100 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಬಗ್ಗೆ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯ ಸಭೆಯು ದಿಲ್ಲಿಯಲ್ಲಿ ಇಂದು ನಡೆಯಲಿದೆ.
ಈಗಾಗಲೇ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಮೊದಲಾದವರು ದಿಲ್ಲಿಗೆ ತೆರಳಿದ್ದಾರೆ. ಟಿಕೆಟ್ ಆಕಾಂಕ್ಷಿಗಳು ದೊಡ್ಡ ಸಂಖ್ಯೆಯಲ್ಲಿ ದಿಲ್ಲಿ ತಲುಪಿದ್ದು, ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ.
ಮೊದಲ ಹಂತದಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಗೆ ಎರಡನೇ ಪಟ್ಟಿ ಬಿಡುಗಡೆಗೆ ಹಲವು ಸವಾಲು ಎದುರಾಗಿದೆ.
ಒಂದೇ ಹೆಸರನ್ನು ಕಳುಹಿಸಿರುವ 60 ಕ್ಷೇತ್ರಗಳ ಅಭ್ಯರ್ಥಿಗಳನ್ನು ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಮಿತಿಯು ತೆರವುಗೊಳಿಸುವ ನಿರೀಕ್ಷೆಯಿದೆ.
ರಾಜ್ಯ ಸ್ಕ್ರೀನಿಂಗ್ ಎರಡು ಹೆಸರುಗಳನ್ನು ಕಳುಹಿಸಿರುವ 32 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ನಾಯಕರು ಚರ್ಚಿಸಲಿದ್ದಾರೆ. ಇನ್ನೂ ಏಳು ಕ್ಷೇತ್ರಗಳಿಗೆ, ರಾಜ್ಯ ಸ್ಕ್ರೀನಿಂಗ್ ಸಮಿತಿಯು ತಲಾ ನಾಲ್ಕು ಹೆಸರುಗಳನ್ನು ಕಳುಹಿಸಿದೆ. ಇವೆಲ್ಲವನ್ನೂ ಮಂಗಳವಾರವೇ ಕೇಂದ್ರ ಸಮಿತಿಯು ತೆರವುಗೊಳಿಸುವ ನಿರೀಕ್ಷೆ ಇದೆ.