Saturday, May 16, 2026
Homeಟಾಪ್ ನ್ಯೂಸ್WEST BENGAL : ದೀದಿ ಮನೆಯೆದುರು ನಿಯೋಜಿಸಿದ್ದ ಹೈ ಸೆಕ್ಯುರಿಟಿ ಪೊಲೀಸ್ ಭದ್ರತೆ ವಾಪಸ್!

WEST BENGAL : ದೀದಿ ಮನೆಯೆದುರು ನಿಯೋಜಿಸಿದ್ದ ಹೈ ಸೆಕ್ಯುರಿಟಿ ಪೊಲೀಸ್ ಭದ್ರತೆ ವಾಪಸ್!

ಕೋಲ್ಕತ್ತಾ: ಪಶ್ಚಿಮ ಬಂಗಾಳ(West Bengal) ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಪರಾಭವಗೊಂಡು ಅಧಿಕಾರ ಕೈತಪ್ಪಿದ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರ ಭದ್ರತೆಯೂ ಕಡಿತಗೊಂಡಿದೆ.

ಕೋಲ್ಕತ್ತಾದ ಕಾಳೀಘಾಟ್‌ನಲ್ಲಿರುವ ಅವರ ಅಧಿಕೃತ ನಿವಾಸದ ಸುತ್ತಮುತ್ತ ಪೊಲೀಸರು ಹಾಕಿದ್ದ ಎಲ್ಲಾ ಹೈ-ಸೆಕ್ಯುರಿಟಿ ಬ್ಯಾರಿಕೇಡ್‌ಗಳನ್ನು ಇಲಾಖೆಯು ತೆರವುಗೊಳಿಸಿದೆ.

ರಾಜ್ಯದಲ್ಲಿ ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಹಿನ್ನೆಲೆಯಲ್ಲಿ ಅತ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ನೀಡಲಾಗಿತ್ತು.

ಅವರ ನಿವಾಸದ ರಸ್ತೆಯುದ್ದಕ್ಕೂ ಸಾರ್ವಜನಿಕರ ಪ್ರವೇಶವನ್ನು ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಕಟ್ಟುನಿಟ್ಟಿನ ಕಾವಲು ಕಾಯಲಾಗುತ್ತಿತ್ತು. ಆದರೆ, ಇತ್ತೀಚಿನ ಚುನಾವಣೆಯಲ್ಲಿ ಭಾರಿ ಸೋಲು ಕಂಡು ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆಯೇ ಕೋಲ್ಕತ್ತಾ ಪೊಲೀಸರು ಅವರ ನಿವಾಸದ ಮುಂದಿದ್ದ ಭದ್ರತಾ ವ್ಯವಸ್ಥೆಗಳನ್ನು ಹಿಂಪಡೆದಿದ್ದಾರೆ.

ಅಧಿಕಾರ ಕಳೆದುಕೊಂಡ ಕೆಲವೇ ಗಂಟೆಗಳಲ್ಲಿ ಈ ಪ್ರಮುಖ ಬದಲಾವಣೆ ನಡೆದಿದ್ದು, ಅವರ ನಿವಾಸದ ರಸ್ತೆಯಲ್ಲಿ ಈಗ ಸಾರ್ವಜನಿಕ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ರಾಜಕೀಯ ಬದಲಾವಣೆಯ ಬೆನ್ನಲ್ಲೇ ನಡೆದಿರುವ ಈ ಭದ್ರತಾ ಕಡಿತದ ಪ್ರಕ್ರಿಯೆಯು ಬಂಗಾಳದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಭಾರತದ ವಿವಿಐಪಿ (VVIP) ಭದ್ರತಾ ನಿಯಮಾವಳಿಗಳ ಪ್ರಕಾರ, ಮುಖ್ಯಮಂತ್ರಿ ಸ್ಥಾನದಲ್ಲಿರುವವರಿಗೆ ಸ್ವಯಂಚಾಲಿತವಾಗಿ ಅತ್ಯುನ್ನತ ಮಟ್ಟದ ‘Z+’ ಅಥವಾ ವಿಶೇಷ ಶ್ರೇಣಿಯ ಭದ್ರತೆಯನ್ನು ನೀಡಲಾಗುತ್ತದೆ. ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆಯೇ, ನಿಯಮದ ಪ್ರಕಾರ ಅವರ ಅಧಿಕೃತ ಭದ್ರತಾ ಕೋಟೆಯನ್ನು ಸಡಿಲಗೊಳಿಸಲಾಗಿದೆ.

ಕಾಳೀಘಾಟ್ ನಿವಾಸದ ಚಿತ್ರಣ

ಕೋಲ್ಕತ್ತಾದ ಕಾಳೀಘಾಟ್‌ನಲ್ಲಿರುವ ಮಮತಾ ಬ್ಯಾನರ್ಜಿ ಅವರ ನಿವಾಸದ ರಸ್ತೆಯು ಕಳೆದ ೧೪ ವರ್ಷಗಳಿಂದ ಅತ್ಯಂತ ನಿರ್ಬಂಧಿತ ವಲಯವಾಗಿತ್ತು. ಅಲ್ಲಿಗೆ ಸಾರ್ವಜನಿಕರು ಅಥವಾ ವಾಹನಗಳು ಪ್ರವೇಶಿಸಲು ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿತ್ತು.

ಆದರೆ ಇದೀಗ ಪೊಲೀಸರು ವಾಹನ ಸವಾರರನ್ನು ತಡೆಯಲು ಹಾಕಿದ್ದ ಬ್ಯಾರಿಕೇಡ್‌ಗಳು, ತಾತ್ಕಾಲಿಕ ಪೊಲೀಸ್ ಚೌಕಿಗಳು ಮತ್ತು ಕಾವಲು ಗೋಪುರಗಳನ್ನು (Watchtowers) ಸಂಪೂರ್ಣವಾಗಿ ತೆರವುಗೊಳಿಸಿದ್ದಾರೆ.

ಬೆಂಗಾವಲು ವಾಹನಗಳ ಕಡಿತ
ಮುಖ್ಯಮಂತ್ರಿಯಾಗಿದ್ದಾಗ ಅವರ ಜೊತೆ ಇರುತ್ತಿದ್ದ ಜ್ಯಾಮರ್ ವಾಹನಗಳು, ಆಂಬುಲೆನ್ಸ್ ಹಾಗೂ ಕಮಾಂಡೋಗಳ ಸುದೀರ್ಘ ಬೆಂಗಾವಲು ಪಡೆಗಳನ್ನು (Convoy) ಹಿಂದಕ್ಕೆ ಪಡೆಯಲಾಗಿದೆ. ಸದ್ಯಕ್ಕೆ ಅವರಿಗೆ ಕೇವಲ ಮಾಜಿ ಮುಖ್ಯಮಂತ್ರಿಗಳಿಗೆ ನೀಡಲಾಗುವ ಸಾಮಾನ್ಯ ಶ್ರೇಣಿಯ ಸುರಕ್ಷತೆಯನ್ನು ಮಾತ್ರ ಮುಂದುವರಿಸಲಾಗಿದೆ.

ಇದನ್ನೂ ಓದಿ : ಹಣ ವಾಪಸ್ ಕೇಳಿದ್ದಕ್ಕೆ ಜಾತಿ ನಿಂದನೆ ಆರೋಪ – ಪಲಾಶ್ ಮುಚ್ಚಲ್ ವಿರುದ್ಧ ದೂರು ದಾಖಲು

ಹೆಚ್ಚಿನ ಸುದ್ದಿ

Change Language »
error: Content is protected !!