Sunday, January 25, 2026
Homeಕ್ರೈಂRAPE : 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ - ಶಾಲಾ ಬಸ್ ಚಾಲಕ ಅರೆಸ್ಟ್

RAPE : 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ – ಶಾಲಾ ಬಸ್ ಚಾಲಕ ಅರೆಸ್ಟ್

ಉತ್ತರಪ್ರದೇಶ : ಇಲ್ಲಿನ ಲಕ್ನೋ ದಲ್ಲಿ ಆಘಾತಕಾರಿ ಗಹತನೆ ನಡೆದಿದ್ದು ಸ್ಕೂಲ್ ವ್ಯಾನ್‌ನಲ್ಲಿ ಕೇವಲ 4 ವರ್ಷದ ಬಾಲಕಿ ಮೇಲೆ ಸ್ವತಃ ಸ್ಕೂಲ್ ವಾಹನದ ಚಾಲಕ ಅತ್ಯಾಚಾರ ನಡೆಸಿ ವಿಕೃತಿ ಮರೆದಿರುವ ಘನಘೋರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ವ್ಯೂ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ.

ಹೌದು, ಇಲ್ಲಿನ ಮೊಹಮ್ಮದ್ ಆರಿಫ್ ಎಂಬ ವಿಕೃತ ವ್ಯಕ್ತಿ ಈ ಹೀನ ಕೃತ್ಯವೆಸಗಿದ್ದಾನೆ.ಈತ ಶಾಲಾ ವಾಹನ ಚಾಲಕ.ಈ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಎಚ್ಚೆತ್ತ ಪೊಲೀಸರು ತನಿಖೆಗಾಗಿ ಎರಡು ತಂಡಗಳನ್ನು ರಚಿಸಿದ್ದಾರೆ. ಈ ನೀಚ ಕೃತ್ಯವೆಸಗಿ ಪರಾರಿಯಾಗಿರುವ ಆರೋಪಿಗಾಗಿ ಹುಡುಕಾಟ ಆರಂಭವಾಗಿದೆ.

ಈ ಘಟನೆ ಜುಲೈ 17 ರಂದು ನಡೆದಿದ್ದು, ವಿಚಾರ ಗಮನಕ್ಕೆ ಬರುತ್ತಿದ್ದಂತೆ ಬಾಲಕಿಯ ತಾಯಿ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಇವರ 4 ವರ್ಷದ ಮಗಳು ಶಾಲೆಯಲ್ಲಿ ಓದುತ್ತಿದ್ದು, ಸ್ಕೂಲ್ ವ್ಯಾನ್ ಚಾಲಕ ಆರಿಫ್ ಎಂಬಾತ ತಮ್ಮ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ.ಇನ್ನೂ ಆಘಾತಕಾರಿ ಎಂದರೆ ಈ ಬಗ್ಗೆ ಪೋಷಕರು ಶಾಲಾ ಪ್ರಾಂಶುಪಾಲರಿಗೆ ದೂರು ನೀಡಿದ್ದರೂ,ಅವರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ.

ಹೀಗೆ ದೌರ್ಜನ್ಯಕ್ಕೆ ಒಳಗಾಗಿರುವ ಮಗುವಿನ ತಾಯಿ ನೀಡಿರುವ ಹೇಳಿಕೆಯ ಪ್ರಕಾರ,ನನ್ನ ಮಗಳು ಆಕೆಯ ಖಾಸಗಿ ಭಾಗದಲ್ಲಿ ನೋವಿನ ಬಗ್ಗೆ ನನಗೆ ತಿಳಿಸಿದ್ದಳು. ಹೀಗಾಗಿ ಅವಳನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸಲಾಯಿತು.ಆ ವೇಕೆ ಆಕೆಯ ಖಾಸಗಿ ಭಾಗದಲ್ಲಿ ಗಾಯಗಳಾಗಿರುವುದು ಕಂಡುಬಂದಿದೆ.ಈ ಕುರಿತು ನಾನು ಪ್ರಾಂಶುಪಾಲರಿಗೆ ದೂರು ನೀಡಿದ್ದೇನೆ.ಆದ್ರೆ ಪ್ರಾಂಶುಪಾಲರು ಮಗುವಿನ ಭವಿಷ್ಯ ಮತ್ತು ಶಾಲೆಯ ಖ್ಯಾತಿ ಹಾಳಾಗುತ್ತದೆ ಎಂದು ದೂರು ನೀಡುವುದನ್ನು ನಿರಾಕರಿಸಿದ್ದರು ಎಂದು ಹೇಳಿಕೊಂಡಿದ್ದಾರೆ.

ಈ ಘಟನೆಯ ನಂತರವೂ ನಾನು ಎರಡು ದಿನ ಕಾದೆ.ಆದ್ರೆ ಆ ನಂತರವೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಆದ್ರೆ ಇಷ್ಟೆಲ್ಲಾ ಅನಾಹುತಗಳ ನಂತರವೂ ಮತ್ತೆ ಚಾಲಕ ಕರೆ ಮಾಡಿ ಮಗಳನ್ನು ಶಾಲಾ ವಾಹನದಲ್ಲಿ ಕಳುಹಿಸುವಂತೆ ಕೇಳಿದಾಗ ಅವನ ಮೇಲೆ ನಾವು ಕೋಪಗೊಂಡೆವು ಎಂದಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಕೂಡ ಶಾಲಾ ವಾಹನ ಚಾಲಕ ನಮ್ಮ ಮೇಲೆ ದೌರ್ಜನ್ಯ ಎಸಗಿ ಅಪಹರಣ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.ಆದ್ರೂ ಶಾಲೆಯ ಆಡಳಿತ ಮಂಡಳಿ ಆತನ ವಿರುದ್ಧ ದೂರು ನೀಡದಂತೆ ನಮಗೆ ತಾಕೀತು ಮಾಡಿದೆ ಮತ್ತು ಇದು ಕೇವಲ ಆರೋಪ ಅಲ್ಲ..ಈ ಬಗ್ಗೆ ನನ್ನ ಬಳಿ ಎಲ್ಲಾ ಸಾಕ್ಷಿಗಳಿವೆ ಎಂದು ಬಾಲಕಿಯ ತಾಯಿ ಹೇಳಿದ್ದಾರೆ.

ಈ ಬೆಳವಣಿಗೆಗಳ ನಂತರ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಶಾಲಾ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.ಈ ಪ್ರಕರಣದ ಕುರಿತು ತನಿಖೆ ನಡೆಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!