Monday, January 20, 2025
Homeಟಾಪ್ ನ್ಯೂಸ್BY VIJAYENDRA: ಪಕ್ಷ ವಿರೋಧಿ ಚಟುವಟಿಕೆ ಮಾಡುವವರು ಎಷ್ಟೇ ದೊಡ್ಡವರಾದ್ರೂ ನಿರ್ದಾಕ್ಷಿಣ್ಯ ಕ್ರಮ: ವಿಜಯೇಂದ್ರ

BY VIJAYENDRA: ಪಕ್ಷ ವಿರೋಧಿ ಚಟುವಟಿಕೆ ಮಾಡುವವರು ಎಷ್ಟೇ ದೊಡ್ಡವರಾದ್ರೂ ನಿರ್ದಾಕ್ಷಿಣ್ಯ ಕ್ರಮ: ವಿಜಯೇಂದ್ರ

ಕಲಬುರಗಿ: ಪಕ್ಷದಲ್ಲಿ ಯಾರೇ ಎಷ್ಟೇ ದೊಡ್ಡವರಿದ್ದರೂ ಕೂಡ ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಆರ್. ಅಶೋಕ್ ಅವರು ವಿಪಕ್ಷ ನಾಯಕರಿದ್ದಾರೆ. ವರಿಷ್ಠರ ಭೇಟಿಗೆ ದೆಹಲಿಗೆ ಹೋಗಿರಬಹುದು. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಡಿಸೆಂಬರ್ 7 ರಂದು ಕೋರ್ ಕಮಿಟಿ ಸಭೆ ಇದೆ. ಆವತ್ತು ಎಲ್ಲವೂ ಸರಿ ಹೋಗುತ್ತದೆ. ಯತ್ನಾಳ್, ಸೋಮಶೇಖರ್ ಬಗ್ಗೆ ದಿನ ಬೆಳಗಾದರೆ ಮಾತನಾಡೋಕೆ ಹೋಗಲ್ಲ ಎಂದರು.

ಜೆಪಿಸಿ ಕಮಿಟಿಗೆ ಯತ್ನಾಳ್ ಹಾಗೂ ಟೀಂಗೆ ವರದಿ ನೀಡಿದ ವಿಚಾರವಾಗಿ ಮಾತನಾಡಿ, ಪ್ರಧಾನಿ ದೇಶದ ಜನತೆಗೆ ಒಳ್ಳೆಯದಾಗಲಿ ಅಂತ ಕಮಿಟಿ ಮಾಡಿದ್ದಾರೆ. ಯತ್ನಾಳ್ ಅಂತ ಅಲ್ಲ ಯಾರೇ ಆದರೂ ಕಮಿಟಿಗೆ ಮಾಹಿತಿ ನೀಡಬೇಕು. ಕಾರಜೋಳ ನೇತೃತ್ವದಲ್ಲಿ ಈಗಾಗಲೇ ನಾವು ವರದಿ ಕೊಟ್ಟಿದ್ದೇವೆ ಎಂದು ಹೇಳಿದರು.

ವಕ್ಪ್ ವಿಚಾರದಲ್ಲಿ ರೈತರಿಗೆ, ಮಠ ಮಾನ್ಯಗಳಿಗೆ ನೋಟಿಸ್ ನೀಡಲಾಗುತ್ತಿದೆ. ಜಮೀನನ್ನು ಕಿತ್ತುಕೊಳ್ಳುವ ಯತ್ನ ನಡೆಯುತ್ತಿದೆ. ರೈತರನ್ನು ಬೀದಿಗೆ ತರುವ ಕೆಲಸ ಸರ್ಕಾರ ಮಾಡುತ್ತಿದೆ. ರೈತರ ಜಮೀನು ಉಳಿಸಲು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ ಎಂದು ತಿಳಿಸಿದರು.

ಯಡ್ರಾಮಿಯಲ್ಲಿ ವಿದ್ಯಾರ್ಥಿ ಮೇಲೆ ನಡೆದ ಅತ್ಯಾಚಾರ ಹೇಯ ಕೃತ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಈ ಭಾಗದಲ್ಲಿ ಉಸ್ತುವಾರಿ ಸಚಿವರು ಭರವಸೆ ಕಳೆದುಕೊಂಡಿದ್ದಾರೆ‌. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೊಲೆಗಳು, ಅತ್ಯಾಚಾರದಂತಹ ಹೇಯ ಕೃತ್ಯಗಳು ನಡೆಯುತ್ತಿವೆ. ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೋಗ ಬಾಧೆಗೆ ರೈತರ ತೊಗರಿ ಬೆಳೆ ಹಾಳಾಗಿದೆ. ಗ್ಯಾರಂಟಿಯಿಂದ ಜನ ನೆಮ್ಮದಿಯಾಗಿದ್ದಾರೆ ಅಂತಾ ರಾಜ್ಯ ಸರ್ಕಾರ ಸುಮ್ಮನೆ ಕುಳಿತಿದೆ. ಮುಖ್ಯಮಂತ್ರಿ ಈ ಭಾಗಕ್ಕೆ ಬಂದು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಹಾರ ಕೊಡುವ ಕೆಲಸ ಮಾಡಬೇಕು. ಎಕರೆಗೆ 25- 30 ಸಾವಿರ ಬೆಳೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಹೆಚ್ಚಿನ ಸುದ್ದಿ

error: Content is protected !!