Thursday, April 16, 2026
Homeಕ್ರೈಂSHIMOGA : ಬುರ್ಖಾ ಧರಿಸಿ ಮದುವೆ ಮನೆಗಳಲ್ಲಿ ಲೂಟಿ - ಖತರ್ನಾಕ್ ಕಳ್ಳಿ ಅಂದರ್!

SHIMOGA : ಬುರ್ಖಾ ಧರಿಸಿ ಮದುವೆ ಮನೆಗಳಲ್ಲಿ ಲೂಟಿ – ಖತರ್ನಾಕ್ ಕಳ್ಳಿ ಅಂದರ್!

ಶಿವಮೊಗ್ಗ : ಶಿವಮೊಗ್ಗದಲ್ಲಿ (Shimoga ) ಮದ್ವೆ (Marriage ) ಮನೆಯನ್ನು ಟಾರ್ಗೆಟ್ ಮಾಡಿ ಕಳ್ಳತನ (Thief ) ಮಾಡ್ತಿದ್ದ ಖತರ್ನಾಕ್ ಲೇಡಿ ಅಂದರ್ ಆಗಿದ್ದಾಳೆ.

ಮದುವೆ ಸಮಾರಂಭಗಳಲ್ಲಿ ಸರಣಿ ಚಿನ್ನಾಭರಣ ಕಳ್ಳತನ ನಡೆಸುತ್ತಿದ್ದ ಬುರ್ಖಾಧಾರಿ ಕಳ್ಳಿ ರುಕ್ಸಾರ್ ಫಿರ್ದೋಸ್ ಅನ್ನು ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ.

ಇಲಿಯಾಜ್ ನಗರದ ಶಾದಿ ಮಹಲ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳಿಂದ ಸುಳಿವು ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಬುರ್ಖಾ ಧರಿಸಿ, ವ್ಯಾನಿಟಿ ಬ್ಯಾಗ್ ಹಿಡಿದು ಚಿನ್ನಾಭರಣ ಎಗರಿಸುತ್ತಿದ್ದ ಸುಳೆಬೈಲು ನಿವಾಸಿ ರುಕ್ಸಾರ್ ಫಿರ್ದೋಸ್ ಅಂದರ್ ಆಗಿದ್ದಾಳೆ.

ಮದುವೆಗೆ ಬಂದವರು ತಮ್ಮ ಆಭರಣಗಳನ್ನು ಬ್ಯಾಗ್‌ನಲ್ಲಿ ಇಡುವುದನ್ನೇ ಸಂಚು ಹೂಡಿ ಕಾಯುತ್ತಿದ್ದ ಈಕೆ ಕ್ಷಣಾರ್ಧದಲ್ಲಿ ಅವುಗಳನ್ನು ಎಗರಿಸಿ ಎಸ್ಕೇಪ್ ಆಗುತ್ತಿದ್ದಳು.

ಕಳ್ಳಿ ರುಕ್ಸಾರ್ ಫಿರ್ದೋಸ್ ಒಟ್ಟು 120 ಗ್ರಾಂ ಚಿನ್ನಾಭರಣ ಕದ್ದಿದ್ದಾಳೆ ಎಂದು ಹೇಳಲಾಗಿದೆ. ಒಟ್ಟು ಇದರ ಬೆಲೆ ಅಂದಾಜು 18 ಲಕ್ಷ ರೂ ಇರಬಹುದು ಎಂದು ಅಂದಾಜಿಸಲಾಗಿದ್ದು, ಈಕೆಯ ಬಂಧನದಿಂದ 4 ಪ್ರಮುಖ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

ಇದನ್ನೂ ಓದಿ : ಬಾಯ್ ಫ್ರೆಂಡ್ ಕಿರುಕುಳ – ವೈದ್ಯಕೀಯ ವಿದ್ಯಾರ್ಥಿನಿ‌ ನೇಣಿಗೆ ಶರಣು! 

ಹೆಚ್ಚಿನ ಸುದ್ದಿ

Change Language »
error: Content is protected !!