Monday, January 19, 2026
Homeಟಾಪ್ ನ್ಯೂಸ್ಅಡಲ್ಟ್ ಕಂಟೆಂಟ್ ಸಿನಿಮಾಗಳ ಬಗ್ಗೆ ಸಲ್ಲು ಗರಂ

ಅಡಲ್ಟ್ ಕಂಟೆಂಟ್ ಸಿನಿಮಾಗಳ ಬಗ್ಗೆ ಸಲ್ಲು ಗರಂ

ಚಿತ್ರೋದ್ಯಮದ ಅನೇಕರಿಗೆ ವರದಾನವಾಗಿರುವ ಓಟಿಟಿ ಬಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಗರಂ ಆಗಿದ್ದಾರೆ. ಈ ವೇದಿಕೆಯಲ್ಲಿ ಬರುವ ಸಿನಿಮಾ, ಸಾಕ್ಷ್ಯಚಿತ್ರ, ವೆಬ್ ಸಿರೀಸ್ ಗಳಿಗೆ ಸೆನ್ಸಾರ್ ಮಾಡಿಸಬೇಕು ಎಂದು ಮೊದಲ ಬಾರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಅಡಲ್ಟ್ ಕಂಟೆಂಟ್ ನಿಂದ ತುಂಬಿರುವ ಓಟಿಟಿಗಳನ್ನು ಕೂಡಲೇ ಭಾರತದಲ್ಲಿ ನಿಲ್ಲಿಸಬೇಕು ಎಂದು ಸಲಹೆ ಮಾಡಿದ್ದಾರೆ.

ಕಿಸ್ಸಿಂಗ್, ಎಕ್ಸ್ ಪೋಸ್, ವಯಸ್ಕರ ಚಿತ್ರಗಳು, ನೀಲಿ ಚಿತ್ರಗಳು, ಅತಿಯಾದ ರೊಮ್ಯಾನ್ಸ್ ಹೊಂದಿದ ದೃಶ್ಯಗಳು ಓಟಿಟಿಯಲ್ಲಿ ಹೇರಳವಾಗಿ ಸಿಗುತ್ತಿವೆ. ನಮ್ಮ ಸುಸಂಸ್ಕøತ ರಾಷ್ಟ್ರವಾದ ಭಾರತದಲ್ಲಿ ಬದುಕುತ್ತಿದ್ದೇವೆ ಎನ್ನುವುದನ್ನು ಮರೆತು ಅಂತಹ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಅದು ಆಗಬಾರದು. ಕೂಡಲೇ ಅಂತಹ ಕಂಟೆಂಟ್ ಅನ್ನು ತೆಗೆದು ಹಾಕಬೇಕು ಎಂದಿದ್ದಾರೆ ಸಲ್ಲು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಚಿತ್ರೋದ್ಯಮಕ್ಕೆ ಯುವ ಪ್ರತಿಭೆಗಳು ಬರುತ್ತಿವೆ. ಅವರೂ ಕಷ್ಟ ಪಡುತ್ತಿದ್ದಾರೆ. ಆದರೂ, ನಾವು ಐದಾರು ಜನ ಅವರಿಗೆ ಸ್ಪರ್ಧೆ ಕೊಡುತ್ತಲೇ ಇರುತ್ತೇವೆ. ಈ ಹೊತ್ತಿನ ನಟರು ಒಂದೋ ಎರಡೋ ಸಿನಿಮಾ ಹಿಟ್ ಆದ ತಕ್ಷಣವೇ ಸಂಭಾವನೆ ಜಾಸ್ತಿ ಮಾಡಿಕೊಳ್ಳುತ್ತಾರೆ. ನಮ್ಮದು ಹಾಗಿರಲಿಲ್ಲ ಎಂದಿದ್ದಾರೆ.

ಸಿನಿಮಾದಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವ ವಿವೇಕವು ಎಲ್ಲರಿಗೂ ಇರಬೇಕು. ದೇಶಭಕ್ತಿ ಸಾರುವಂತಹ, ಸಮಾಜಗಳನ್ನು ಒಂದಾಗಿಸುವಂತಹ ಕಥೆಗಳು ಹೆಚ್ಚಾಗಿ ಬರಲಿ ಎಂದಿದ್ದಾರೆ ಸಲ್ಮಾನ್ ಖಾನ್.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!