ಶಿವಮೊಗ್ಗ : ಶಿವಮೊಗ್ಗ (Shimoga ) ವೃದ್ಧ ದಂಪತಿ ಬಾಳಿಗೆ ಆಧಾರ್ ಕಾರ್ಡ್(Adhaar card) ಶತ್ರುವಾಗಿದೆ. ಯಾವುದೇ ಗುರುತಿನ ಚೀಟಿ ಇಲ್ಲದ ಕಾರಣ ತುತ್ತು ಅನ್ನಕ್ಕೂ ಬಡ ದಂಪತಿ (Couple) ಪರಿತಪಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಗರದ ಭೀಮನಕೋಣೆ ರಸ್ತೆಯ ಗಾಂಧಿನಗರದ ಹೆದ್ದಾರಿ ಪಕ್ಕದಲ್ಲೇ ಇರೋ ಬಾಡಿಗೆ ಮನೆಯಲ್ಲಿ ಗಜಾನನ ಹಾಗೂ ಭಾರತಿ ವಾಸವಾಗಿದ್ದು, ಇಬ್ಬರಿಗೂ ಯಾರೊಬ್ಬರ ದಿಕ್ಕು ಇಲ್ಲ. ನಿತ್ಯ ಜೀವನ ಸಾಗಿಸೋದೆ ಸವಾಲಾಗಿದ್ದು ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರತಿ ಕಳೆದ 5 ವರ್ಷಗಳ ಹಿಂದೆ ರಾತ್ರಿ ಮಲಗಿದವರಿಗೆ ಬೆಳಗ್ಗೆ ಏಳಲು ಆಗಲಿಲ್ಲ. ಅದುವರೆಗೂ ಅವರಿಗೆ ಸರಕಾರದ ವಿಶೇಷಚೇತನರ ಮಾಸಾಶನ ಸಿಗುತ್ತಿತ್ತು. ಒಮ್ಮೆ ಆಧಾರ್ ಮಾಡಬೇಕೆಂಬ ಸರಕಾರದ ಆದೇಶ ಬಂದಾಗ ಇವರು ಮಲಗಿದ್ದಲ್ಲೇ ಇದ್ದರು. ಪತಿ ಗಜಾನನ ಅವರು ಆಧಾರ್ ಮಾಡಿಸಲು ಮಾಡಿದ ಪ್ರಯತ್ನಗಳು ಫಲ ಕೊಡಲಿಲ್ಲ. ವಿಶೇಷ ಚೇತನರ ವೇತನ ರದ್ದಾಯಿತು.ಇದ್ರಿಂದಾಗಿ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ.
ಇದನ್ನೂ ಓದಿ : ಬಿಜೆಪಿ ಕಾರ್ಯಕರ್ತೆಯ ಹಲ್ಲೆ ಕೇಸ್ – ಇನ್ಸೆಪೆಕ್ಟರ್ ವರ್ಗಾವಣೆ
ಕಂದಾಯ ಇಲಾಖೆ ಸಂಪರ್ಕಿಸಿದರು. ಪ್ರಿಂಟರ್,ಸ್ಕ್ಯಾನರ್ ಮೊದಲಾದ ಯಂತ್ರಗಳನ್ನು ಮನೆಗೆ ತಂದ ಸಿಬ್ಬಂದಿ ಕೈಬೆರಳು, ಕಣ್ಣಿನ ಮಾದರಿಗಳನ್ನೆಲ್ಲ ಸಂಗ್ರಹಿಸಿ ಹೋದರು. ಆದರೆ, UIDAI ಭಾರತಿ ಅವರಿಗೆ ಆಧಾರ್ ಸಂಖ್ಯೆ ನೀಡಲು ತಿರಸ್ಕರಿಸಿತು.ಇದ್ರಿಂದಾಗಿ ಪಿಂಚಣಿ ಆಸೆಯೂ ಕಮರಿಹೋಗಿದೆ.
ಸಂಬಂಧಿಕರು ಹಾಗೂ ಬಂಧು ಬಾಂಧವರು ವೃದ್ಧ ದಂಪತಿಯನ್ನು ಸಂಪೂರ್ಣ ನಿರ್ಲಕ್ಷ್ಯದಿಂದ ಕಾಣುತ್ತಿದ್ದು, ಇಳಿ ವಯಸ್ಸಲ್ಲಿ ದಂಪತಿ ಕಣ್ಣೀರಲ್ಲಿ ಕೈತೋಳೆಯುವಂತಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಇತ್ತ ಗಮನವಹಿಸಿ ಅಗತ್ಯ ನೆರವು ನೀಡಬೇಕಾಗಿದೆ.