ಮುಸ್ಲಿಂ ಸಮುದಾಯದ ಪ್ರತಿನಿಧಿಗಳು ಗುರುವಾರ ಶಿಮ್ಲಾದ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಯನ್ನ ಭೇಟಿ ಮಾಡಿ, ವಿವಾದದಕ್ಕೆ ಕಾರಣವಾಗಿರುವ ಸಂಜೌಲಿ ಮಸೀದಿಯ ಅನಧಿಕೃತ ಭಾಗವನ್ನು ಸೀಲ್ ಮಾಡಲು ಅಥವಾ ಕೆಡವಲು ಮನವಿ ಮಾಡಿದ್ದಾರೆ. ಈ ಅರ್ಜಿ ಸ್ವೀಕರಿಸಿರುವುದನ್ನು ಪಾಲಿಕೆ ಆಯುಕ್ತ ಭೂಪೇಂದ್ರ ಅತ್ರಿ ಖಚಿತಪಡಿಸಿದ್ದಾರೆ.
ಕೆಲವು ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳು ಮಸೀದಿಯ ಅನಧಿಕೃತ ನಿರ್ಮಾಣದ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಬುಧವಾರ, ಕೆಲವು ಹಿಂದೂ ಗುಂಪುಗಳು ಶಿಮ್ಲಾದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದವು ಮತ್ತು ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿ, ಜಲಫಿರಂಗಿಗಳನ್ನು ಬಳಸಬೇಕಾಯಿತು.
ಸಂಜೌಲಿ ಮಸೀದಿಯ ಇಮಾಮ್ ಶೆಹಜಾದ್, ನಾವು ಮುನ್ಸಿಪಲ್ ಕಾರ್ಪೊರೇಶನ್ ಅನ್ನು ಸಂಪರ್ಕಿಸಿದ್ದೇವೆ ಮತ್ತು ಮಸೀದಿಯ ಕೆಲವು ಭಾಗವು ಕಾನೂನುಬಾಹಿರವೆಂದು ಅವರು ಭಾವಿಸಿದರೆ, ಪಾಲಿಕೆ ಅದನ್ನು ಸೀಲ್ ಮಾಡಲಿ ಮತ್ತು ಕೆಡವುವ ಅಗತ್ಯವಿದ್ದರೆ,. ಅದನ್ನು ಕೆಡವಲು ಅವಕಾಶ ನೀಡಬೇಕು ಎಂದು ಸಮುದಾಯಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಮಸೀದಿಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆಗೆ ಕರೆ ನೀಡಿದ ದೇವಭೂಮಿ ಸಂಘ ಸಮಿತಿಯ ಸದಸ್ಯರು ಈ ಕ್ರಮವನ್ನು ಸ್ವಾಗತಿಸಿದರು.