Monday, August 17, 2026
Homeಟಾಪ್ ನ್ಯೂಸ್SAPTAMI GOWDA: ಸೀರೆಯಲ್ಲಿ ಪೋಸ್‌.. 'ಮುದ್ದಾದ ಮಾಯಾಂಗಿ.. ಮೌನದ ಸಾರಂಗಿ' ಅಂದ್ರು ಫ್ಯಾನ್ಸ್

SAPTAMI GOWDA: ಸೀರೆಯಲ್ಲಿ ಪೋಸ್‌.. ‘ಮುದ್ದಾದ ಮಾಯಾಂಗಿ.. ಮೌನದ ಸಾರಂಗಿ’ ಅಂದ್ರು ಫ್ಯಾನ್ಸ್

ಬೆಂಗಳೂರು: 2022ರಲ್ಲಿ ಭರ್ಜರಿ ಯಶಸ್ಸು ಕಂಡ ಕಾಂತಾರ ಸಿನಿಮಾದ (Sandalwood) ಲೀಲಾ ಯಾರಿಗೆ ತಾನೇ ನೆನಪಿರಲ್ಲ ಹೇಳಿ. ಶಿವನ ಲೀಲಾಳಾಗಿ, ಫಾರೆಸ್ಟ್‌ ಗಾರ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಸಪ್ತಮಿ ಗೌಡ ತಮ್ಮ ಅಭಿನಯದ ಮೂಲಕ ಅಭಿಮಾನಿಗಳನ್ನ ಗಳಿಸಿದ್ದಾರೆ. ಈ ನಟಿ ಸೋಷಿಯಲ್‌ ಮೀಡಿಯಾದಲ್ಲಿ ಬಹಳ ಆಕ್ಟೀವ್‌ ಇದ್ದು ತಮ್ಮ ಫೋಟೋಗಳನ್ನ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಸಪ್ತಮಿ ಗೌಡ (Saptami Gowda) ಸುಂದರವಾದ ಫೋಟೋಗಳನ್ನ ಅವರ ಹಂಚಿಕೊಂಡಿದ್ದಾರೆ.

ಸೀರೆ ಉಟ್ಟು ಪೋಸ್‌ ಕೊಟ್ಟ ಸಪ್ತಮಿ
ನಟಿ ಸಪ್ತಮಿ ಗೌಡ ತಮ್ಮ ಸಿನಿ ಜರ್ನಿಯಲ್ಲಿ ಹೆಚ್ಚು ಸಿನಿಮಾಗಳನ್ನ ಮಾಡದಿದ್ದರೂ ಸಹ ದೊಡ್ಡ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಅದರಲ್ಲೂ ಕಾಂತಾರ ನಂತರ ಸಖತ್‌ ಫೇಮ್‌ ಸಿಕ್ಕಿದೆ. ಇದೀಗ ನಟಿ ತಿಳಿ ಗುಲಾಬಿ ಹಾಗೂ ಸಿಲ್ವರ್‌ ಬಣ್ಣದ ಸೀರೆಯುಟ್ಟು ಪೋಸ್‌ ಕೊಟ್ಟಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳು ಪ್ರಿಟ್ಟಿ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಇನ್ನು ಮತ್ತೊಬ್ಬ ಅಭಿಮಾನಿ Mam ಕಾಂತಾರದಲ್ಲಿ ಇರ್ಲೆಇರೋದು ತುಂಬಾ ಬೇಸರ mam .ನಿಮ್ಮ ದೊಡ್ಡ ಅಭಿಮಾನಿ ಎಂದು ಕಮೆಂಟ್‌ ಹಾಕಿದ್ದಾರೆ.

