ಬೆಂಗಳೂರು: ಚುನಾವಣೆ ಬಂತೆಂದರೆ ರಾಜಕೀಯ ಮುಖಂಡರು, ನಟ, ನಟಿಯರು ತಾವು ಇಷ್ಟಪಟ್ಟ ಪಕ್ಷಕ್ಕೆ ಸೇರಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವುದು ಮಾಮೂಲು. ಅದರಲ್ಲಿ ಸ್ಯಾಂಡಲ್ ವುಡ್‌ನಲ್ಲಿ ನಟಿಯರಾದ, ಸುಮಲತಾ, ಉಮಾಶ್ರೀ, ಜಯಮಾಲಾ, ತಾರಾ, ರಮ್ಯಾ, ನಟರಲ್ಲಿ ಜಗ್ಗೇಶ್, ಸಾಧುಕೋಕಿಲ, ಶಶಿಕುಮಾರ್ ರಾಜಕೀಯ ಮೂಲಕ ಗುರುತಿಸಿಕೊಂಡಿದ್ದಾರೆ.
ಇದೀಗ 2023ರ ಚುನಾವಣೆಯಲ್ಲಿ ಕೆಲವು ದಿನಗಳಿಂದ ನಟ ಅನಂತ್ ನಾಗ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಆದರೆ ಇದುವರೆಗೂ ಇವರು ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಈ ಎಲ್ಲದರ ನಡುವೆ ಅನಂತ್ ನಾಗ್ ಅವರ ಆಪ್ತ ಮೂಲವು ರಾಜಕೀಯ ಪ್ರವೇಶಿಸುತ್ತಿಲ್ಲ ಎಂಬ ಮಾಹಿತಿ ನೀಡಿದೆ.
ಹೌದು ನಟ ಅನಂತ್ ನಾಗ್ ಅವರು ಯಾವುದೇ ಪಕ್ಷಕ್ಕೂ ಸೇರ್ಪಡೆಯಾಗುತ್ತಿಲ್ಲ. ಈ ವಿಚಾರದಲ್ಲಿ ಅವರು ದೃಢವಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನಟ ಅನಂತ್ ನಾಗ್ ಅವರ ಆಪ್ತ ಮೂಲಗಳು ತಿಳಿಸಿವೆ.