ಬಳ್ಳಾರಿ : ಇತ್ತೀಚೆಗೆ ಮಕ್ಕಳ ನಡವಳಿಕೆಯಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಕಂಡುಬರುತ್ತಿದೆ. ಶಾಲಾ ಮಕ್ಕಳು ರೌಡಿಗಳ ರೀತಿ ವರ್ತಿಸುತ್ತಿದ್ದಾರೆ.ಈ ಮಾತಿಗೆ ಮತ್ತೊಂದು ಉದಾಹರಣೆ ಸಿಕ್ಕಿದೆ.
ಪುಡಿ ರೌಡಿಗಳಂತೆ ಸರ್ಕಾರಿ ಶಾಲೆಯಲ್ಲಿ, ಸಮವಸ್ತ್ರದಲ್ಲೇ ಮಕ್ಕಳು ಬಡಿಡಾಡಿಕೊಂಡಿದ್ದಾರೆ.
ಶಾಲಾ ಕೊಠಡಿಯ ಮುಂಭಾಗದಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ವಿದ್ಯಾಲಯದಲ್ಲಿ ನಡೆದಿದೆ.
ವಿದ್ಯಾರ್ಥಿಗಳು ಹೊಡೆದಾಟದ ಭಯಾನಕ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಓರ್ವ ವಿದ್ಯಾರ್ಥಿಯನ್ನ ನೆಲಕ್ಕೆಡವಿ ಹತ್ತಾರು ವಿದ್ಯಾರ್ಥಿಗಳು ಏಕಕಾಲಕ್ಕೆ ಹಲ್ಲೆ ಮಾಡಿದ್ದರು. ನೆಲಕ್ಕೆ ಹಾಕಿ ಒದ್ದು ಹಲ್ಲೆ ಮಾಡಿರುವ ವಿದ್ಯಾರ್ಥಿಗಳು, ಶಾಲೆಯಲ್ಲಿ ಶಿಕ್ಷಕರಿದ್ದರೂ ಡೋಂಟ್ ಕೇರ್ ಎಂದಿದ್ದಾರೆ. ವಿದ್ಯಾರ್ಥಿಗಳ ದುಂಡಾವರ್ತನೆ ಎಲ್ಲರನ್ನು ಬೆಚ್ಚಿಬೀಳಿಸಿದೆ.