ಮುಂಬಯಿ: ಬಾಲಿವುಡ್ ಬಾದ್‌ಶಾ , ಕಿಂಗ್ ಖಾನ್ ಶಾರುಖ್ ಹೊಸ ಕಾರ್ ಖರೀದಿಸಿದ್ದಾರೆ. ನೆನ್ನೆ ರಾತ್ರಿ ತಾವೇ ಸ್ವತಃ ಮುಂಬಯಿ ನಗರದ ರಸ್ತೆಗಳಲ್ಲಿ ಕಾರ್ ಡ್ರೈವ್ ಮಾಡಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬರೊಬ್ಬರಿ 10 ಕೋಟಿ ಮೊತ್ತದ ರೋಲ್ಸ್ ರಾಯ್ಸ್ ಕಲ್ಲಿಯನ್ ಬ್ಲ್ಯಾಕ್ ಬ್ಯಾಡ್ಜ್ ಕಾರ್ ಖರೀದಿಸಿದ್ದಾರೆ ಶಾರುಖ್. ಪಠಾಣ್ ಚಿತ್ರ 1000 ಕೋಟಿ ವಹಿವಾಟು ಮಾಡಿ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ಯಶಸ್ಸನ್ನು ಸೆಲೆಬ್ರೇಟ್ ಮಾಡಲು ಕಾರ್ ಖರೀದಿಸಿದ್ದಾರೆ ಎನ್ನಲಾಗಿದ್ದು ಶಾರುಖ್ ಖಾನ್‌ರ ಕ್ರೇಜಿ ಕಾರ್ ಕಲೆಕ್ಷನ್ ಸಾಲಿಗೆ ಇದು ಹೊಸ ಸೇರ್ಪಡೆಯಾಗಿದೆ ಇದನ್ನು ಅವರ ಫ್ಯಾನ್ಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಫ್ಯಾಂಟಮ್ ಡ್ರಾಪ್‌ಹೆಡ್ ಕೂಪೆ, ಲ್ಯಾಂಡ್ ರೋವರ್, ರೇಂಜ್ ರೋವರ್ ಸ್ಪೋರ್ಟ್ ಮತ್ತು BMW i8, ಟೊಯೊಟಾ ಲ್ಯಾಂಡ್ ಕ್ರೂಸರ್, ಮಿತ್ಸುಬಿಷಿ ಪಜೆರೊ ಮತ್ತು BMW 6-ಸರಣಿ ಕನ್ವರ್ಟಿಬಲ್ ಕಾರ್ ಜೊತೆಗೆ ಹ್ಯುಂಡೈ ಸ್ಯಾಂಟ್ರೊ ಮತ್ತು ಕ್ರೆಟಾ ಕಲೆಕ್ಷನ್ ಕಿಂಗ್ ಖಾನ್ ಬಳಿಯಿದೆ.