ನವದೆಹಲಿ : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರನ್ನು (Vladimir Putin) ಭಾರತಕ್ಕೆ (INDIA) ಕರೆ ತಂದ ‘ಹಾರುವ ಕ್ರೆಮ್ಲಿನ್’ ವಿಮಾನವು (Flying Kremlin) ಸದ್ಯ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್ ಮಾಡಲಾದ ವಿಮಾನ ಎನಿಸಿಕೊಂಡಿದೆ.
ಭಾರತಕ್ಕೆ ಬರುತ್ತಿರುವ ವಿಮಾನಗಳಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ರವರ ‘ಹಾರುವ ಕ್ರೆಮ್ಲಿನ್’ ವಿಮಾನವೂ ಒಂದು.
‘ಹಾರುವ ಕ್ರೆಮ್ಲಿನ್’ ವಿಶೇಷತೆ
ವಿಶ್ವದಲ್ಲೇ ಅತಿ ಹೆಚ್ಚು ಬಿಗಿ ಭದ್ರತೆ ಹೊಂದಿರುವ ನಾಯಕರಲ್ಲಿ ಪುಟಿನ್ ಕೂಡಾ ಒಬ್ಬರು. ಪುಟಿನ್ ಪ್ರಯಾಣಕ್ಕೆ 390 ಮಿಲಿಯನ್ ಡಾಲರ್ ಮೌಲ್ಯದ ಐಷಾರಾಮಿ ವಿಮಾನ ಬಳಸಲಾಗುತ್ತದೆ.
ಪುಟಿನ್ ಬಳಸುವ ವಿಮಾನ ಎಲ್ಲಾ ರೀತಿಯ ವಾಯು, ಭೂ ದಾಳಿಯಿಂದ ಬರುವ ಬೆದರಿಕೆಗಳನ್ನ ತಡೆದುಕೊಳ್ಳುವ ಶಕ್ತಿ ಹೊಂದಿದೆ. ಪ್ರಯಾಣದ ವೇಳೆ ಯಾವುದೇ ಬೆದರಿಕೆ ಎದುರಿಸಲು ಪುಟಿನ್ ವಿಮಾನವನ್ನು ರಷ್ಯಾದ ಯುದ್ಧ ವಿಮಾನಗಳು ಸುತ್ತುವರೆದಿರುತ್ತವೆ.
ಪುಟಿನ್ ವಿಮಾನದಲ್ಲಿದೆ ಚಿನ್ನ ಲೇಪಿತ ಶೌಚಾಲಯ
ಈ ಐಷಾರಾಮಿ ವಿಮಾನದಲ್ಲಿ ಮತ್ತೊಂದು ವಿಶೇಷವಿದೆ. ಪುಟಿನ್ ವಿಮಾನದಲ್ಲಿನ ಚಿನ್ನದ ಲೇಪಿತ ಶೌಚಾಲಯದ ಆಸನ ಹೊಂದಿದೆ. ಒಂದು ವರದಿಯ ಪ್ರಕಾರ ಪುಟಿನ್ ವಿಮಾನದ ಒಳಭಾಗ ಅರಮನೆಯಂತೆ ಇದೆ. ಇದು ಚರ್ಮದ ಪೀಠೋಪಕರಣಗಳನ್ನ ಹೊಂದಿದೆ.
ಪುಟಿನ್ ವಿಮಾನದಲ್ಲಿ ಖಾಸಗಿ ಕಚೇರಿಗಳು, ಸಮ್ಮೇಳನ ಕೊಠಡಿಗಳನ್ನ ಒಳಗೊಂಡಿದೆ. ಈ ವಿಮಾನದಲ್ಲಿ ವಿಶ್ರಾಂತಿ ಕೊಠಡಿಗಳು, ಮಿನಿ ಜಿಮ್, ಊಟದ ಹಾಲ್, ಬಾರ್, ಶವರ್, ವೈದ್ಯಕೀಯ ಕೊಠಡಿ ಸಹ ಇವೆ.
