Wednesday, February 19, 2025
Homeಟಾಪ್ ನ್ಯೂಸ್ವಿಶ್ವದ 100 ಪ್ರಭಾವಿಗಳಲ್ಲಿ ಶಾರುಖ್‌ ಖಾನ್‌ ಗೆ ನಂ. 1 ಪಟ್ಟ: TIME ಸಮೀಕ್ಷೆ

ವಿಶ್ವದ 100 ಪ್ರಭಾವಿಗಳಲ್ಲಿ ಶಾರುಖ್‌ ಖಾನ್‌ ಗೆ ನಂ. 1 ಪಟ್ಟ: TIME ಸಮೀಕ್ಷೆ

ಪಠಾಣ್‌ ಮೂಲಕ ಭರ್ಜರಿ ಕಮ್‌ ಬ್ಯಾಕ್‌ ಮಾಡಿರುವ ಬಾಲಿವುಡ್‌ ಬಾದ್‌ ಷಾ  ಶಾರುಖ್​ ಖಾನ್​​ ವಿಶ್ವದ ನಂ.1 ಪ್ರಭಾವಿ ಎನಿಸಿಕೊಂಡಿದ್ದಾರೆ. Time ಮ್ಯಾಗಝಿನ್‌ ನ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್​ ಖಾನ್​ ಅವರಿಗೆ ನಂಬರ್​ ಒನ್​ ಪಟ್ಟ ಸಿಕ್ಕಿದೆ.

ಅಮೆರಿಕದ ಪ್ರತಿಷ್ಠಿತ ಮ್ಯಾಗಝಿನ್‌ ಟೈಮ್ ನ ಓದುಗರ ಸಮೀಕ್ಷೆಯಲ್ಲಿ ಈ ಫಲಿತಾಂಶ ಬಂದಿದೆ. ಸಿನಿಮಾ, ರಾಜಕೀಯ, ಉದ್ಯಮ, ಕ್ರೀಡೆ, ಸಾಮಾಜಿಕ ಕಾರ್ಯ ಮುಂತಾದ ಕ್ಷೇತ್ರಗಳಲ್ಲಿರುವ ಪ್ರಭಾವಿಗಳನ್ನು ಮೀರಿಸಿ ಶಾರುಖ್​ ಖಾನ್​ ನಂಬರ್​ ಒನ್​ ಪಟ್ಟಕ್ಕೆ ಏರಿದ್ದಾರೆ.  

ಈ ಸಮೀಕ್ಷೆಯಲ್ಲಿ ಚಲಾವಣೆಯಾದ ಒಟ್ಟು 12 ಲಕ್ಷ ಮತಗಳಲ್ಲಿ ಶಾರುಖ್ ಖಾನ್‌ ಅವರು ಶೇ 4 ರಷ್ಟು ಮತ ಗಳಿಸಿದ್ದಾರೆ. ಇರಾನ್‌ ನ ಹಿಜಾಬಿ ವಿರೋಧಿ ಪ್ರತಿಭಟನಾಕಾರ್ತಿ ಮಹ್ಸಾ ಅಮಿನಿ ಎರಡನೇ ಸ್ಥಾನ ಪಡೆದುಕೊಂಡಿದ್ದು, ಶೇ 3 ರಷ್ಟು ಮತ ಪಡೆದುಕೊಂಡಿದ್ದಾರೆ. ಆರೋಗ್ಯ ಕಾರ್ಯಕರ್ತರು ಶೇ.2ರಷ್ಟು ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಮಾರ್ಕೆಲ್ ಅವರು ಸಮೀಕ್ಷೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ 1.8 ರಷ್ಟು ಮತಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!