ನವದೆಹಲಿ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಇಂದು ಭಾರತಕ್ಕೆ (India) ಆಗಮಿಸಿದ್ದಾರೆ. ಭಾರತದ ಜೊತೆ ನಾನಾ ಒಪ್ಪಂದಗಳಿಗೆ ಅಂಕಿತ ಬೀಳುವ ನಿರೀಕ್ಷೆ ಇದೆ.
ಭಾರತಕ್ಕೆ ಬಂದಿಳಿದ ಪುಟಿನ್‌ಗೆ ಭವ್ಯ ಸ್ವಾಗತ ದೊರೆತಿದೆ. ಪುಟಿನ್‌ರನ್ನು ಸ್ನೇಹಪೂರ್ವಕವಾಗಿ ಬರಮಾಡಿಕೊಂಡ ಪ್ರಧಾನಿ ಮೋದಿ ಪುಟಿನ್ ಜೊತೆ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ
ಒಂದೇ ಕಾರಿನಲ್ಲಿ ಹೊರಟ ಪುಟಿನ್-ಮೋದಿ.!#VladimirPutin #russia #NarendraModi #India #Car #newdelhi #KannadaNews #navasamajanews pic.twitter.com/XgIlrV0m7f
— navasamaja (@navasamajanews) December 4, 2025
ಆದರೆ, ಭಾರತಕ್ಕೆ ಹೊರಡುವ ಮೊದಲು ನೀಡಿದ ವಿಶೇಷ ಸಂದರ್ಶನದಲ್ಲಿ ವ್ಲಾಡಿಮಿರ್ ಪುಟಿನ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಸೆಪ್ಟೆಂಬರ್ 1 ರಂದು ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಎಸ್ಸಿಓ ಸಮಿಟ್ ವೇಳೆಯೂ ಪುಟಿನ್, ಮೋದಿ ಒಂದೇ ಕಾರ್ನಲ್ಲಿ ಪ್ರಯಾಣಿಸಿದ್ರು. ಅಂದು ಏನೇನೆಲ್ಲಾ ಚರ್ಚೆ ಆಯ್ತು ಅನ್ನೋ ರಹಸ್ಯವನ್ನು ಪುಟಿನ್ ಈಗ ಬಿಚ್ಚಿಟ್ಟಿದ್ದಾರೆ.
‘ಮೋದಿ ಜೊತೆಗಿನ ಕಾರು ಸವಾರಿ ನನ್ನದೇ ಕಲ್ಪನೆ ಆಗಿತ್ತು. ಅದು ನಮ್ಮ ಸ್ನೇಹದ ಸಂಕೇತವಾಗಿತ್ತು’ ಎಂದು ಹೇಳಿದ್ದಾರೆ.
‘ಮೋದಿ, ನಾನು ಕಾರ್ನಲ್ಲಿ ಭೇಟಿಯಾಗುವುದು ಪೂರ್ವ ಯೋಜಿತ ಕಾರ್ಯಕ್ರಮ ಆಗಿರಲಿಲ್ಲ. ನಾವು ಹೊರಗೆ ಹೆಜ್ಜೆ ಹಾಕಿದೆವು, ನನ್ನ ಕಾರು ಅಲ್ಲಿತ್ತು. ನಾವಿಬ್ಬರೂ ಒಟ್ಟಿಗೆ ಒಂದೇ ಕಾರಿನಲ್ಲಿ ಪ್ರಯಾಣ ಮಾಡೋಣ ಎಂದು ನಾನು ಹೇಳಿದೆ. ಅದಕ್ಕೆ ಅವರು ಒಪ್ಪಿಕೊಂಡು ಒಟ್ಟಿಗೆ ತೆರಳಿದೆವು’ ಎಂದು ಪುಟಿನ್ ಹೇಳಿದ್ದಾರೆ.
‘ನಾವಿಬ್ಬರೂ ಒಳ್ಳೇ ಸ್ನೇಹಿತರು. ಚರ್ಚಿಸಲು ನಮ್ಮ ಮಧ್ಯೆ ಏನಾದರೂ ನಮಗೆ ಇದ್ದೇ ಇರುತ್ತದೆ. ನಾವು ಪ್ರಯಾಣದುದ್ದಕ್ಕೂ ಮಾತನಾಡಿದೆವು’ ಎಂದು ಪುಟಿನ್ ಹೇಳಿದರು. ಮೋದಿ ಸಹ ಈ ಭೇಟಿ ಕುರಿತು ತಮ್ಮ ಎಕ್ಸ್‌ನಲ್ಲಿ ಫೋಟೋ ಪೋಸ್ಟ್ ಮಾಡಿದ್ದರು.
