Saturday, May 16, 2026
Homeಟಾಪ್ ನ್ಯೂಸ್KICHCHA SUDEEP: ಹೊಸ ಲುಕ್‌ನಲ್ಲಿ ಸ್ಯಾಂಡಲ್‌ವುಡ್‌ ಬಾದ್‌ಷಾ, ಕಿಚ್ಚನ ಸ್ಟೈಲ್‌ಗೆ ಫ್ಯಾನ್ಸ್‌ ಫಿದಾ

KICHCHA SUDEEP: ಹೊಸ ಲುಕ್‌ನಲ್ಲಿ ಸ್ಯಾಂಡಲ್‌ವುಡ್‌ ಬಾದ್‌ಷಾ, ಕಿಚ್ಚನ ಸ್ಟೈಲ್‌ಗೆ ಫ್ಯಾನ್ಸ್‌ ಫಿದಾ

ಬೆಂಗಳೂರು: ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ (Kiccha Sudeep) ಅವರು ತಮ್ಮ ಸ್ಟೈಲ್ ಮತ್ತು ಫ್ಯಾಷನ್ ಸೆನ್ಸ್‌ನಿಂದಲೇ ಸದಾ ಸುದ್ದಿಯಲ್ಲಿರುವವರು. ಇದೀಗ ಅವರ ಲೇಟೆಸ್ಟ್ ಏರ್ಪೋರ್ಟ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹಚ್ಚುತ್ತಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕ್ಲಿಕ್ಕಿಸಲಾದ ಸುದೀಪ್ ಅವರ ಈ ಹೊಸ ಫೋಟೋಗಳು ಈಗ ಸಖತ್ ವೈರಲ್ ಆಗುತ್ತಿವೆ.

 ಹೇಗಿದೆ ಹೊಸ ಲುಕ್?
ಈ ಫೋಟೋಗಳಲ್ಲಿ ಕಿಚ್ಚ ಸುದೀಪ್ ಅತ್ಯಂತ ಹ್ಯಾಂಡ್ಸಮ್ ಆಗಿ ಮತ್ತು ಮೊದಲಿನಿಗಿಂತಲೂ ಹೆಚ್ಚು ಯಂಗ್ ಆಗಿ ಕಾಣಿಸುತ್ತಿದ್ದಾರೆ. ಕಪ್ಪು ಬಣ್ಣದ ಟೀಶರ್ಟ್ ಮೇಲೆ ಮ್ಯಾಚಿಂಗ್ ಜಾಕೆಟ್ ಧರಿಸಿರುವ ಕಿಚ್ಚ, ಅದಕ್ಕೆ ತಿಳಿ ನೀಲಿ ಬಣ್ಣದ ಜೀನ್ಸ್ ತೊಟ್ಟು ಸಖತ್ ಕೂಲ್ ಆಗಿ ಕಾಣುತ್ತಿದ್ದಾರೆ. ಸುದೀಪ್ ಅವರು ಧರಿಸಿರುವ ‘K’ ಅಕ್ಷರದ ಕ್ಯಾಪ್ ಎಲ್ಲರ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ಈ ಕ್ಯಾಪ್ ಅನ್ನು ಅವರು ಉಲ್ಟಾ ಧರಿಸಿದ್ದು, ಅದು ಅವರ ಸ್ಟೈಲ್‌ಗೆ ಮತ್ತಷ್ಟು ಮೆರುಗು ನೀಡಿದೆ. ಕಣ್ಣಿಗೆ ಸನ್ ಗ್ಲಾಸ್ ಧರಿಸಿ ಸುದೀಪ್ ಮಿಂಚುತ್ತಿದ್ದಾರೆ.

ಬದಲಾದ ಹೇರ್ ಸ್ಟೈಲ್
ಇತ್ತೀಚಿನವರೆಗೆ ಕಿಚ್ಚ ಸುದೀಪ್ ಅವರು ತಮ್ಮ ‘ಮಾರ್ಕ್’ ಚಿತ್ರಕ್ಕಾಗಿ ಕರ್ಲಿ ಹೇರ್ ಸ್ಟೈಲ್ ಮಾಡಿಕೊಂಡಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 12ರ ಸಂಪೂರ್ಣ ಜರ್ನಿಯಲ್ಲಿ ಸುದೀಪ್ ಅದೇ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಹೊಸ ರೀತಿಯ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮೂಲಗಳ ಪ್ರಕಾರ, ಸುದೀಪ್ ಅವರ ಈ ಹೊಸ ಮೇಕ್ ಓವರ್ ಅವರ ಮುಂದಿನ ಚಿತ್ರಕ್ಕಾಗಿ ಎನ್ನಲಾಗುತ್ತಿದೆ. ಈ ಸಿನಿಮಾ ರೋಮ್ಯಾಂಟಿಕ್ ಮತ್ತು ಕಾಮಿಡಿ ಕಂಟೆಂಟ್ ಹೊಂದಿರಲಿದ್ದು, ‘ಪುಷ್ಪ’ ಖ್ಯಾತಿಯ ನಿರ್ದೇಶಕ ಸುಕುಮಾರ್ ಅವರ ಶಿಷ್ಯರೊಬ್ಬರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಸದ್ಯಕ್ಕೆ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳದಿದ್ದರೂ, ಕಿಚ್ಚನ ಈ ಹೊಸ ಲುಕ್ ನೋಡಿ ಅಭಿಮಾನಿಗಳು ಹೊಸ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ಕೆಡಿ’ ಸಿನಿಮಾದಲ್ಲಿ ಕಾಲ ಭೈರವನಾದ ಕಿಚ್ಚ ಸುದೀಪ್‌..!

ಸುದೀಪ್ ‘ಕೆಡಿ’ ಸಿನಿಮಾದ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಸುದೀಪ್ ಅವರು ರುದ್ರಾಕ್ಷಿ ಮಾಲೆ ಹಿಡಿದು ಸ್ಟೈಲ್ ಆಗಿ ನಿಂತಿರುವ ಪೋಸ್ಟರ್​ ಅನ್ನು ಕೆವಿಎನ್ ಪ್ರೊಡಕ್ಷನ್ಸ್ ಶೇರ್‌ ಮಾಡಿಕೊಂಡಿದೆ. ‘ಕಾಲ ಭೈವರ’ ಈ ಹೆಸರೇ ಭಯ ಹುಟ್ಟಿಸುತ್ತದೆ’ ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಪ್ರೇಮ್ ಅವರ ‘ದಿ ವಿಲನ್’ ಸಿನಿಮಾದ ನಂತರ ಸುದೀಪ್ ‘ಕೆಡಿ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ : ನಿರ್ಮಾಪಕರ ವಿರುದ್ದ ತೇಜೋವಧೆ ಕೇಸ್‌ – ಕಿಚ್ಚ ಸುದೀಪ್‌ ಪ್ರಕರಣದ ವಿಚಾರಣೆ ಜೂನ್‌ಗೆ ಮುಂದೂಡಿಕೆ!

ಹೆಚ್ಚಿನ ಸುದ್ದಿ

Change Language »
error: Content is protected !!