ಸಪ್ತಮಿ ಸಿನಿ ಜರ್ನಿ
1996ರ ಜೂನ್ 8ರಂದು ಬೆಂಗಳೂರಿನಲ್ಲಿ ಜನಿಸಿದ ಸಪ್ತಮಿ ಅವರು ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಸುಪುತ್ರಿ. ಸಿವಿಲ್ ಇಂಜಿನಿಯರಿಂಗ್  ಪದವಿ ಪಡೆದಿರುವ ಸಪ್ತಮಿ, ಈಜುಗಾರ್ತಿಯಾಗಿ ಸಹ ಹೆಸರು ಪಡೆದುಕೊಂಡಿದ್ದಾರೆ. ಇನ್ನು 2020ರಲ್ಲಿ ತೆರೆಕಂಡ ಡಾಲಿ ಧನಂಜಯ್ ಅಭಿನಯದ ಪಾಪ್​​ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಂತರ 2022ರಲ್ಲಿ ಕಾಂತಾರ ಸಿನಿಮಾ ಮೂಲಕ ದೊಡ್ಡ ಖ್ಯಾತಿ ಗಳಿಸಿಕೊಂಡಿದ್ದಾರೆ.

 

View this post on Instagram

 

A post shared by Sapthami Gowda 🧿 (@sapthami_gowda)

‘ಕಾಂತಾರ’ ಸಿನಿಮಾ ಸಕ್ಸಸ್ ನಂತರ ಸಪ್ತಮಿ ಗೌಡ ಅವರು ‘ವ್ಯಾಕ್ಸಿನ್ ವಾರ್‌’ ಚಿತ್ರದ ಮೂಲಕ ಹಿಂದಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದು, ಸಿನಿಮಾ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಆದರೆ ಆ ಚಿತ್ರ ಸಕ್ಸಸ್ ಪಡೆಯುವಲ್ಲಿ ವಿಫಲವಾಯಿತು.

ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸಪ್ತಮಿ ಗೌಡ ಅವರು ಬಳಿಕ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿಬಿಟ್ಟರು. ಇದೇ ಸಂದರ್ಭದಲ್ಲಿ ಮೂಗತಿ ಸುಂದರಿಗೆ ಮತ್ತೊಂದು ದೊಡ್ಡ ಪ್ರಾಜೆಕ್ಟ್‌ ಕೈಹಿಡಿಯುವ ನಿರೀಕ್ಷೆ ಇತ್ತು. ಆದರೆ ಅದು ಹಾಗಾಗಲಿಲ್ಲ.

ಕನ್ನಡ ಸಿನಿಮಾ ರಂಗದಿಂದ ಬೆಳೆದು, ಹಿಂದಿ ಚಿತ್ರರಂಗದಲ್ಲಿ ಧೂಳೆಬ್ಬಿಸಿದ್ದ ನಟಿಗೆ ತೆಲುಗು ಸಿನಿಮಾ ರಂಗದಲ್ಲಿ ನಟಿಸುವ ಅವಕಾಶ ಒಲಿದುಬಂತು. ವೇಣು ಶ್ರೀರಾಮ್ ನಿರ್ದೇಶನ ಹಾಗೂ ದಿಲ್ ರಾಜು ನಿರ್ಮಾಣ ಮಾಡಿರುವ ತೆಲುಗು ನಟ ನಿತಿನ್ ಅಭಿನಯದ ‘ತಮ್ಮುಡು’ ಚಿತ್ರದಲ್ಲಿ ಕನ್ನಡತಿ ಸಪ್ತಮಿ ಗೌಡ ಅವರು ರತ್ನ ಅನ್ನೋ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳ ನಡುವೆ ನಟಿಗೆ ಸಾಲು ಸಾಲು ಸೋಲುಗಳು ಕಾಡುತ್ತಿವೆ.  ಬರೋಬ್ಬರಿ 75 ಕೋಟಿ ರೂಪಾಯಿ ಖರ್ಚು ಮಾಡಿ ತೆಗೆದಿದ್ದ ‘ತಮ್ಮುಡು’ ಚಿತ್ರ ಭಾರೀ ಸೋಲು ಕಂಡಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ನಟಿಗೆ ಚಿತ್ರದ ಸೋಲು ಆಘಾತವನ್ನೇ ನೀಡಿತ್ತು.

ಇದನ್ನೂ ಓದಿ : ನನ್ನಿಂದ ತಪ್ಪಾಗಿದೆ, ಅಮ್ಮನ ಮೇಲೆ ಆಣೆ ಸರ್ – ಸಪ್ತಮಿ ಗೌಡ ಆಡಿಯೋ ವೈರಲ್

ಹೆಚ್ಚಿನ ಸುದ್ದಿ

Change Language »
error: Content is protected !!