ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ ಹಾಕಲಾಗಿದೆ. ಈ ಬಾರಿ ಇ-ಮೇಲ್ ಮಾಡಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಸಲ್ಮಾನ್ ಖಾನ್ ಮುಂಬೈನ ಬಾಂದ್ರಾ ಪೊಲೀಸರಿಗೆ ದೂರು ನೀಡಿದ್ದು., ಗ್ಯಾಂಗ್‌ಸ್ಟರ್‌ಗಳಾದ ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ವಿರುದ್ಧ ಮುಂಬೈ ಪೊಲೀಸರ ಮತ್ತೊಮ್ಮೆ ಕೇಸ್ ದಾಖಲಿಸಿಕೊಂಡಿದ್ದಾರೆ.
ಈಗಾಗಲೇ ಹಲವು ಬಾರಿ ಹಲವು ರೀತಿಯಲ್ಲಿ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಬಂದಿದ್ದು, ಒಮ್ಮೆ ಸಲ್ಮಾನ್ ಖಾನ್ ಹತ್ಯೆಗೂ ಬಿಷ್ಣೋಯ್ ಗ್ಯಾಂಗ್ ಪ್ರಯತ್ನಿಸಿತ್ತು. ಸಲ್ಮಾನ್ ಖಾನ್ ಹತ್ಯೆ ಮಾಡುವುದೇ ನಮ್ಮ ಜೀವನದ ಗುರಿ ಎಂದು ಮೇಲ್ ಮಾಡಿರುವುದಾಗಿ ಹೇಳಲಾಗ್ತಿದೆ.
ಗಾಯಕ ಸಿಧು ಮೂಸೆವಾಲಾ ಹತ್ಯೆ ಕೇಸ್‌ನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಪಾತಕಿ ಲಾರೆನ್ಸ್ ಬಿಷ್ಣೊಯ್, ಸಲ್ಮಾನ್ ಖಾನ್‌ಗೆ ಬೆದರಿಕೆ ಒಡ್ಡುತ್ತಿರುವುದು ಇದೇ ಮೊದಲಲ್ಲ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಲ್ಮಾನ್ ಖಾನ್ ಹತ್ಯೆ ಮಾಡುವುದಾಗಿ 2018ರಲ್ಲಿ ಕೋರ್ಟ್ ಆವರಣದಲ್ಲಿ ಲಾರೆನ್ಸ್ ಬಿಷ್ಣೊಯ್ ಎಚ್ಚರಿಕೆ ನೀಡಿದ್ದ. ಇನ್ನು ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ನಿರ್ದೋಷಿ ಎಂದು ತೀರ್ಪು ಬಂದಿತ್ತು. ಶುಕ್ರವಾರವಷ್ಟೇ ಪಾತಕಿ ಲಾರೆನ್ಸ್ ಬಿಷ್ಣೊಯ್ ಬೆದರಿಕೆ ಒಡ್ಡಿದ್ದಾಗಿ ವರದಿಯಾಗಿತ್ತು. ಇದೀಗ ಮೇಲ್ ಮೂಲಕ ಮತ್ತೆ ಬೆದರಿಕೆ ಬಂದಿದೆ.
ಕೃಷ್ಣಮೃಗ ಬಿಷ್ಣೋಯ್ ಸಮುದಾದ ಆರಾಧ್ಯ ದೈವ. ಹಾಗಾಗಿ ಸಲ್ಮಾನ್ ಖಾನ್ ಮೇಲೆ ಲಾರೆನ್ಸ್ ಬಿಷ್ಣೊಯ್ ದ್ವೇಷ ಸಾಧಿಸುತ್ತಿದ್ದಾರೆ. “ಸಲ್ಮಾನ್ ಖಾನ್, ನೀನು ಗೋಲ್ಡಿ ಬ್ರಾರ್‌ನನ್ನು ಮುಖಾಮುಖಿಯಾಗಿ ಭೇಟಿಯಾಗಬೇಕು. ಇಲ್ಲದಿದ್ದರೇ ಮುಂದಾಗುವ ಅನಾಹುತಕ್ಕೆಲ್ಲಾ ನೀನೆ ಹೊಣೆ.. ಮುಂದಿನ ಸಾರಿ ಖಂಡಿತ” ಎಂದು ಹೇಳಲಾಗಿದ್ದು, ಈ ಮೇಲ್ ಅನ್ನು ಗೋಲ್ಡಿ ಬ್ರಾರ್ ಸಹಾಯಕ ಕಳಿಸಿರುವುದಾಗಿ ಹೇಳಲಾಗುತ್ತಿದೆ..