ಮುಂಬೈ: ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿನ್ ಆರಾಧ್ಯ ದೈವ,ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಮಾಜಿ ಸಹ ಆಟಗಾರರೊಂದಿಗೆ ಹೋಳಿ ಆಡಿ ಸಂಭ್ರಮಿಸಿದ್ದಾರೆ.ಇಂಡಿಯನ್ ಮಾಸ್ಟರ್ಸ್ ಲೀಗ್ (IML) ಸೆಮಿಫೈನಲ್ ಗೆಲುವಿನ ನಂತರ ಸಚಿನ್ ತೆಂಡೂಲ್ಕರ್ ತಮ್ಮ ಮಾಜಿ ಸಹ ಆಟಗಾರರಾದ ಯುವರಾಜ್ ಸಿಂಗ್, ಅಂಬಟಿ ರಾಯುಡು ಮತ್ತು ಯೂಸುಫ್ ಪಠಾಣ್ ಅವರೊಂದಿಗೆ ಹೋಳಿ ಆಡಿ ಸಂಭ್ರಮಿಸಿದ್ದಾರೆ.
Sachin Tendulkar, Yuvraj Singh and Yusuf Pathan celebrating Holi. 😂👌 pic.twitter.com/PYEaMoNbHV
— Mufaddal Vohra (@mufaddal_vohra) March 14, 2025
ಈ ಸಂಭ್ರಮದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಚಿನ್ ತನ್ನ ಸಹ ಆಟಗಾರರೊಂದಿಗೆ ಹೋಳಿ ಆಡುತ್ತಿರುವುದನ್ನು ಗಮನಿಸಬಹುದು.ಈ ವೇಳೆ ಇನ್ನು ಗಾಢ ನಿದ್ರೆಯಲ್ಲಿದ್ದ ಯುವರಾಜ್ ಸಿಂಗ್ ಮೇಲೆ ನೀರು ಎರಚಿ ಸಚಿನ್ ಸರ್ಪ್ರೈಸ್ ಮಾಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರನ್ನು ಒಟ್ಟೊಟ್ಟಿಗೆ ಒಂದೇ ವಿಡಿಯೋದಲ್ಲಿ ನೋಡಿ ನೆಟ್ಟಿಗರು ಖುಷಿಪಟ್ಟಿದ್ದು ತಮ್ಮ ನೆಚ್ಚಿನ ಕ್ರಿಕೆಟಿಗರಿಗೆ ಹೋಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.