Wednesday, December 4, 2024
Homeಟಾಪ್ ನ್ಯೂಸ್VIRAL: ಡಿವೈಡರ್‌ಗೆ ಡಿಕ್ಕಿ ಹೊಡೆದು ಹಾರಿ ಬಿದ್ದ ಸ್ಕೂಟರ್‌ ಸವಾರ- ವಿಡಿಯೋ ವೈರಲ್‌

VIRAL: ಡಿವೈಡರ್‌ಗೆ ಡಿಕ್ಕಿ ಹೊಡೆದು ಹಾರಿ ಬಿದ್ದ ಸ್ಕೂಟರ್‌ ಸವಾರ- ವಿಡಿಯೋ ವೈರಲ್‌

ನವದೆಹಲಿ: ಸ್ಕೂಟರ್‌ ಸವಾರನೊಬ್ಬ ಜನನಿಬಿಡ ರಸ್ತೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಹಾರಿ ಬಿದ್ದುರುವ ಘಟನೆಯೊಂದು ದೆಹಲಿಯಲ್ಲಿ ನಡೆದಿದ್ದು,ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಘಟನೆ ದೆಹಲಿಯ ಜಹಾಂಗೀರ್ಪುರಿಯಲ್ಲಿ ನಡೆದಿದೆ. ಸ್ಥಳೀಯ ಸಿಸಿಟಿವಿಯಲ್ಲಿ ಘಟನೆಯ ವಿಡಿಯೋ ಸೆರೆಯಾಗಿದೆ. ವೈರಲ್‌ ವಿಡಿಯೋಗೆ ನೆಟ್ಟಿಗರು ಹಾಸ್ಯಮಯವಾಗಿ ಕಾಮೆಂಟ್‌ ಮಾಡಿದ್ದಾರೆ.

ವಿಡಿಯೋದಲ್ಲಿ ವ್ಯಕ್ತಿ ತನ್ನ ಸ್ಕೂಟರ್‌ನಲ್ಲಿ ವೇಗವಾಗಿ ಬಂದು, ಡಿವೈಡರ್‌ ಮೇಲೆಯೇ ಓಡಿಸಿದ್ದಾನೆ. ಈ ವೇಳೆ ಆತ ಸ್ಕೂಟರ್‌ ಸಮೇತ ಗಾಳಿಯಲ್ಲಿ ಹಾರಿ, ಎದುರಿನಿಂದ ಬರುತ್ತಿದ್ದ ವಾಹನವೊಂದರ ಬಾನೆಟ್‌ ಮೇಲೆ ಬಿದ್ದಿದ್ದಾನೆ.

ಅದೃಷ್ಟವಶಾತ್‌ ಅಪಘಾತದಲ್ಲಿ ವ್ಯಕ್ತಿಗೆ ಯಾವುದೇ ಗಾಯಗಳಾಗಿಲ್ಲ. ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದ ವಾಹನ ಸವಾರರು ಗಾಬರಿಯಿಂದ ವಾಹನಗಳನ್ನು ನಿಲ್ಲಿಸಿ ಆತನ ಕಡೆಗೆ ನೋಡಿದ್ದಾರೆ. ಆದರೆ ಬಾನೆಟ್‌ ಮೇಲೆ ಬಿದ್ದ ವ್ಯಕ್ತಿ ತಾನೇ ಅಲ್ಲಿಂದ ಎದ್ದು, ಏನೂ ಆಗದಂತೆ ವರ್ತಿಸಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.

 

ಹೆಚ್ಚಿನ ಸುದ್ದಿ

error: Content is protected !!