Thursday, July 16, 2026
Homeಟಾಪ್ ನ್ಯೂಸ್RADHIKA PANDIT: ಕರಾವಳಿ ತೀರದಲ್ಲಿ ಕುಳಿತ ರಾಧಿಕಾ ಪಂಡಿತ್, ವೈರಲ್ ಆಯ್ತು ಪೋಸ್ಟ್‌!

RADHIKA PANDIT: ಕರಾವಳಿ ತೀರದಲ್ಲಿ ಕುಳಿತ ರಾಧಿಕಾ ಪಂಡಿತ್, ವೈರಲ್ ಆಯ್ತು ಪೋಸ್ಟ್‌!

ಬೆಂಗಳೂರು: ಸ್ಯಾಂಡಲ್‌ವುಡ್‌ (Sandalwood) ಸಿಂಡ್ರೆಲಾ ನಟಿ ರಾಧಿಕಾ ಪಂಡಿತ್ (Radhika Pandit) ಅವರು ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಆಗಾಗ ತಮ್ಮ ಕುಟುಂಬದ ಸುಂದರ ಕ್ಷಣಗಳು, ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಆದರೆ, ಇತ್ತೀಚೆಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಮಾತ್ರ ಸಖತ್ ಸ್ಪೆಷಲ್ ಆಗಿದ್ದು, ಸದ್ಯ ಭಾರಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಅವರು ಅಪ್‌ಲೋಡ್ ಮಾಡಿರುವ ಆ ಅದ್ಭುತವಾದ ಫೋಟೋ ಮತ್ತು ಅದರ ಕೆಳಗೆ ಬರೆದಿರುವ ಒಂದೇ ಒಂದು ಸಾಲಿನ ಇಂಗ್ಲಿಷ್ ಕ್ಯಾಪ್ಷನ್. ಆ ಸಾಲುಗಳು ಎಲ್ಲರಿಗೂ ಸ್ಪೂರ್ತಿ ನೀಡುವಂತಿದ್ದರೂ, ರಾಧಿಕಾ ಇದ್ದಕ್ಕಿದ್ದಂತೆ ಇಂತಹದ್ದೊಂದು ಮಾತು ಬರೆಯಲು ಕಾರಣವೇನು ಎಂಬ ಕುತೂಹಲ ಈಗ ಅವರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಕರಾವಳಿ ತೀರದಲ್ಲಿ ರಾಧಿಕಾ ಪಂಡಿತ್
ರಾಧಿಕಾ ಪಂಡಿತ್ ಹಂಚಿಕೊಂಡಿರುವ ಆ ಅಪರೂಪದ ಫೋಟೋದಲ್ಲಿ ಒಂದು ಸುಂದರವಾದ ಕಥೆಯೇ ಅಡಗಿದೆ. ಮುಸ್ಸಂಜೆಯ ಹೊತ್ತಿನಲ್ಲಿ ಅವರು ಸಮುದ್ರ ತೀರದಲ್ಲಿ (Beach) ಏಕಾಂಗಿಯಾಗಿ ಕುಳಿತಿರುವಂತೆ ಆ ಫೋಟೋ ಮೂಡಿಬಂದಿದೆ. ವಿಶೇಷವೆಂದರೆ, ರಾಧಿಕಾ ಕುಳಿತಿರುವ ಆ್ಯಂಗಲ್‌ನಿಂದಲೇ ಈ ಫೋಟೋವನ್ನು ಕ್ಲಿಕ್ಕಿಸಲಾಗಿದ್ದು, ಹಿನ್ನೆಲೆಯಲ್ಲಿ ವಿಶಾಲವಾಗಿ ಹರಡಿರುವ ಆಕಾಶವು ಅತ್ಯಂತ ಆಕರ್ಷಕವಾಗಿ ಕವರ್ ಆಗಿದೆ. ನೋಡಿದ ತಕ್ಷಣ ಕಣ್ಣು ಸೆಳೆಯುವ ಈ ಪೋಟೋಗೆ ಸೂಕ್ತವೆನಿಸುವ ಹಾಗೆ ರಾಧಿಕಾ ಅವರು, “The sky only reveals itself fully to those who believe” ಎಂಬ ಇಂಗ್ಲಿಷ್ ಸಾಲನ್ನು ಬರೆದುಕೊಂಡಿದ್ದಾರೆ. ಅಂದರೆ, “ಯಾರು ಸಂಪೂರ್ಣವಾಗಿ ನಂಬುತ್ತಾರೋ, ಅವರಿಗೆ ಮಾತ್ರ ಆಕಾಶವು ತನ್ನ ನೈಜ ಸೌಂದರ್ಯವನ್ನು ತೆರೆದಿಡುತ್ತದೆ” ಎಂಬ ಅರ್ಥವನ್ನು ಈ ಮಾತು ನೀಡುತ್ತದೆ.

