ನವದೆಹಲಿ: ಸ್ವಾತಂತ್ರ್ಯ ಸಿಕ್ಕಿ 7 ದಶಕಗಳ ನಂತರವೂ ಪಾಕಿಸ್ತಾನದಲ್ಲಿರುವ ಜನರು ಸಂತೋಷದಿಂದಿಲ್ಲ. ದೇಶ ಇಬ್ಭಾಗವಾದದ್ದು ತಪ್ಪು ಎನ್ನುವುದು ಅವರಿಗೆ ಅರಿವಾಗಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಭಾರತಕ್ಕೆ ಬಂದವರು ಸಂತೋಷದಿಂದಿದ್ದರೆ, ಪಾಕಿಸ್ತಾನದಲ್ಲಿರುವವರು ಬೇಸರದಲ್ಲಿದ್ದಾರೆ ಎಂದವರು ಹೇಳಿದ್ದಾರೆ.
“ಭಾರತದಿಂದ ಬೇರೆಯಾದವರು, ಇಲ್ಲಿನ ಸಂಸ್ಕೃತಿಯಿಂದ ದೂರವಾದವರು ಸಂತೋಷದಿಂದ ಇರುತ್ತಾರೆಯೇ?” ಎಂದವರು ಪ್ರಶ್ನಿಸಿದರು.
“ಭಾರತ್ ಪಾಕಿಸ್ತಾನದ ಮೇಲೆ ದಾಳಿ ನಡೆಸಬೇಕು ಎಂದು ನಾನು ಹೇಳುವುದಿಲ್ಲ. ಇತರರ ಮೇಲೆ ದಾಳಿ ನಡೆಸಬೇಕು ಎಂದು ಹೇಳುವ ಸಂಸ್ಕೃತಿ ನಮ್ಮದಲ್ಲ. ಆತ್ಮರಕ್ಷಣೆಗಾಗಿ ಸೂಕ್ತ ತಿರುಗೇಟು ನೀಡುವ ಸಂಸ್ಕೃತಿ ನಮ್ಮದು” ಎಂದು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿದರು.