Wednesday, November 13, 2024
Homeಟಾಪ್ ನ್ಯೂಸ್ಹಿರಿಯ ಕಲಾವಿದ ಬೆಳಕಲ್ಲು ವೀರಣ್ಣ ಇನ್ನಿಲ್ಲ

ಹಿರಿಯ ಕಲಾವಿದ ಬೆಳಕಲ್ಲು ವೀರಣ್ಣ ಇನ್ನಿಲ್ಲ

ಚಿತ್ರದುರ್ಗ: ನಾಡೋಜ ಪ್ರಶಸ್ತಿ ವಿಜೇತ ತೊಗಲು ಗೊಂಬೆ ಕಲಾವಿದ ಬೆಳಕಲ್ಲು ವೀರಣ್ಣ ಮೃತಪಟ್ಟಿದ್ದಾರೆ. ಇಂದು ಮುಂಜಾನೆ 8 ಘಂಟೆಗೆ ಸಂಭವಿಸಿದ ಕಾರು ಅಪಘಾತದಲ್ಲಿ ವೀರಣ್ಣ ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ‌ ಹಿರೇಹಳ್ಳಿ ಗ್ರಾಮದ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಮೃತರು ತಮ್ಮ ಮಗನ ಜೊತೆ ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ವೀರಣ್ಣ ಮೃತಪಟ್ಟಿದ್ದು ಅವರ ಪುತ್ರ ಹನುಮಂತ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

91 ವರ್ಷದವರಾಗಿದ್ದ ಬೆಳಕಲ್ಲು ವೀರಣ್ಣ ಹಿರಿಯ ರಂಗಭೂಮಿ ಕಲಾವಿದರು ಹಾಗೂ ತೊಗಲುಗೊಂಬೆಯಾಟ ಕಲಾವಿದರಾಗಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು.

ಹೆಚ್ಚಿನ ಸುದ್ದಿ

error: Content is protected !!