ಕೇರಳ : ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ (Ayyappa swamy temple) ಚಿನ್ನ ಕಳುವಾದ (Gold theft) ಪ್ರಕರಣಕ್ಕೆ ಸಂಬಂಧಪಟ್ಟಣೆ ಶಬರಿಮಲೆಯ ಹಿರಿಯ ತಂತ್ರಿ ಕಂಠರರ್ ರಾಜೀವರ್ ಅವರನ್ನು ಬಂಧಿಸಲಾಗಿದೆ. ಇಂದು (ಜ.9) ಬೆಳಗ್ಗೆ ಅವರನ್ನು ವಿಚಾರಣೆಗೆ ಕರೆಸಿದ ಎಸ್ ಐಟಿ (SIT) ತಂತ್ರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ಡಾಕ್ಟರ್ ಆಗಬೇಕಿದ್ದ ವಿದ್ಯಾರ್ಥಿನಿ ಹೆಣವಾದಳು, ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ಬ*ಲಿ?
ಈ ಚಿನ್ನ ಕಳುವು ಪ್ರಕರಣದಲ್ಲಿ ಹಿಂದಿನಿಂದಲೂ ತಂತ್ರಿಗಳ ಪಾತ್ರದ ಬಗ್ಗೆ ಅನುಮಾನವಿತ್ತು. ಹೀಗಾಗಿ ಅವರು ನಿರೀಕ್ಷಣಾ ಜಾಮೀನು ಪಡೆಯುವ ಅವಕ್ಷ ನೀಡದೆ, ರಹಸ್ಯಾತ್ಮಕವಾಗಿ ಅವರ ಬಗ್ಗೆ ಮಾಹಿತಿ ಕಲೆಹಾಕಿ ಎಲ್ಲಿಯೂ ಅವರ ಹೆಸರು ಉಲ್ಲೇಖಿಸದೆ ಇದುವರೆಗೂ ಗುಟ್ಟಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಬಂಧಿಸಲಾಗಿದೆ.
ಈಗಾಗಲೇ ಬಂಧನವಾಗಿರುವ ಈ ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟ್ಟಿಯನ್ನು ಶಬರಿಮಲೆಗೆ ಕರೆಸಿದ್ದು ಮತ್ತು ಆತ ಚಿನ್ನ ಕಳುವು ಮಾಡಲು ಅವಕಾಶ ಒದಗಿಸಿದ್ದು ತಂತ್ರಿಗಳು ಎಂಬ ಮಾಹಿತಿ ಎಸ್.ಐ.ಟಿ ತನಿಖಾ ತಂಡಕ್ಕೆ ಲಭಿಸಿದೆ. ಹೀಗಾಗಿ ಅದೇ ಆಯಾಮದಲ್ಲಿ ತನಿಖೆ ತೀವ್ರಗೊಳಿಸಲಾಗಿದೆ.