Saturday, May 16, 2026
Homeಕ್ರೈಂCRIME : ಉದ್ಯೋಗ ಕೊಡಿಸೋದಾಗಿ ವಂಚನೆ ಆರೋಪ - ಇಬ್ಬರು ಕಾಂಗ್ರೆಸ್ ನಾಯಕರ ಉಚ್ಚಾಟನೆ

CRIME : ಉದ್ಯೋಗ ಕೊಡಿಸೋದಾಗಿ ವಂಚನೆ ಆರೋಪ – ಇಬ್ಬರು ಕಾಂಗ್ರೆಸ್ ನಾಯಕರ ಉಚ್ಚಾಟನೆ

ಶಿವಮೊಗ್ಗ : ಮಹಿಳೆಗೆ ಉದ್ಯೋಗದ ಭರವಸೆ ನೀಡಿ ಹಣ ಪಡೆದು ಮೋಸ (Fraud) ಮಾಡಿದ ಆರೋಪ ಗಂಭೀರ ತಿರುವು ಪಡೆದಿದೆ. 3 ಲಕ್ಷ ರೂ. ಹಣ ಪಡೆದು ವಂಚಿಸಿರುವ ಹಿನ್ನೆಲೆ ಶಿವಮೊಗ್ಗ (Shimoga) ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನಾಜಿಮಾ ಹಾಗೂ ವೈ. ತಿಮ್ಮರಾಜು ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ (Expelled).

ಅಸ್ಮಾ ಬಾನು ಎಂಬ ಮಹಿಳೆಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಕಲ್ಪಿಸುವುದಾಗಿ ಹೇಳಿ ಈ ಹಣ ಪಡೆದಿದ್ದಾರೆ ಎನ್ನಲಾಗಿದೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಪರಿಷತ್ ಸದಸ್ಯರ ಹೆಸರನ್ನು ಬಳಸಿಕೊಂಡು ನಂಬಿಸಿ ವಂಚಿಸಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ಅಸ್ಮಾ ಬಾನು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ : ರೈತನಿಂದ ಲಂಚ ಪಡೆಯುವಾಗ ಲಾಕ್, ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಈ ದೂರು ಆಧರಿಸಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿ ಪಕ್ಷಕ್ಕೆ ಮುಜುಗರ ಉಂಟಾಯಿತು. ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅಂತಿಮವಾಗಿ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್ ಆದೇಶದಂತೆ ಇಬ್ಬರನ್ನು 6 ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಲಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!