 

View this post on Instagram

 

A post shared by Radhika Pandit (@iamradhikapandit)

ಸಾಮಾನ್ಯವಾಗಿ ಇಂತಹ ಸಾಲುಗಳನ್ನು ಜನರನ್ನು ಪ್ರೇರೇಪಿಸಲು ಬಳಸಲಾಗುತ್ತದೆ. ರಾಧಿಕಾ ಅವರು ಯಾವ ಯೋಚನೆಯಲ್ಲಿ ಈ ಸಾಲನ್ನು ಬರೆದಿದ್ದಾರೆ ಎಂಬುದು ನಿಖರವಾಗಿ ತಿಳಿಯದಿದ್ದರೂ, ಅವರು ಹಂಚಿಕೊಂಡಿರುವ ತಾತ್ವಿಕ ಸಂದೇಶ ಮಾತ್ರ ನೆಟ್ಟಿಗರ ಮನಗೆದ್ದಿದೆ. ಆಕಾಶವನ್ನು ಎಷ್ಟು ಆಳವಾಗಿ ನಂಬುತ್ತೇವೆಯೋ, ಅದು ನಮಗೆ ಅಷ್ಟೇ ವಿಶಾಲವಾಗಿ ಕಾಣಿಸುತ್ತದೆ ಎಂಬ ಜೀವನದ ತತ್ವವೂ ಇದರಲ್ಲಿದೆ ಎಂದು ಹೇಳಬಹುದು.

ಫೋಟೋಗೆ ಪ್ಯಾನ್ಸ್‌ಗಳ ಕಮೆಂಟ್‌ ಮಳೆ
ಇನ್ನು ರಾಧಿಕಾ ಪಂಡಿತ್ ಅವರ ಈ ಪೋಸ್ಟ್ ನೋಡಿದ ಅಭಿಮಾನಿಗಳು ಕಮೆಂಟ್ ಬಾಕ್ಸ್‌ನಲ್ಲಿ ಕಾಂಪ್ಲಿಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. ಮುಸ್ಸಂಜೆಯ ಹೊತ್ತಿನ ಈ ನೈಸರ್ಗಿಕ ಸೌಂದರ್ಯಕ್ಕೆ ಮನಸೋತ ಫ್ಯಾನ್ಸ್ ‘ವೆರಿ ಬ್ಯೂಟಿಫುಲ್’ ಎಂದು ಹೊಗಳುತ್ತಾ ರೆಡ್ ಹಾರ್ಟ್ ಎಮೋಜಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆ ಅಭಿಮಾನಿಯೊಬ್ಬರು ‘ಐ ಅಡೋರ್ ಯು ರಾಧ್ಸ್’ ಎಂದು ತಮ್ಮ ನೆಚ್ಚಿನ ನಟಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, ಯಾವುದೇ ಅದ್ದೂರಿತನವಿಲ್ಲದೆ ಸರಳ ಹಾಗೂ ಆಳವಾದ ಅರ್ಥವಿರುವ ರಾಧಿಕಾ ಅವರ ಈ ಹೊಸ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವುದಂತೂ ಸುಳ್ಳಲ್ಲ.

ಇದನ್ನೂ ಓದಿ: ಮೂರನೇ ಬಾರಿಗೆ ಆಮೀರ್ ಖಾನ್ ಮದುವೆ, ಬೆಂಗಳೂರಿನ ಉದ್ಯಮಿ ಗೌರಿಯೊಂದಿಗೆ ನಾಳೆಯೇ ವಿವಾಹ

ಹೆಚ್ಚಿನ ಸುದ್ದಿ

Change Language »
error: Content is protected !!