ಹೈದರಾಬಾದ್: ಖ್ಯಾತ ನಟಿ ಸಮಂತಾ ರೂತ್ ಪ್ರಭು ಅವರ ತಂದೆ ಜೋಸೆಫ್ ಪ್ರಭು ನಿಧನರಾಗಿದ್ದಾರೆ.
ತಂದೆಯ ನಿಧನದ ಸುದ್ದಿಯನ್ನು ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ನಾವು ಮತ್ತೆ ಭೇಟಿಯಾಗುವವರೆಗೆ, ಅಪ್ಪ..” ಎಂದು ಬರೆದುಕೊಂಡಿದ್ದಾರೆ.
ಸಮಂತಾ ತಂದೆ ನಿಧನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಜೋಸೆಫ್ ನಿಧನದ ಸುದ್ದಿಗೆ ಅಭಿಮಾನಿಗಳು ಮತ್ತು ಹಿತೈಷಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.