ನಡುರಸ್ತೆಯಲ್ಲೇ ರೌಡಿಗಳು ಹೊಡೆದಾಡಿಕೊಂಡಿರುವ ಘಟನೆ ಚಾಮರಾಜಪೇಟೆಯ ದೋಭಿಘಾಟ್‍ನಲ್ಲಿ ಶನಿವಾರ ನಡೆದಿದೆ. ರೌಡಿಗಳ ಚಲನವಲನಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಾಮರಾಜಪೇಟೆಯ ರೌಡಿ ಶೀಟರ್ ಲೊಡ್ಡೆ ಪ್ರವೀಣನ ಮೇಲೆ, ಕೇಡಿ ಮಂಜ ಮತ್ತವನ ಸಹಚರರು ಹಲ್ಲೆಯೆಸಗಿದ್ದಾರೆ. ಹಣಕಾಸಿನ ವಿಷಯದಲ್ಲಿ ಹಲ್ಲೆ ನಡೆದಿರುವುದಾಗಿ ತಿಳಿದುಬಂದಿದೆ. ಗಾಯಗೊಂಡಿರುವ ಲೊಡ್ಡೆ ಪ್ರವೀಣ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕೆಂಪೇಗೌಡನರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.