ಸ್ಯಾಂಡಲ್ವುಡ್ನ (Sandalwood) ದೊಡ್ಡ ನಿರ್ಮಾಪಕ ಕೆ ಮಂಜು ಯಶ್ (Yash) ಸಿನಿಮಾ ಟಾಕ್ಸಿಕ್ (Toxic) ಟೀಸರ್ಗೆ ರಿಯಾಕ್ಟ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಅಭಿನಯದ ಟಾಕ್ಸಿಕ್ ಮೂವಿ ಟೀಸರ್ ನೋಡಿ ಯಶ್ ರೇಂಜ್ ಸಾಮಾನ್ಯದ್ದಲ್ಲ ಎಂದಿದ್ದಾರೆ. ಟೀಸರ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜೊತೆಗೆ ಯಶ್ ಅವರ ರೇಂಜ್ ಇಂದಿನ ದಿನ ಹೇಗಿದೆ ಎಂದು ಸಹ ವಿವರಿಸಿದ್ದಾರೆ. ಯಶ್ ವಿದೇಶಗಳಲ್ಲಿ ಹೊಂದಿರುವ ಅಭಿಮಾನಿಗಳ ಬಗ್ಗೆ ಸಹ ಕೆ ಮಂಜು ಮಾತನಾಡಿದ್ದಾರೆ.
ಧುರಂಧರ್ಗೆ ಟಕ್ಕರ್ ಕೊಟ್ಟ ಮಂಜು
ಯಶ್ ಬೆಳವಣಿಗೆಯನ್ನು ನೋಡಿ ಕೆ. ಮಂಜು ಖುಷಿಪಟ್ಟಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ಹಾಗೂ ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಆ ಕ್ಲ್ಯಾಶ್ ಬಗ್ಗೆ ಕೆ. ಮಂಜು ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಟಾಕ್ಸಿಕ್ ಸಿನಿಮಾವನ್ನು ಧುರಂಧರ್ ಚಿತ್ರಕ್ಕೆ ಹೋಲಿಸಬೇಡಿ. ಧುರಂದರ್ ಒಂದು ಕಂಟೆಂಟ್ ಓರಿಯೆಂಟೆಡ್ ಸಿನಿಮಾ. ಟಾಕ್ಸಿಕ್ ಕೇವಲ ಭಾರತೀಯ ಸಿನಿಮಾ ಅಲ್ಲ. ಇದರ ಕಥೆ ಡಿಫರೆಂಟ್ ಆಗಿರುತ್ತದೆ’ ಎಂದಿದ್ದಾರೆ.
‘ಟಾಕ್ಸಿಕ್ ಮತ್ತು ಧರುಂದರ್ 2 ಕೂಡ ದೊಡ್ಡ ಹಿಟ್ ಆಗುತ್ತವೆ. ಟಾಕ್ಸಿಕ್ ಸಿನಿಮಾವನ್ನು 5 ಸಾವಿರದಿಂದ 6 ಸಾವಿರ ಚಿತ್ರಮಂದಿರಗಳಲ್ಲಿ ಹಾಕಬೇಕು ಅಂತ ಇದ್ದಾರೆ. ಒಂದೆರಡು ಸಾವಿರ ಚಿತ್ರಮಂದಿರ ಕಡಿಮೆ ಆಗಬಹುದು ಬಿಟ್ಟರೆ ಬೇರೆ ಏನೂ ಆಗಲ್ಲ. ಟಾಕ್ಸಿಕ್ ಖಂಡಿತಾ ಬಿಗ್ ಹಿಟ್ ಆಗುತ್ತದೆ’ ಎಂದು ಕೆ. ಮಂಜು ಭವಿಷ್ಯ ನುಡಿದಿದ್ದಾರೆ.
