೇ ಮನನೊಂದ ಬಾಲಕಿ ಸೋನಿ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಹೆಚ್ಚಿನ ಸುದ್ದಿ

error: Content is protected !!