ನವದೆಹಲಿ: ಕಾರ್ಪೊರೇಟ್ ಉದ್ಯಮಿ ಗೌತಮ್ ಅದಾನಿ ಪರ ಹೇಳಿಕೆ ನೀಡಿರುವ ಬೆನ್ನಲ್ಲೇ ಎನ್ ಸಿಪಿ ನಾಯಕ ಶರದ್ ಪವಾರ್ ಅವರು ಬರೆದಿದ್ದ ಪುಸ್ತಕದಲ್ಲಿದ್ದ ಕೆಲ ಸಾಲುಗಳೀಗ ಚರ್ಚೆಯನ್ನು ಹುಟ್ಟುಹಾಕಿದೆ.
2015ರಲ್ಲಿ ಮರಾಠಿ ಭಾಷೆಯಲ್ಲಿ ಪ್ರಕಟವಾಗಿದ್ದ ಶರದ್ ಪವಾರ್ ಅವರ ಜೀವನ ಚರಿತ್ರೆ ಲೋಕ್ ಮಝೆ ಸಂಗಾತಿಯಲ್ಲಿ ಗೌತಮ್ ಅದಾನಿ ಉಲ್ಲೇಖಿಸಿರುವ ಶರದ್ ಪವಾರ್ ಅದಾನಿ ಒಬ್ಬ ಕಠಿಣ ಪರಿಶ್ರಮಿ, ಸರಳ ಹಾಗೂ ವಿಧೇಯ ವ್ಯಕ್ತಿ ಎಂದು ಶ್ಲಾಘಿಸಿದ್ದರು.
ಅದಾನಿ ತಮ್ಮ ಕಾರ್ಪೊರೇಟ್ ಸಾಮ್ರಾಜ್ಯ ಸ್ಥಾಪಿಸುವುದಕ್ಕೂ ಮೊದಲು ಮುಂಬೈಯಲ್ಲಿ ಸೇಲ್ಸ್ ಮೆನ್ ಆಗಿದ್ದ ಬಗ್ಗೆ, ಅವರ ವೃತ್ತಿ ಜೀವನದ ಬಗ್ಗೆ, ನಂತರ ಅವರು ಬೇರೆ ಬೇರೆ ಉದ್ಯಮಗಳನ್ನು ನಡೆಸಿದ ಬಗ್ಗೆ ಪವಾರ್ ಪುಸ್ತಕದಲ್ಲಿ ಬರೆದಿದ್ದರು.
ಇದಿಷ್ಟು ಮಾತ್ರ ಅಲ್ಲದೆ ಅದಾನಿ ಕಲ್ಲಿದ್ದಲು ವಲಯದಲ್ಲಿ ಒಳ್ಳೆಯ ಹೆಸರು ಮಾಡಿದರು ಮತ್ತು ನನ್ನದೇ ಸಲಹೆಯಂತೆ ಉಷ್ಣ ವಿದ್ಯುತ್ ವಲಯಕ್ಕೆ ಪಾದಾರ್ಪಣೆ ಮಾಡಿದ್ದರು ಎಂದು ಪವಾರ್ ಬರೆದಿದ್ದಾರೆ.