ಅರಸಿಕೆರೆ: ಜೆಡಿಎಸ್ ಪಕ್ಷ ತೊರೆದ ಅರಸೀಕೆರೆ ಶಾಸಕ ಕಾಂಗ್ರೆಸ್ ಸೇರ್ಪಡೆಯಾದರು. ಅರಸೀಕೆರೆಯಲ್ಲಿ ಬೃಹತ್ ಸಮಾವೇಶ ನಡೆಸಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಯಾದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಡಿ.ಕೆ ಸುರೇಶ್ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಲಿಂಗೇಗೌಡರನ್ನು ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಸ್ವಾಗತಿಸಲಾಯ್ತು
ಈ ವೇಳೆ ಶಿವಲಿಂಗೇಗೌಡ ಮಾತನಾಡಿ ಕಾಂಗ್ರೆಸ್ ಸೇರುವುದು ನನ್ನ ಹಣೆಯಲ್ಲಿ ಬರೆದಿತ್ತು ಎಂದೆನಿಸುತ್ತದೆ. ನಾನು ನನಗೋಸ್ಕರ ಅಲ್ಲ ಈ ಕ್ಷೇತ್ರದ ಜನರಿಗೋಸ್ಕರ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದ್ರು.
ಇನ್ನು ಬಿಜೆಪಿ ವಿರುದ್ಧ ಹರಿಹಾಯ್ದ ಶಿವಲಿಂಗೇಗೌಡ ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ. ನಾನು ಬಿಜೆಪಿಯಂತ ನೀತಿಗೆಟ್ಟ, ಮಾನಗೆಟ್ಟ ಸರ್ಕಾರ ನೋಡಿಲ್ಲ. ಊರಿನ ತುಂಬಾ ಬಾರ್ ಮಾಡಿದ್ದಷ್ಟೇ ನಿಮ್ಮ ಸಾಧನೆ ಎಂದು ಗುಡುಗಿದ್ರು, ಸರ್ಕಾರಿ ಸಂಬಳ ನೀಡಲು ನೀವು ಅಬಕಾರಿ ಆದಾಯದ ಮೇಲೆ ಅವಲಂಬಿತರಾಗಿದ್ದೀರಿ ಎಂದ್ರು ಕಿಡಿ ಕಾರಿದ್ರು..
ರೈತರ ಜೀವನ ದುಸ್ತರವಾಗಲು ಬಿಜೆಪಿಯೇ ಕಾರಣ, ರಸಗೊಬ್ಬರ ಬೆಲೆ ಗಗನಕ್ಕೇರಿದೆ.. ಕೇವಲ 2 ತಾಸು ವಿದ್ಯುತ್ ಪೂರೈಕೆ ಮಾಡ್ತಿದ್ದೀರಿ, ಎಪಿಎಂಸಿ ಕತ್ತು ಹಿಸುಕಿದ್ದೀರಿ, ಬೆಂಬಲ ಬೆಲೆ ಪರಿಷ್ಟರಣೆ ಮಾಡದೇ ರೈತರ ಬಾಳಿನ ಮುಳ್ಳಾಗಿದ್ದೀರಿ ಎಂದು ಬಿಜೆಪಿ ವಿರುದ್ಧ ಸರಣಿ ಆರೋಪ ಮಾಡಿದ್ರು
ಖಾಸಗೀಕರಣಕ್ಕೆ ಒಲವು ತೋರುತ್ತಿರುವ ಬಿಜೆಪಿ ನಡೆ, ಅದಾನಿ ಬಗೆಗಿನ ಮೋಹದ ಕುರಿತ ರಾಹುಲ್ ಗಾಂಧಿ ಹೇಳುವುದು ನೂರಕ್ಕೆ ನೂರು ಸತ್ಯ.. ನಿಮ್ಮ ಕಾಲ ಮುಗಿಯುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು