Thursday, March 12, 2026
Homeಕ್ರೀಡೆPAKISTAN : ಟಿ20 ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ - ಪಾಕ್ ತಂಡದ ನಾಯಕನ ಸ್ಥಾನಕ್ಕೆ...

PAKISTAN : ಟಿ20 ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ – ಪಾಕ್ ತಂಡದ ನಾಯಕನ ಸ್ಥಾನಕ್ಕೆ ಕುತ್ತು.!

ಪಾಕಿಸ್ತಾನ (Pakistan) ಟಿ20 ಕ್ರಿಕೆಟ್ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಹೆಚ್ಚಾಗಿದೆ. ಟಿ20 ವಿಶ್ವಕಪ್‌ನಲ್ಲಿ (T20 World Cup) ಕಳಪೆ ಪ್ರದರ್ಶನ ತೋರಿದ ಹಿನ್ನಲೆ  ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಸಮಾಧಾನ ವ್ಯಕ್ತಪಡಿಸಿದ್ದು, ನಾಯಕನ ಬದಲಾವಣೆ ಮುಂದಾಗಿದೆ ಎನ್ನಲಾಗಿದೆ.

ಟಿ20 ವಿಶ್ವಕಪ್ ನಲ್ಲಿ ಪಾಕ್ ತಂಡದ ಪ್ರದರ್ಶನದಿಂದ ಪಿಸಿಬಿ ಮುಖ್ಯಸ್ಥ ಮೊಕ್ಸಿನ್ ನಖ್ವಿ ಅಸಮಾಧಾನಗೊಂಡಿದ್ದರು. ಈ ಕಾರಣದಿಂದಾಗಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ತಂಡದ ನಾಯಕತ್ವ ಹಾಗೂ ಆಟಗಾರರ ಆಯ್ಕೆ ಕುರಿತಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಮಂಡಳಿ ಸಿದ್ಧತೆ ನಡೆಸುತ್ತಿದೆ.

ನಾಯಕ ಸಲ್ಮಾನ್ ಅಲಿ ಆಘಾ ಸೇರಿದಂತೆ ಬಾಬರ್ ಆಜಂ ಮತ್ತು ಉಸ್ಮಾನ್ ಖಾನ್ ಸೇರಿದಂತೆ ಅನೇಕ ಅನುಭವಿ ಆಟಗಾರರು ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಇದೇ ಕಾರಣಕ್ಕೆ ಪಾಕ್ ತಂಡ ಟೂರ್ನಿಯಿಂದ ಹೊರಬೀಳುವಂತಾಯಿತು. 

ಹೀಗಾಗಿ ಕೆಲ ಅನುಭವಿ ಆಟಗಾರರನ್ನು ತಂಡದಿಂದ ಕೈಬಿಡುವ ಸಾಧ್ಯತೆಗಳಿದ್ದು,  ಈ ವಿಶ್ವಕಪ್ ಟೂರ್ನಿಯೇ ಕೊನೆಯ ಟೂರ್ನಿಯಾಗುವ ಸಾಧ್ಯತೆ ಇದೆ ಎಂದು ಪಿಸಿಬಿ ಮೂಲಗಳು ಸೂಚಿಸಿವೆ. ಟಿ20 ತಂಡದ ಮುಂದಿನ ನಾಯಕತ್ವವನ್ನು ಆಲ್‌ರೌಂಡರ್ ಶಾದಾಬ್ ಖಾನ್ ಅಥವಾ ಏಕದಿನ ತಂಡದ ನಾಯಕ ಶಾಹೀನ್ ಶಾ ಅಫ್ರಿದಿಗೆ ವಹಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.

ಇದನ್ನೂ ಓದಿ : ಖಮೇನಿ ಹತ್ಯೆ ಹಿನ್ನೆಲೆ – ಪಾಕ್ ನ ಯುಎಸ್ ರಾಯಭಾರ ಕಚೇರಿಗೆ ಬೆಂಕಿ!

ಆಘಾ ನಾಯಕತ್ವದ ಪಾಕಿಸ್ತಾನ ತಂಡವು ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವನ್ನು ಆಯ್ಕೆಗಾರರು ಹಾಗೂ ಆಡಳಿತ ಮಂಡಳಿ ಪಿಸಿಬಿ ಮುಖ್ಯಸ್ಥರಿಗೆ ನೀಡಿದ್ದರೂ, ತಂಡ ನಿರೀಕ್ಷಿತ ಮಟ್ಟದಲ್ಲಿ ಆಡಲು ವಿಫಲವಾಗಿದೆ. ಇದರಿಂದಾಗಿ ನಾಯಕತ್ವ ಬದಲಾವಣೆಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಯುತ್ತಿದೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಈ ಬಗ್ಗೆ ಮುಖ್ಯ ಕೋಚ್ ಮೈಕ್ ಹೆಸನ್ ಹಾಗೂ ಆಯ್ಕೆಗಾರರೊಂದಿಗೆ ಚರ್ಚಿಸಿದ ಬಳಿಕ ಪಿಸಿಬಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. 

ಹೆಚ್ಚಿನ ಸುದ್ದಿ

Change Language »
error: Content is protected !!