Thursday, March 12, 2026
Homeಟಾಪ್ ನ್ಯೂಸ್RUKMINI VASANTH: ಕಾಲಿವುಡ್​ಗೆ ಹಾರಿದ ರುಕ್ಕು! ಯಂಗ್ ಹೀರೋಗೆ ಕನ್ನಡತಿಯೇ ಹೀರೋಯಿನ್

RUKMINI VASANTH: ಕಾಲಿವುಡ್​ಗೆ ಹಾರಿದ ರುಕ್ಕು! ಯಂಗ್ ಹೀರೋಗೆ ಕನ್ನಡತಿಯೇ ಹೀರೋಯಿನ್

ಕನ್ನಡದ ನಟಿ ರುಕ್ಮಿಣಿ ವಸಂತ್ (rukmini vasanth) ಹವಾ ಜೋರಾಗಿದೆ. ರುಕ್ಮಿಣಿ ವಸಂತ್ ಸದ್ಯ ಕನ್ನಡದ ಜೊತೆಗೆ ಪರಭಾಷೆಯಲ್ಲೂ ಬ್ಯುಸಿ ಇರೋದು ಗೊತ್ತೇ ಇದೆ. ಈಗ ಅವರು ಒಂದು ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಅವರು ತಮಿಳು (Kollywood) ಹೀರೋ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರಂತೆ.

‘ಸಪ್ತ ಸಾಗರದಾಚೆ ಎಲ್ಲೊ’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳು ರುಕ್ಮಿಣಿ ವಸಂತ್ ಅವರಿಗೆ ದೊಡ್ಡ ಮಟ್ಟಿಗಿನ ಗುರುತು, ಜನಪ್ರಿಯತೆ ತಂದುಕೊಟ್ಟಿರುವ ಜೊತೆಗೆ ಹಲವಾರು ಹೊಸ ಅವಕಾಶಗಳನ್ನು ಸಹ ತಂದುಕೊಟ್ಟಿದೆ. ಈಗಾಗಲೇ ಪರ ಭಾಷೆಯ ಕೆಲ ದೊಡ್ಡ ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದು, ಇದೀಗ ತಮಿಳಿನ ಸ್ಟಾರ್ ಯುವ ನಾಯಕನ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸಲು ಸಜ್ಜಾಗಿದ್ದಾರೆ.

ತಮಿಳಿನ ಸ್ಟಾರ್ ಹಿರೋ ಚಿಯಾನ್ ವಿಕ್ರಂ ಅವರ ಪುತ್ರ ಧ್ರುವ ವಿಕ್ರಮ್ ಜೊತೆ ರುಕ್ಮಿಣಿ ವಸಂತ್ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಸಿನಿಮಾಕ್ಕೆ ಖ್ಯಾತ ನಿರ್ಮಾಣ ಸಂಸ್ಥೆ ಆಗಿರುವ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡುತ್ತಿದ್ದಾರೆ. ಧ್ರುವ್, ಪ್ರಸ್ತುತ ತಮಿಳು ಚಿತ್ರರಂಗದ ಬಲು ಜನಪ್ರಿಯ ಯುವ ನಟರಾಗಿದ್ದು, ಇದು ಅವರ ನಾಲ್ಕನೇ ಸಿನಿಮಾ ಆಗಲಿದೆ.

ಇದು ಧ್ರುವ ವಿಕ್ರಂ ಅವರ ನಾಲ್ಕನೇ ಸಿನಿಮಾ ಆಗಿದ್ದು, ಸಿನಿಮಾವನ್ನು ಹೊಸ ನಿರ್ದೇಶಕ ದೀಪಕ್ ರೆಡ್ಡಿ ನಿರ್ದೇಶನ ಮಾಡಲಿದ್ದಾರೆ. ಕಿರು ಚಿತ್ರವೊಂದನ್ನು ನಿರ್ದೇಶಿಸಿ ಗಮನ ಸೆಳೆದಿರುವ ದೀಪಕ್ ರೆಡ್ಡಿ ಈ ಸಿನಿಮಾ ಮೂಲಕ ಸಿನಿಮಾ ನಿರ್ದೇಶಕ ಎನಿಸಿಕೊಳ್ಳಲಿದ್ದಾರೆ.

ತೆಲುಗಿನಲ್ಲೂ ರುಕ್ಮಿಣಿ ವಸಂತ್ ಹವಾ
ಇತ್ತೀಚೆಗೆ ರುಕ್ಮಿಣಿ ವಸಂತ್, ನಾಗ ಚೈತನ್ಯ ಜೊತೆ ಸಿನಿಮಾ ಮಾಡಲು ಮುಂದಾಗಿದ್ರು. ಅದರಲ್ಲೂ ನಾಗ ಚೈತನ್ಯ ಸಿನಿಮಾ ಆಯ್ಕೆಯಲ್ಲಿ ಎಚ್ಚರಿಕೆ ವಹಿಸುತ್ತಾರೆ. ಅವರು ಮಜಿಲಿ, ಲವ್ ಸ್ಟೋರಿ, ಮತ್ತು ಥಂಡೇಲ್‌ನಂತಹ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ.