ಮೋದಿ- ಪುಟಿನ್ ಭೇಟಿ ರಹಸ್ಯ
ತೈಲ ಆಮದು ಬಗ್ಗೆ ಅಮೆರಿಕ ವಿಧಿಸಿರುವ ನಿರ್ಬಂಧಗಳ ಬಗ್ಗೆ ಮೋದಿ- ಪುಟಿನ್ ಚರ್ಚೆ ನಡೆಸಲಿದ್ದಾರೆ.. ಅಷ್ಟೇ ಅಲ್ಲದೆ ಟ್ರಂಪ್ ವಿಧಿಸಿದ ಸುಂಕಾಸ್ತ್ರದ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ದಿಗ್ಗಜ್ಜರು ಸಜ್ಜಾಗಿದ್ದಾರೆ.. ಉಭಯ ರಾಷ್ಟ್ರಗಳ ನಡುವೆ ಶಕ್ತಿ ಸಹಕಾರ ನೀಡುವ ಮೂಲಕ ವಿರೋಧಿಗಳಿಗೆ ಠಕ್ಕರ್ ನೀಡುವುದು.. ರಷ್ಯಾದ ಮಿಲಿಟರಿ ಉಪಕರಣಗಳ ಖರೀದಿಯನ್ನು ಕಡಿಮೆ ಮಾಡಲು ಅಮೆರಿಕದಿಂದ ಒತ್ತಡದ ಹಿನ್ನೆಲೆಯಲ್ಲಿ, ರಷ್ಯಾದೊಂದಿಗೆ ರಕ್ಷಣಾ ಮತ್ತು ಆರ್ಥಿಕ ಸಂಬಂಧ ಗಟ್ಟಿ ಮಾಡಲು ಪ್ಲಾನ್ ಮಾಡಲಾಗಿದೆ.. ಈ ಮೂಲಕ ಅಮೆರಿಕ ವಿಧಿಸಿರುವ ನಿರ್ಬಂಧಕ್ಕೆ ದೊಸ್ತಿಗಳು ಠಕ್ಕರ್ ಕೊಡಲು ಸಜ್ಜಾಗಿದ್ದಾರೆ.. ಇಷ್ಟೇ ಅಲ್ಲದೆ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ನಾಯಕರು ಚರ್ಚೆ ನಡೆಸಲಿದ್ದಾರೆ.. ಪರಮಾಣು ಶಕ್ತಿಗಾಗಿ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ..
ಪುಟಿನ್ ಎಂಟ್ರಿ.. ಪಾಕ್, ಚೀನಾಗೆ ಢವಢವ
ಮೋದಿ ಮತ್ತು ಪುಟಿನ್ ನಡುವಿನ ದ್ವಿಪಕ್ಷೀಯ ಮಾತುಕತೆ ಭಾರೀ ಕುತೂಹಲ ಮೂಡಿಸಿದೆ. ರಷ್ಯಾದಿಂದ ಇನ್ನಷ್ಟು S-400 ಖರೀದಿ ಹಾಗೂ S-500 ಮತ್ತು ಪ್ಯಾಂಟ್ಸಿರ್ ಕ್ಷಿಪಣಿ ವ್ಯವಸ್ಥೆಗಳ ಖರೀದಿ ಬಗೆಗಿನ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನರಿಬುದ್ದಿ ಪಾಕಿಸ್ತಾನ, ಚೀನಾಗೆ ನಡುಕ ಶುರುವಾಗಿದೆ.
ಇದನ್ನೂ ಓದಿ : ಪುಟಿನ್ ತಂಗುವ ದೆಹಲಿ ಹೋಟೆಲ್ ಹೇಗಿದೆ? ರೂಂ ಬಾಡಿಗೆ ಎಷ್ಟು ? ಇಲ್ಲಿದೆ ಮಾಹಿತಿ..
