ಮುಂಬೈ: ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಯಾವಾಗಲೂ ಒಂದೆಲ್ಲಾ ಒಂದು ವಿಚಾರವಾಗಿ ಬಹಳ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ನಾಗಚೈತನ್ಯ (Naga Chaitanya) ಅವರ ಜೊತೆಗಿನ ವಿಚ್ಛೇದನದ (Divorce) ನಂತರ ಅವರ ಜೀವನದಲ್ಲಿ ಅನೇಕ ಬದಲಾವಣೆಗಳಾಗಿದೆ. ಇದೀಗ ಅವರ ಮದುವೆ (Wedding) ವಿಚಾರವಾಗಿ ಸುದ್ದಿಯೊಂದು ಹೊರ ಬಿದ್ದಿದ್ದು, ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಅಕ್ಟೋಬರ್ 6 ರಂದು ಸಮಂತಾ ಮದುವೆ?
ನಟಿ ಸಮಂತಾ ನಾಗ ಚೈತನ್ಯ ಮದುವೆ ಆದರೂ ಸಹ ಸಿಂಗಲ್ ಆಗಿಯೇ ಉಳಿದಿದ್ದರು. ಆದರೆ ಕೆಲ ಸಮಯದಿಂದ ಅವರು ಪ್ರೀತಿಯಲ್ಲಿ ಬಿದ್ದಿರುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಬಾಲಿವುಡ್ ನಿರ್ದೇಶಕ ರಾಜ್ ನಿಧಿಮೋರು ಅವರ ಜೊತೆ ಸಮಂತಾ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ಪುರಾವೆಯಂತೆ ಅವರಿಬ್ಬರು ಎಲ್ಲೆಂದರಲ್ಲಿ ಕಾಣಿಸುತ್ತಾರೆ. ಅಲ್ಲದೇ, ಅವರ ವೈಯಕ್ತಿಕ ಫೋಟೋಗಳು ಸಹ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಸಮಂತಾ ಈ ವರ್ಷವೇ ರಾಜ್ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ಮದುವೆಯಾಗಲಿದ್ದಾರೆ. ಅದರಲ್ಲೂ ಅಕ್ಟೋಬರ್ 6 ರಂದು ಮದುವೆಯಾಗಲು ಅವರು ನಿರ್ಧಾರ ಮಾಡಿದ್ದು, ಇದೇ ದಿನವೇ ಸಮಂತಾ-ನಾಗ ಚೈತನ್ಯ ಸಹ ಮದುವೆ ಆಗಿದ್ದರು. ಅದೇ ದಿನ ಸ್ಯಾಮ್ ಎರಡನೇ ಬಾರಿ ಮದುವೆ ಆಗಲಿದ್ದಾರಂತೆ. ಮಾಹಿತಿಗಳ ಪ್ರಕಾರ ರಾಜ್-ಸಮಂತಾ ಯಾವುದೇ ಆಡಂಭರವಿಲ್ಲದೇ ಬಹಳ ಸರಳವಾಗಿ ಚರ್ಚ್‌ನಲ್ಲಿ ಮದುವೆ ಆಗಲಿದ್ದಾರೆ.
ವೈರಲ್ ಆಗಿದ್ದ ಸ್ಯಾಮ್-ರಾಜ್ ಫೋಟೋ
ಕಳೆದ ಕೆಲ ವರ್ಷಗಳಿಂದ ಸಮಂತಾ ಏನು ಮಾಡಿದರೂ, ಎಲ್ಲಿ ಹೋದರು ಬಹಳ ಸುದ್ದಿಯಾಗಿದ್ದರು. ಡಿವೋರ್ಸ್ ನಂತರ ಬಾಲಿವುಡ್‌ನಲ್ಲಿ ಸಹ ಸಿನಿಮಾ ಮಾಡಿದ ಸಮಂತಾ ಕೆಲ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಅವರ ವೈಯಕ್ತಿಕ ಜೀವನ ಮಾತ್ರ ಯಾವಾಗಲೂ ಸುದ್ದಿಯಲ್ಲಿದೆ. ಅದರಲ್ಲೂ ರಾಜ್ ಹಾಗೂ ಸಮಂತಾ ಅವರ ಡೇಟಿಂಗ್ ವಿಚಾರವಾಗಿ ಗುಸುಗುಸು ಆರಂಭವಾಗಿತ್ತು. ಅದರಲ್ಲೂ ಅವರಿಬ್ಬರು ಎಲ್ಲೇ ಹೋದರು ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಕಾರಣ, ಡೇಟಿಂಗ್ ಅನುಮಾನಕ್ಕೆ ಅದು ಪುಷ್ಠಿ ನೀಡಿತ್ತು. ಸದ್ಯ ಅವರ ಮದುವೆ ವಿಚಾರ ಹರಿದಾಡುತ್ತಿದ್ದು, ಇದರ ಬಗ್ಗೆ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಯಾರಿದು ರಾಜ್ ನಿಧಿಮೋರು?
ಸಮಂತಾ ರುತ್ ಪ್ರಭು ಮತ್ತು ರಾಜ್ ನಿಧಿಮೋರು ನಡುವಿನ ಸಂಬಂಧದ ವದಂತಿಗಳ ನಡುವೆ, ಅವರ ವೈಯಕ್ತಿಕ ಮತ್ತು ವೃತ್ತಿಪರ ಹಿನ್ನೆಲೆಯ ಬಗ್ಗೆ ಅನೇಕ ಜನರಿಗೆ ಗೊತ್ತಿಲ್ಲ. ರಾಜ್ ನಿಧಿಮೋರು ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಜೋಡಿ ರಾಜ್ & ಡಿಕೆ ಭಾಗವಾಗಿದ್ದು, ಹಲವಾರು ಚಲನಚಿತ್ರಗಳು ಮತ್ತು ವೆಬ್ ಸೀರೀಸ್‌ಗಳನ್ನ ನಿರ್ಮಾಣ ಮಾಡಿದೆ. ಈ ಜೋಡಿ ಫ್ಲೇವರ್ಸ್, ಶೋರ್ ಇನ್ ದಿ ಸಿಟಿ, ಗೋ ಗೋವಾ ಗಾನ್, ಎ ಜಂಟಲ್‌ಮನ್, ಸ್ತ್ರೀ, ಅನ್‌ಪಾಸ್ಡ್, ದಿ ಫ್ಯಾಮಿಲಿ ಮ್ಯಾನ್, ಫಾರ್ಜಿ, ಗನ್ಸ್ & ಗುಲಾಬ್ಸ್, ಸಿಟಾಡೆಲ್: ಹನಿ ಬನ್ನಿ, ಮತ್ತು ಇನ್ನೂ ಅನೇಕ ಸಿನಿಮಾ ಹಾಗೂ ವೆಬ್ ಸೀರೀಸ್‌ಗಳನ್ನ ನಿರ್ಮಾಣ ಮಾಡಿದ್ದಾರೆ.
ಇನ್ನೊಂದು ಬಹಳ ಮುಖ್ಯವಾದ ವಿಚಾರ ಎಂದರೆ ರಾಜ್ ನಿಧಿಮೋರು ಈಗಾಗಲೇ ಮದುವೆಯಾಗಿದ್ದು, ಶ್ಯಾಮಲಿ ಡೇ ಎನ್ನುವ ಸಹಾಯಕ ನಿರ್ದೇಶಕಿಯನ್ನು ವಿವಾಹವಾಗಿದ್ದಾರೆ. ಅಲ್ಲದೇ, ಈ ಜೋಡಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ ಎನ್ನಲಾಗಿದೆ.