ಕೆಲ ಮೂಲಗಳ ಪ್ರಕಾರ ಪುಟಿನ್ ಅವರು ಪ್ರಧಾನಿ ಮೋದಿ ಜೊತೆ ಶೃಂಗಸಭೆಯ ಸ್ಥಳದಿಂದ ರಿಟ್ಜ್ ಕಾರ್ಲ್ಟನ್ ಹೋಟೆಲ್‌ಗೆ ಪ್ರಯಾಣಿಸಲು ಬಯಸಿದ್ದರು ಮತ್ತು ಅವರಿಗಾಗಿ 10 ನಿಮಿಷಗಳ ಕಾಲ ಕಾದಿದ್ದರು ಎಂದು ಹೇಳಲಾಗಿತ್ತು.
ಹೋಟೆಲ್ ತಲುಪಿದ ನಂತರ ನಾಯಕರು ವಾಹನದಲ್ಲೇ 45 ನಿಮಿಷಗಳ ಕಾಲ ಚರ್ಚಿಸಿದರು. ನಂತರ ಸುಮಾರು ಒಂದು ಗಂಟೆ ಕಾಲ ನಡೆದ ಔಪಚಾರಿಕ ದ್ವಿಪಕ್ಷೀಯ ಸಭೆಗೆ ತೆರಳಿದರು. ಅಲ್ಲಿ ಇಂಧನ, ರಕ್ಷಣೆ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಮಾತನಾಡಿದ್ದರು.
ಭಾರತಕ್ಕೆ ಭರ್ಜರಿ ಗಿಫ್ಟ್ ಕೊಡಲಿದ್ದಾರೆ ಪುಟಿನ್
ತೈಲ ಆಮದು ಬಗ್ಗೆ ಅಮೆರಿಕ ವಿಧಿಸಿರುವ ನಿರ್ಬಂಧಗಳ ಬಗ್ಗೆ ಮೋದಿ- ಪುಟಿನ್ ಚರ್ಚೆ ನಡೆಸಲಿದ್ದಾರೆ. ಅಷ್ಟೇ ಅಲ್ಲದೆ ಟ್ರಂಪ್ ವಿಧಿಸಿದ ಸುಂಕಾಸ್ತ್ರದ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ದಿಗ್ಗಜ್ಜರು ಸಜ್ಜಾಗಿದ್ದಾರೆ.. ರಷ್ಯಾದ Su-57E ಸ್ಟೆಲ್ತ್ ಫೈಟರ್ ಜೆಟ್‌ಗಳು, ಎಸ್ 400, ಎಸ್ 500 ಬಗ್ಗೆ ಒಪ್ಪಂದದ ಜೊತೆಗೆ ತಂತ್ರಜ್ಞಾನ ಹಂಚಿಕೆಗೆ ಪ್ಲಾನ್ ಮಾಡಲಾಗಿದೆ. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಉಭಯ ನಾಯಕರು ಸಜ್ಜಾಗಿದ್ದಾರೆ. ಉತ್ತರ ಸಮುದ್ರ ಮಾರ್ಗವನ್ನ ಹೆಚ್ಚಿಗೆ ಸದುಪಯೋಗ ಪಡಿಸಿಕೊಳ್ಳುವುದು.. ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ತಾಂತ್ರಿಕ ಬೆಂಬಲ ನೀಡುವುದು. ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ವಿನಿಮಯ ಮಾಡಿ, ಜನರ ನಡುವಿನ ಸಂಬಂಧಗಳನ್ನು ಬಲಪಡಿಸುವ ಗುರಿ ಹೊಂದಲಾಗಿದೆ.. ಭಾರತವು ವಿಶ್ವದ ಮೊದಲ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಒಕ್ಕೂಟವನ್ನು ಸ್ಥಾಪಿಸಿ ಪ್ರಾಣಿಗಳನ್ನ ರಕ್ಷಿಸುತ್ತಿದೆ. ಇದರಲ್ಲಿ ರಷ್ಯಾ ಸಹ ಭಾಗವಹಿಸುವ ಸಾಧ್ಯತೆ ಇದೆ.. ಉದ್ಯೋಗಗಳು ಮತ್ತು ವಲಸೆ ಕ್ಷೇತ್ರದಲ್ಲಿ ಪ್ರಮುಖ ಒಪ್ಪಂದಗಳನ್ನ ಮಾಡಲಿದ್ದಾರೆ.. ಇನ್ನು ವೈದ್ಯಕೀಯ ಶಿಕ್ಷಣ, ಸಂಶೋಧನೆಯಲ್ಲಿ ಸಹಕಾರ ನೀಡುವ ಒಪ್ಪಂದ ಮಾಡಿಕೊಲ್ಳುವ ಸಾಧ್ಯತೆ ಇದೆ.