ಕೀನ್ಯಾ : ಮೋಹಕ ತಾರೆ ರಮ್ಯಾ ತಮ್ಮ 42ನೇ ವಸಂತಕ್ಕೆ ಕಾಲಿಟ್ಟಿದ್ದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದ್ರೆ ಈ ಬಾರಿಯ ಹುಟ್ಟಬಕ್ಕೆ ರಮ್ಯಾ ಕರ್ನಾಟಕದಲ್ಲಿ ಇರಲಿ, ಭಾರತದಲ್ಲೇ ಇಲ್ಲ, ಬದಲಾಗಿ ಕೀನ್ಯಾದ ಮಸಾಯಿ ಮಾರ ರಾಷ್ಟ್ರೀಯ ಮೀಸಲು ಪ್ರದೇಶದಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು,ಆಫ್ರಿಕಾದ ಕೀನ್ಯಾದ ಮಸಾಯಿ ಮಾರ ರಾಷ್ಟ್ರೀಯ ಮೀಸಲು ಪ್ರದೇಶಕ್ಕೆ ಗೆಳೆಯ ಸಂಜೀವ್ ಮೋಹನ್ ಅವರ ಜತೆಗೆ ಭೇಟಿ ಕೊಟ್ಟಿದ್ದಾರೆ.
ರಾಜಕಾರಣ ಮತ್ತು ನಟನೆಯಿಂದ ಎರಡರಿಂದಲೂ ದೂರ ಉಳಿದಿರುವ ರಮ್ಯಾ ಸೋಶಿಯಲ್ ಮೀಡಿಯಾ ಮೂಲಕ ಮಾತ್ರ ಅಭಿಮಾನಿಗಳ ಜೊತೆಗೆ ಟಚ್ ನಲ್ಲಿದ್ದಾರೆ. ಈ ಫೋಟೋಗಳನ್ನು ನೋಡಿದ ನಟಿಯ ಅಭಿಮಾನಿಗಳು, ಫೋಟೋ ಷೇರ್ ಮಾಡಿ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.
ಇದೇವೇಳೆ ಆದಷ್ಟು ಬೇಗ ತಾಯ್ನಾಡಿಗೆ ಮರಳಿ ಮತ್ತೆ ಕನ್ನಡ ಸಿನಿಮಾಗಳಲ್ಲಿ ಕಮ್ ಬ್ಯಾಕ್ ಮಾಡಿ ಪ್ಲೀಸ್ ಅಂತ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಮನವಿ ಮಾಡಿದ್ದಾರೆ.