Monday, January 19, 2026
Homeಟಾಪ್ ನ್ಯೂಸ್ಹೆಚ್ಚು ಅಂಕ ಬೇಕಾದ್ರೆ ಕಮಿಟ್ ಆಗು : ಲೈಂಗಿಕ ಕಿರುಕುಳ ನೀಡಿದ ಪ್ರಿನ್ಸಿಪಾಲ್ ಬಂಧನ

ಹೆಚ್ಚು ಅಂಕ ಬೇಕಾದ್ರೆ ಕಮಿಟ್ ಆಗು : ಲೈಂಗಿಕ ಕಿರುಕುಳ ನೀಡಿದ ಪ್ರಿನ್ಸಿಪಾಲ್ ಬಂಧನ

ರಾಯಚೂರು: ಚಾಟಿಂಗ್, ಮೇಸೆಜ್ ಮಾಡಿ, ಕೊಠಡಿ ಕರೆದು ಅನುಚಿತವಾಗಿ ವರ್ತಿಸಿ ವಿದ್ಯಾರ್ಥಿನಿಗೆ ಪ್ರಾಂಶುಪಾಲ ಲೈಂಗಿಕ ಕಿರುಕುಳ ನೀಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರಿನ ಶಕ್ತಿನಗರದ ಕೆಪಿಸಿಎಲ್ ಡಿಎವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥನಿಗೆ ಕಾಲ್, ವಾಟ್ಸಪ್ ಚಾಟಿಂಗ್, ತಮ್ಮ ಕೊಠಡಿ ಕರೆದು ಮೈ ಕೈ ಮುಟ್ಟುವ ಮೂಲಕ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ ಪ್ರಿನ್ಸ್ ಪಾಲ್ ವಿಜಯಕುಮಾರ ಅಂಗಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಕಳೆದ 6 ತಿಂಗಳನಿಂದ ವಿನಾಕಾರಣ ಆಗಾಗ ಕೊಠಡಿಗೆ ಕರೆದು ಮೈ ಕೈ ಮುಟ್ಟುವುದು, ಮೊಬೈಲ್ ಕರೆ ಮಾಡಿ ಅಸಭ್ಯವಾಗಿ ಮಾಡುವುದು, ಚಾಟಿಂಗ್ ಮಾಡುತ್ತಿದ್ದಾರೆ. ಅಲ್ಲದೇ ಕಳೆದ 2023 ಮಾ.16ರಂದು ಮಧ್ಯಾಹ್ನ 1 ಗಂಟೆಗೆ ಶಾಲೆಯ ಕೊಠಡಿಗೆ ಕರೆದು ತಮ್ಮ ಚೇಂಬರ್ ಕರೆದು ನನ್ನೊಂದಿಗೆ ಕಮಿಟ್ ಆದ್ರೆ ಉತ್ತಮ ಅಂಕಗಳನ್ನು ನೀಡುತ್ತೇನೆ, ಮುಂದೆ ಕಾಲೇಜು ವ್ಯಾಸಂಗಕ್ಕೆ ತಾನೇ ಫೀಸ್ ಕಟ್ಟೋದಾಗಿ ಆಮಿಷ ತೋರಿಸಿ, ಮೈಕೈಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

ಈ ವಿಷಯವನ್ನು ಹೇಳಿದರೆ ವಿದ್ಯಾಬ್ಯಾಸಕ್ಕೆ ತೊಂದರೆ ಆಗುತ್ತದೆ ಎಂದು ಸುಮ್ಮನಿದ್ದ ವಿದ್ಯಾರ್ಥಿನಿಇತ್ತೀಚೆಗೆ ಚಾಟಿಂಗ್ ಮಾಡುವುದು, ಕಾಲ್ ಮಾಡಿ ಅಸಭ್ಯವಾಗಿ ಮಾತನಾಡುವುದು ಹೆಚ್ಚಾಗಿತ್ತು. ಅವರ ವರ್ತನೆ, ಕಿರುಕುಳುತಾಳಲಾರದೆ ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ

ವಿಷಯ ತಿಳಿದ ಗಾಬರಿಕೊಂಡು ಪೊಷಕರು, ಸ್ಥಳೀಯರು, ಸಂಘಟನೆಯವರು ಶಾಲೆಗೆ ತೆರಳಿ ಪ್ಸಿನ್ಸ್ ಪಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಲ್ಲೆಮುಂದಾಗಿದ್ದಾರೆ. ಆದರೆವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಆರುಪಿಯನ್ನು ವಶಕ್ಕೆಪಡೆದುಕೊಂಡಿದ್ದಾರೆ.

ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ದ ಪೋಕ್ಸೊ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!