ಯಶ್ಗೆ ಪುನೀತ್ ಜೊತೆ ಸಿನಿಮಾ ಮಾಡುವ ಆಸೆ ಇತ್ತಂತೆ
ಯಶ್ ಬಗ್ಗೆ ಮಾತನಾಡಿದ ಕೆ ಮಂಜು, ಯಶ್ ಗೆ ಅಪ್ಪು ಸರ್ ಜೊತೆ ಸಿನಿಮಾ ಮಾಡಬೇಕು ಎಂಬ ಕನಸ್ಸಿತ್ತು ಆದ್ರೆ ಆ ಭಗವಂತ ಆ ಕನಸ್ಸಿಗೆ ಅವಕಾಶ ಮಾಡಿ ಕೊಡಲಿಲ್ಲ ಎಂದಿದ್ದಾರೆ. ಯಶ್ ನ ಯಾರ್ಯಾರೋ ಏನೇನೋ ಟಾರ್ಗೇಟ್ ಮಾಡಿದ್ರು ಜೊತೆಗೆ ಯಶ್ ಗೆ ಸಿನಿಮಾ ಬಿಟ್ಟ ಬೇರೆ ಏನು ಗೊತ್ತಿಲ್ಲ ಅವನ್ನ ಏನು ಮಾಡೊಕೆ ಆಗಿಲ್ಲ ಎಂದು ಹೇಳಿದ್ದಾರೆ.
ರಾಮ್ ಗೋಪಾಲ್ ವರ್ಮಾಗೆ ಟಾಂಗ್
ಟಾಕ್ಸಿಕ್ ಸಿನಿಮಾವನ್ನು ಯಾರು ಕೂಡ ಟಚ್ ಮಾಡೊಕೆ ಆಗಲ್ಲ, ತಿಳುವಳಿಕೆ ಇರುವ ವರ್ಮಾ ಜಿ ಯಾಕೆ ನೀವು ಈ ರೀತಿ ತಪ್ಪು ಮಾಡ್ತೀರಾ? ಎನ್ನುತ್ತಾ ದುರಂಧರ್ನ ಯಾರೂ ಟಚ್ ಮಾಡೊಕೆ ಆಗಲ್ಲ ಎಂಬ ರಾಮ್ ಗೋಪಾಲ್ ವರ್ಮಾ ಹೇಳಿಕೆಗೆ ಕೆ ಮಂಜು ಟಾಂಗ್ ಕೊಟ್ಟಿದ್ದಾರೆ.
ಧುರಂಧರ್ ಬಗ್ಗೆ ಏನ್ ಹೇಳಿದ್ರು RGV?
‘ಬಾಲಿವುಡ್‌ನತ್ತ ಬರುತ್ತಿರುವ ದಕ್ಷಿಣದ ಆಕ್ರಮಣದ ಬೆಂಕಿಯ ಚೆಂಡನ್ನು ಆದಿತ್ಯ ಧರ್ ಫಿಲ್ಮ್ಸ್ ಎಡಗಾಲಿನಿಂದ ಹಿಂದಕ್ಕೆ ಒದ್ದಿದೆ, ಅದೇ ಧುರಂಧರ್ ಮತ್ತು ಈಗ ಅವರ ಬಲಗಾಲು ಧುರಂಧರ್ 2 ನೊಂದಿಗೆ ಸಿದ್ಧವಾಗುತ್ತಿದೆ. ಮೊದಲನೆಯದು ಅವರನ್ನು ಹೆದರಿಸಿದರೆ, ಎರಡನೆಯದು ಅವರನ್ನು ಭಯಭೀತಗೊಳಿಸುತ್ತದೆ’ ಎಂದು ಆರ್ಜಿವಿ ಹೇಳಿದ್ದರು. ‘ಧುರಂಧರ್ 2ರ ಬೈಟ್ ವಿಷಕಾರಿಯಾಗಿರುತ್ತದೆ’ ಎಂದು ಆರ್ಜಿವಿ ಟ್ವೀಟ್ ಮಾಡಿದ್ರು. ದಕ್ಷಿಣ ಭಾರತದ ಸಿನಿಮಾ ರಂಗದ ವಿರುದ್ಧ ಆರ್ಜಿವಿ ಈ ರೀತಿ ಟ್ವೀಟ್ ಮಾಡಿದ್ದು ಬಹಳಷ್ಟು ಜನರಿಗೆ ಇಷ್ಟವಾಗಿಲ್ಲ.