ಮುಂಬೈ : ಬಾಲಿವುಡ್ ಸೂಪರ್‌ಸ್ಟಾರ್, ಅಭಿಮಾನಿಗಳಿಂದ ಪ್ರೀತಿಯಿಂದ ಕಿಂಗ್ ಖಾನ್ ಎಂದು ಕರೆಸಿಕೊಳ್ಳುವ ಶಾರುಖ್ ಖಾನ್ ಶನಿವಾರ 59 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಮುಂಬೈನಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿ ಹುಟ್ಟುಹಬ್ಬ ಆಚರಿಸಿದ್ದಾರೆ.
ಇದೇ ವೇಳೆ ಶಾರುಕ್ ಖಾನ್ ತಮ್ಮ ಸಿನಿಮಾಗಳ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದು, ಅಭಿಮಾನಿಗಳೊಂದಿಗೆ ಕೂಡ ನೃತ್ಯ ಮಾಡಿದ್ದು, ಜೊತೆಗೆ ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅವರ ಮೋಜಿನ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಮುಂದಿನ 10 ವರ್ಷಗಳ ಕಾಲ ಅತ್ಯಂತ ವಿಶೇಷ ಚಿತ್ರಗಳೊಂದಿಗೆ ನಿಮಗೆ ಮನರಂಜನೆ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ನಾನು ಹೃದಯದಿಂದ ಹೇಳಲು ಬಯಸುತ್ತೇನೆ. ಇಲ್ಲಿಂದ
ಮುಂದಿನ 10 ವರ್ಷಗಳ ಚಲನಚಿತ್ರಗಳು, ನಾನು ನಿಜವಾಗಿಯೂ ನಿಮ್ಮೆಲ್ಲರನ್ನೂ ಸಂತೋಷದಿಂದ ಮನರಂಜಿಸಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಶೀಘ್ರದಲ್ಲೇ ತಮ್ಮ ಹೊಸ ಚಿತ್ರದೊಂದಿಗೆ ಬರುವುದಾಗಿ ಎಸ್‌ಆರ್‌ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.