ವುಹಾನ್: 2020ರಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಸ್ಪೋಟಗೊಂಡಾಗ ಚೀನಾದ ವುಹಾನ್ ಮಾರುಕಟ್ಟೆಯಿಂದ ತೆಗದಿದ್ದ ಮಾದರಿಗಳ ಅಧ್ಯಯನ ನಡೆಸಿರುವ ಚೀನಾದ ಸಂಶೋಧಕರ ತಂಡ ಈ ಮಾದರಿಗಳ ವಿಶ್ಲೇಷಣೆಯನ್ನು ಬಿಡುಗಡೆ ಮಾಡಿದೆ.
ಸಾಂಕ್ರಾಮಿಕ ಹೇಗೆ ಪ್ರಾರಂಭವಾಯಿತು ಎಂಬ ನಿಗೂಢತೆ ಪ್ರಶ್ನೆಗೆ ಸರಿಯಾದ ಉತ್ತರ ಇಲ್ಲದಿದ್ದರೂ ಕೋವಿಡ್ ಕುರಿತ ಅಧ್ಯಯನಗಳಿಗೆ ಈ ವರದಿ ಸಹಕಾರಿಯಾಗಲಿದೆ ಎನ್ನಲಾಗಿದೆ.
ವುಹಾನ್ ಮಾರುಕಟ್ಟೆಯಿಂದ ಪಡೆಯಲಾದ ಮಾದರಿಗಳಲ್ಲಿ ಪ್ರಾಣಿಗಳ ಡಿಎನ್ ಎ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
ಮನುಷ್ಯರಿಗೆ ಈ ವೈರಸ್ ಹರಡುವಲ್ಲಿ ಪ್ರಾಣಿಗಳು ಮಧ್ಯವರ್ತಿಯ ಪಾತ್ರ ವಹಿಸಿರಬಹುದು. ಆದರೆ ಹೊಸ ಸಂಶೋಧನೆಗಳ ಹೊರತಾಗಿಯೂ ಕೋವಿಡ್ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ ಎನ್ನುವುದಕ್ಕೆ ವಿಜ್ಞಾನಿಗಳಲ್ಲಿ ಬಲವಾದ ಸಾಕ್ಷ್ಯಗಳಿಲ್ಲ ಎನ್ನಲಾಗಿದೆ.
ಜನವರಿ 1, 2020 ರಂದು ಮುಚ್ಚಿದ ನಂತರ ಹುನಾನ್ ಮಾರುಕಟ್ಟೆಯಿಂದ 923 ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಜನವರಿ 18ರಿಂದ 18 ಜಾತಿಯ ಪ್ರಾಣಿಗಳಿಂದ 457 ಮಾದರಿಗಳನ್ನು ಸಂಗ್ರಹಿಸಲಾಗಿತ್ತು.