ತಿರುವನಂತಪುರಂ: ತನ್ನ ಪ್ರಿಯಕರನನ್ನು ಕೊಂದ ಆರೋಪದಲ್ಲಿ ಕೇರಳದ 24 ವರ್ಷದ ಯುವತಿಗೆ ತಿರುವನಂತಪುರಂನ ಸ್ಥಳೀಯ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.
2022 ರಲ್ಲಿ ತನ್ನ ಗೆಳೆಯ ಶರೋನ್ ರಾಜ್‌ಗೆ ವಿಷ ನೀಡಿ ಕೊಲೆ ಮಾಡಿದ್ದಕ್ಕಾಗಿ ಗ್ರೀಷ್ಮಾಗೆ ಮರಣದಂಡನೆ ವಿಧಿಸಲಾಗಿದೆ. ಜ.17 ರಂದು ಗ್ರೀಷ್ಮಾ ಕೊಲೆಯ ಅಪರಾಧಿ ಎಂದು ಸಾಬೀತಾಗಿದ್ದು, ಕೋರ್ಟ್ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ ಮೂರನೇ ಆರೋಪಿಯಾಗಿರುವ ಗ್ರೀಷ್ಮಾ ಚಿಕ್ಕಪ್ಪ ನಿರ್ಮಲ್ ಕುಮಾರ್‌ಗೆ ಕೋರ್ಟ್ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ಗ್ರೀಷ್ಮಾ ತಾಯಿ ಸಿಂಧು ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇದೊಂದು ಅಪರೂಪದ ಪ್ರಕರಣ ಎಂದು ನೆಯ್ಯಾಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಆದ್ದರಿಂದ ಅವರ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದಿದೆ.
ಏನಿದು ಪ್ರಕರಣ..?: ತಿರುವನಂತಪುರಂನ ಉಪನಗರದ ಪರಸಾಲ ನಿವಾಸಿ ಶರೋನ್ ರಾಜ್ ಅವರು ಅಂಗಾಂಗ ವೈಫಲ್ಯದಿಂದ 2022 ರ ಅಕ್ಟೋಬರ್ 25 ರಂದು ನಿಧನರಾದರು. ಸಾವಿನ ತನಿಖೆಯ ವೇಳೆ ವಿಷಪ್ರಾಶನ ಮಾಡಿರುವುದು ಬಹಿರಂಗವಾಗಿತ್ತು. ಶರೋನ್ ಜೊತೆ ಗ್ರೀಷ್ಮಾ ಸಂಬಂಧ ಹೊಂದಿದ್ದಳು. ಆದರೆ ಈ ನಡುವೆ ಆಕೆಗೆ ಬೇರೊಬ್ಬನ ಜೊತೆ ಮದುವೆ ಮಾತುಕತೆ ನಡೆದಿತ್ತು. ಹೀಗಾಗಿ ಆಕೆ ಶರೋನ್ ಜೊತೆಗಿನ ತಮ್ಮ ಸಂಬಂಧವನ್ನು ಕೊನೆಗೊಳಿಸಲು ಮುಂದಾಗಿದ್ದಳು. ಆದರೆ ಶರೋನ್ ನಿರಾಕರಿಸಿದ್ದರಿಂದ ಆತನಿಗೆ ನೀಡಿದ್ದಳು.
ಇತ್ತ ಸಾಯುವ ಮುನ್ನ ಶರೋನ್, ತನ್ನ ಸಂಬಂಧಿಕರಲ್ಲಿ ಪ್ರೇಯಸಿ ಗ್ರೀಷ್ಮಾ ವಿಷ ಹಾಕಿದ್ದಾಗಿ ಹೇಳಿದ್ದ. ಪೊಲೀಸ್ ವಿಚಾರಣೆ ವೇಳೆ ಶರೋನ್ ರಾಜ್‌ಗೆ ವಿಷ ಹಾಕಿದ್ದಾಗಿ ಗ್ರೀಷ್ಮಾ ಕೂಡ ಒಪ್ಪಿಕೊಂಡಿದ್ದಳು.