ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ನಿರಂತರವಾಗಿ ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದು , ಮುಂಬೈ ಪೊಲೀಸರು ಈಗಾಗಲೇ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಈ ನಡುವೆ ಸಲ್ಮಾನ್ ಖಾನ್ ತನ್ನ ಭದ್ರತೆಗಾಗಿ ಹೈ ಎಂಡ್ ಬುಲೆಟ್ ಪ್ರೂಫ್ ಕಾರನ್ನು ಖರೀದಿಸಿದ್ದಾರೆ ಎನ್ನಲಾಗಿದೆ.
ಸದ್ಯ ಭಾರತದಲ್ಲಿ ಲಭ್ಯವಿಲ್ಲದ ಹೈ ಅಂಡ್ ಬುಲೆಟ್ ಪ್ರೂಫ್ ಕಾರಾದ ನಿಸ್ಸಾನ್ ಎಸ್ ಯು ವಿ ಪ್ಯಾಟ್ರಲ್ ಕಾರನ್ನು ಸಲ್ಮಾನ್ ಖರೀದಿಸಿದ್ದಾರೆ ಎನ್ನಲಾಗಿದೆ.
ಸಲ್ಮಾನ್ ಖಾನ್ ಅವರಿಗೆ ನಿರಂತರವಾಗಿ ಗ್ಯಾಂಗ್ ಸ್ಟರ್ ಬಿಷ್ಣೋಯಿ ಮತ್ತು ಸಹಚರರಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಈಗಾಗಲೇ ತನಿಖೆಯನ್ನು ಆರಂಭಿಸಿದ್ದಾರೆ.