Monday, April 13, 2026
Homeಟಾಪ್ ನ್ಯೂಸ್MISSILE: ಭಾರತಕ್ಕೆ ರಷ್ಯಾ ಬಲ : ಇಂಡಿಯಾಗೆ ಬರಲಿದೆ 2 ಯೂನಿಟ್‌ S-400 ಕ್ಷಿಪಣಿ

MISSILE: ಭಾರತಕ್ಕೆ ರಷ್ಯಾ ಬಲ : ಇಂಡಿಯಾಗೆ ಬರಲಿದೆ 2 ಯೂನಿಟ್‌ S-400 ಕ್ಷಿಪಣಿ

ನವದೆಹಲಿ: ಪಾಕಿಸ್ತಾನದ (Pakistan) ವಿರುದ್ಧ ನಡೆ ಆಪರೇಷನ್‌ ಸಿಂದೂರ್‌ ಸಮಯದಲ್ಲಿ ಭಾರತದ ವಾಯು ರಕ್ಷಣಾ ವ್ಯವಸ್ಥೆ ಬಹಳ ಅದ್ಭುತವಾದ ಕೆಲಸಗಳನ್ನ ಮಾಡಿದೆ. ಹಾಗಾಗಿ ಭಾರತದ (India) ವಾಯು ರಕ್ಷಣಾ ವ್ಯವಸ್ಥೆಯನ್ನ ಇನ್ನಷ್ಟು ಗಟ್ಟಿಗೊಳಿಸಲು ರಷ್ಯಾ (Russia) ಹೆಚ್ಚಿನ S-400 ಕ್ಷಿಪಣಿ (Missile) ಯೂನಿಟ್‌ (Unit) ಅನ್ನು ತಲುಪಿಸಲು ಪ್ರಾರಂಭ ಮಾಡುವ ನಿರೀಕ್ಷೆಯಿದೆ. ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯ ವಿತರಣೆಯನ್ನು ವೇಗಗೊಳಿಸಲು ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ.

 ವಿತರಣೆಯಲ್ಲಿ ಆಗಿದ್ದ ವಿಳಂಬ
ಮೂಲಗಳ ಪ್ರಕಾರ, ಒಂದು ಯೂನಿಟ್‌ 2026 ರ ವೇಳೆಗೆ ಭಾರತಕ್ಕೆ ಬರಲಿದ್ದು, ಇನ್ನೊಂದು ಯೂನಿಟ್‌ 2027 ರ ವೇಳೆಗೆ ತಲುಪುವ ನಿರೀಕ್ಷೆಯಿದೆ. ಭಾರತವು 2018 ರಲ್ಲಿ ಐದು ಯೂನಿಟ್‌ಗಳಿಗೆ ಆರ್ಡರ್‌ ಕೊಟ್ಟಿತ್ತು. ಅದರಲ್ಲಿ 2 ಯೂನಿಟ್‌ ಕೊಡುವುದು ಬಾಕಿ ಇತ್ತು. ಇತ್ತೀಚೆಗೆ ನಡೆದ ಭಾರತ-ರಷ್ಯಾ ದ್ವಿಪಕ್ಷೀಯ ಸಭೆಯಲ್ಲಿ ವಿತರಣೆಯಲ್ಲಿ ಆಗಿದ್ದ ವಿಳಂಬದ ಬಗ್ಗೆ ಚರ್ಚೆ ಮಾಡಲಾಗಿತ್ತು.

ಈ ಎರಡರ ಜೊತೆಗೆ, ಭಾರತ ತನ್ನ ಮಹತ್ವಾಕಾಂಕ್ಷೆ ಯೋಜನೆ ಸುದರ್ಶನ ಚಕ್ರವನ್ನ ಅಭಿವೃದ್ಧಿಪಡಿಸಲು ಸಹಾಯ ಮಾಡಬಹುದಾದ  S-400 ವ್ಯವಸ್ಥೆಗಳನ್ನು ಖರೀದಿ ಮಾಡಲು ಸಹ ಯೋಜನೆ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಸಹ ಭಾರತ ರಕ್ಷಣಾ ವ್ಯವಸ್ಥೆಯನ್ನ ಶಕ್ತಿಯುತಗೊಳಿಸಲು ಅನೇಕ ಹೆಜ್ಜೆಗಳನ್ನ ಇಡುತ್ತಿದ್ದು, ಸುಧಾರಿತ ಕಣ್ಗಾವಲು ಮತ್ತು ಸೈಬರ್ ರಕ್ಷಣೆಯನ್ನು  ಯೋಜಿಸಲಾಗುತ್ತದೆ ಎಂದು ಹೇಳಿದ್ದರು.