ನಾಗ ಚೈತನ್ಯ ಚಿತ್ರದಿಂದ ಚಿತ್ರಕ್ಕೆ ಭಿನ್ನತೆ ತೋರಿಸುವ ಮೂಲಕ ಮನರಂಜನೆ ನೀಡುತ್ತಿದ್ದಾರೆ. ‘ಥಂಡೇಲ್’ ಚಿತ್ರದಲ್ಲಿ ನಾಗ ಚೈತನ್ಯ ಅಭಿನಯ ಅತ್ಯುತ್ತಮ ಎಂದು ಬಣ್ಣಿಸಲಾಯಿತು. ಅವರು ಮೀನುಗಾರನಾಗಿ ಅದ್ಭುತವಾಗಿ ನಟಿಸಿದರು. ಈಗ ಇವರ ಹೊಸ ಚಿತ್ರಕ್ಕೆ ಕ್ಲಾಕ್ಸ್ ನಿರ್ದೇಶನ ಮಾಡಲಿದ್ದಾರೆ. ಆ ಚಿತ್ರಕ್ಕೂ ರುಕ್ಮಿಣಿ ವಸಂತ್ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.

ರುಕ್ಮಿಣಿ ವಸಂತ್ ಕನ್ನಡ ಚಿತ್ರರಂಗದ ಈ ಸುಂದರಿ. ತೆಲುಗಿನಲ್ಲಿಯೂ ಒಳ್ಳೆಯ ಕ್ರೇಜ್ ಗಳಿಸಿದ್ದಾರೆ. ಅವರು ಇಲ್ಲಿಯವರೆಗೆ ತೆಲುಗಿನಲ್ಲಿ ಯಾವುದೇ ಸಿನಿಮಾ ಮಾಡಿಲ್ಲ ಆದರೆ ಡಬ್ಬಿಂಗ್ ಚಿತ್ರಗಳಿಂದ ಒಳ್ಳೆಯ ಕ್ರೇಜ್ ಗಳಿಸಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ತೆಲುಗು ವರ್ಷ ಆ ಭಾಗದಲ್ಲಿ ಗಮನ ಸೆಳೆದಿತ್ತು. ಅವರು ಜೂನಿಯರ್ ಎನ್​​ಟಿಆರ್ ನಟನೆಯ ಡ್ರ್ಯಾಗನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಕನಕಾವತಿ ಸಂಭಾವನೆ​ ಕೇಳಿದ್ರೆ ಹುಬ್ಬೇರುತ್ತೆ!
ಟ್ರೆಂಡಿಂಗ್​ ಪಟ್ಟಿಯಲ್ಲಿರುವ ರುಕ್ಮಿಣಿ ವಸಂತ್ ಅವರ ಸಂಭಾವನೆ ವಿಚಾರ ಸದ್ಯ ಟಾಲಿವುಡ್​ ಅಂಗಳದಲ್ಲಿ ಸದ್ದು ಮಾಡುತ್ತಿದೆ. ವರದಿಗಳ ಪ್ರಕಾರ, ಪ್ರಸ್ತುತ ನಟಿಯ ಕೈಯಲ್ಲಿ ಮೂರರಿಂದ ನಾಲ್ಕು ಸಿನಿಮಾಗಳಿವೆ. ‘ಕಾಂತಾರ’ ಚಿತ್ರದ ಬೆನ್ನಲ್ಲೇ ರುಕ್ಮಿಣಿ ಅವರು ತಮ್ಮ ಸಂಭಾವನೆಯನ್ನು ಈಗ ಡಬಲ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಬಾಲಿವುಡ್​ನಂತಹ ಸ್ಟಾರ್​ ನಟಿಯರನ್ನೇ ಹಿಂದಿಕ್ಕಿರುವ ಕನ್ನಡದ ಬ್ಯೂಟಿ, ಪ್ರತಿ ಸಿನಿಮಾಗೆ ಐದು ಕೋಟಿ ರೂ.ಗೂ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಪ್ರತಿದಿನದ ಟ್ರಯಲ್‌ಗೆ ಅವಕಾಶ ನೀಡಬೇಡಿ- ದರ್ಶನ್‌ ಕೇಸ್‌ ಸಂಬಂಧ ಎಸ್‌ಪಿಪಿ ವಾದ

ಹೆಚ್ಚಿನ ಸುದ್ದಿ

Change Language »
error: Content is protected !!