Thursday, April 16, 2026
Homeಕ್ರೀಡೆWFI: ಸಂಜಯ್ ಸಿಂಗ್ ವಜಾಗೊಳಿಸಲು ಆಗ್ರಹ: ಸಾಕ್ಷಿ ಮಲಿಕ್ ರಿಂದ ಪ್ರತಿಭಟನೆ ಎಚ್ಚರಿಕೆ

WFI: ಸಂಜಯ್ ಸಿಂಗ್ ವಜಾಗೊಳಿಸಲು ಆಗ್ರಹ: ಸಾಕ್ಷಿ ಮಲಿಕ್ ರಿಂದ ಪ್ರತಿಭಟನೆ ಎಚ್ಚರಿಕೆ

ಹೊಸದಿಲ್ಲಿ: ಕುಸ್ತಿ ಫೆಡರೇಷನ್ ಆಫ್ ಇಂಡಿಯಾದ (WFI) ಅಧ್ಯಕ್ಷ ಸ್ಥಾನದಿಂದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಅವರ ಆಪ್ತ ಸಂಜಯ್ ಸಿಂಗ್ (Sanjay Singh) ಅವರನ್ನು ವಜಾಗೊಳಿಸದೇ ಇದ್ದರೆ ಮತ್ತೊಮ್ಮೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಭಾರತೀಯ ಮಾಜಿ ಕುಸ್ತಿಪಟು (wrestler) ಸಾಕ್ಷಿ ಮಲಿಕ್ (Sakshi Malik) ಎಚ್ಚರಿಕೆ ನೀಡಿದ್ದಾರೆ.

ಕುಸ್ತಿ ಫೆಡರೇಷನ್ ಆಫ್ ಇಂಡಿಯಾದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿ ಪಟುಗಳು ಲೈಂಗಿಕ ಮತ್ತು ಮಾನಸಿಕ ಕಿರುಕುಳದ ಆರೋಪ ಮಾಡಿದ್ದರು. ಇದು ತೀವ್ರ ಪ್ರತಿಭಟನೆಗೆ ಕಾರಣವಾಯಿತು. ಇದರಿಂದ ಸಿಂಗ್ ಅವರನ್ನು ಪದಚ್ಯುತಿ ಮಾಡಲಾಯಿತು. ಬಳಿಕ ಬ್ರಿಜ್ ಭೂಷಣ್ ಸಿಂಗ್ ಸ್ಥಾನಕ್ಕೆ ಸಂಜಯ್ ಸಿಂಗ್ ಅವರನ್ನು ನೇಮಕ ಮಾಡಲಾಯಿತು.

ಮುಖ್ಯಸ್ಥ ಬದಲಾದರೂ ಬ್ರಿಜ್ ಭೂಷಣ್ ಒಕ್ಕೂಟದ ಮೇಲೆ ಪ್ರಭಾವ ಬೀರುವುದನ್ನು ಮುಂದುವರಿಸಿದ್ದರು. ಇದರಿಂದ ಕುಸ್ತಿಪಟುಗಳ ಅಸಮಾಧಾನ ಹೆಚ್ಚಾಗಿದೆ. ಇದರಿಂದ ಸಾಕ್ಷಿ ಮಲಿಕ್ ಕುಸ್ತಿಯನ್ನು ತ್ಯಜಿಸಿದ್ದು, ಇವರೊಂದಿಗೆ ಬಜರಂಗ್ ಪುನಿಯಾ ಸೇರಿದಂತೆ ಅನೇಕ ಕುಸ್ತಿ ಪಟುಗಳು ಸೇರಿಕೊಂಡರು.

ಹೆಚ್ಚಿನ ಸುದ್ದಿ

Change Language »
error: Content is protected !!