ಉತ್ತರ ಪ್ರದೇಶ : ವಾರಣಾಸಿಯಲ್ಲಿ ಪ್ರಧಾನಿ ಮೋದಿಯವರ ರೋಡ್ ಶೋನಲ್ಲಿ ಭದ್ರತಾ ಲೋಪ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಾರಣಾಸಿಗೆ ಭೇಟಿ ನೀಡಿದ ಸಂದರ್ಭ ಅವರಿದ್ದ ಬುಲೆಟ್ ಪ್ರೂಫ್ ವಾಹನದ ಮೇಲೆ ವಸ್ತುವೊಂದು ಎಸೆದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕ್ಷೇತ್ರ ವಾರಣಾಸಿಗೆ ಮೊದಲ ಭೇಟಿ ನೀಡಿದಾಗ ಈ ಘಟನೆ ನಡೆದಿದೆ .
WATCH –pic.twitter.com/dM9weeR8Iz
— Times Algebra (@TimesAlgebraIND) June 19, 2024
ವಾರಣಾಸಿಯ ಜನನಿಬಿಡ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರ ಕಾರಿನ ಮೇಲೆ ಚಪ್ಪಲಿ ಎಸೆಯಲಾಗಿದೆಯೇ? ಅಥವಾ ಪ್ರಧಾನಿಯವರ ಬಿಗಿ ಭದ್ರತೆಯ ವಾಹನದ ಮೇಲೆ ಕಸದ ತುಣುಕು ಬಂದು ಕುಳಿತಿತೇ? ಎಂಬ ಪ್ರಶ್ನೆಗಳನ್ನು ವೈರಲ್ ವೀಡಿಯೊ ಹುಟ್ಟುಹಾಕಿದೆ.