ಭಾರತವು ಈಗಾಗಲೇ ನಮ್ಮ S-400 ವ್ಯವಸ್ಥೆಯನ್ನು ಹೊಂದಿದೆ. ಈ ಕ್ಷೇತ್ರದಲ್ಲಿಯೂ ನಮ್ಮ ಸಹಕಾರವನ್ನು ವಿಸ್ತರಿಸುವ ಸಾಮರ್ಥ್ಯವಿದೆ. ಅಂದರೆ ಇನ್ನೂ ಹೊಸ ಯೂನಿಟ್‌ಗಳನ್ನ ಕೊಡುವ ಆಲೋಚನೆ ಇದೆ. ಈಗ, ಅದರ ಬಗ್ಗೆ ನಾವು ಮಾತುಕತೆ ಹಂತದಲ್ಲಿದ್ದೇವೆ ಎಂದು ರಷ್ಯಾದ ಫೆಡರಲ್ ಸರ್ವಿಸ್ ಫಾರ್ ಮಿಲಿಟರಿ-ಟೆಕ್ನಿಕಲ್ ಕೋಆಪರೇಷನ್‌ನ ಮುಖ್ಯಸ್ಥ ಡಿಮಿಟ್ರಿ ಶುಗಾಯೇವ್ ಹೇಳಿದ್ದಾರೆ.

ಗೇಮ್‌ ಚೇಂಜರ್‌ ಆಗಿದ್ದ ಎಸ್-400

ಭಾರತದ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಎಪಿ ಸಿಂಗ್ ಆಪರೇಷನ್ ಸಿಂಧೂರ್ ಸಮಯದಲ್ಲಿ ಎಸ್-400  ಗೇಮ್-ಚೇಂಜರ್” ಆಗಿದ್ದು, ಇದು ಭಾರತೀಯ ಪಡೆಗಳಿಗೆ ಅಮೂಲ್ಯವಾದ ಆಸ್ತಿಯಾಗಿದೆ ಎಂದಿದ್ದಾರೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ನಂತರ ಮೇ ತಿಂಗಳಲ್ಲಿ ನಡೆದ ಸಂಘರ್ಷದ ಸಮಯದಲ್ಲಿ ಭಾರತದ ಮೇಲೆ ಗುರಿಯಾಗಿಟ್ಟುಕೊಂಡು ಅನೇಕ ಸ್ಪೋಟಕಗಳನ್ನು ಪಾಕಿಸ್ತಾನ ಹಾರಿಸಿದರೂ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯನ್ನು ಭೇದಿಸಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: ಯಶಸ್ವಿಯಾದ ಅಗ್ನಿ-5 ಕ್ಷಿಪಣಿ ಪರೀಕ್ಷೆ, ಹೆಚ್ಚಾದ ಭಾರತದ ಬಲ – VIDEO

ಇನ್ನು ಈ ಕ್ಷಿಪಣಿ ವ್ಯವಸ್ಥೆಯು 600 ಕಿ.ಮೀ.ವರೆಗಿನ ಶತ್ರುಗಳ ಚಟುವಟಿಕೆಯನ್ನು ಪತ್ತೆಹಚ್ಚಬಲ್ಲದು ಮತ್ತು ಒಟ್ಟಿಗೆ 100 ಕ್ಕೂ ಹೆಚ್ಚು ಗುರಿಗಳನ್ನು ಪತ್ತೆ ಮಾಡುವ ಶಕ್ತಿ ಅದಕ್ಕಿದೆ.  ಇದು ಬಾಂಬರ್‌ಗಳು, ಫೈಟರ್ ಜೆಟ್‌ಗಳು, ಡ್ರೋನ್‌ಗಳು, ವಿಮಾನಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಹ ನಾಶಪಡಿಸುವ ಸಾಮರ್ಥ್ಯವನ್ನ ಹೊಂದಿದೆ.  S-400 ವ್ಯವಸ್ಥೆಯ ಪ್ರತಿಯೊಂದು ರೆಜಿಮೆಂಟ್  ಎಂಟು ಉಡಾವಣಾ ವಾಹನಗಳನ್ನು ಹೊಂದಿದ್ದು, ಪ್ರತಿಯೊಂದೂ ನಾಲ್ಕು ಕ್ಷಿಪಣಿ ಕೊಳವೆಗಳನ್ನು ಹೊಂದಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!